ತಮಿಳು ನಟನ ಕನ್ನಡ ಚಿತ್ರಕ್ಕೆ ಶೀರ್ಷಿಕೆ ಸಮಸ್ಯೆ; ಬದಲಾಗಲಿದೆ ಸಿಂಬು ‘ರಿವೈಂಡ್’

collage (4)
Published on

ಬೆಂಗಳೂರು: ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್.ಟಿ.ಆರ್ ನಟನೆಯ ’ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಕನ್ನಡದ ’ರಿವೈಂಡ್’ ಶೀರ್ಷಿಕೆ ಮತ್ತು ಟೀಸರ್‌ನ್ನು ಕಿಚ್ಚ ಸುದೀಪ್ ಅನಾವರಣಗೊಳಿಸಿ ಗೆಳೆಯನಿಗೆ ಶುಭ ಹಾರೈಸಿದ್ದರು. ಆದರೆ ಚಂದನವನದಲ್ಲಿ ಇದೇ ಹೆಸರಿನಲ್ಲಿ ಬೇರೊಂದು ಚಿತ್ರವು ಬಿಡುಗಡೆ ಹಂತಕ್ಕೆ ಬಂದಿದೆ. ವಿಷಯವನ್ನು ತಿಳಿದ ತಂಡವು ಈಗ ಬೇರೆ ಟೈಟಲ್ ಇಡಲು ನಿರ್ಧರಿಸಿದೆ.

ಬುಧವಾರ ಚಿತ್ರದ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಆಗಿದ್ದು, ಕನ್ನಡದ ಟೀಸರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಅದೇ ರೀತಿ ತೆಲುಗಿನಲ್ಲಿ ರವಿತೇಜ, ಹಿಂದಿಯಲ್ಲಿ ಅನುರಾಗ್ ಕಶ್ಯಪ್, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್​ ಅವರವರ ಸೋಷಿಯಲ್ ಮೀಡಿಯಾಗಳಲ್ಲಿ ಟೀಸರ್ ಲಿಂಕ್ ಶೇರ್​ ಮಾಡಿದ್ದಾರೆ.

ವೆಂಕಟ್​ ಪ್ರಭು ಈ ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ನೀಡಿದ್ದಾರೆ. ಸುರೇಶ್​ ಕಮತ್​ಚಿ ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ಲುಕ್​ ಮೂಲಕವೇ ಸಾಕಷ್ಟು ಮಾಡುತ್ತಿರುವ ಮಾನಾಡು, ಸಿನಿಮಾದಲ್ಲಿ ಸಿಂಬು ಡಿಫರೆಂಟ್ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ತಾರಾಗಣದಲ್ಲಿ ಕಲ್ಯಾಣಿ, ಪ್ರಿಯದರ್ಶನ್, ಎಸ್.ಎ.ಚಂದ್ರಶೇಖರ್, ಎಸ್.ಜೆ.ಸೂರ್ಯ, ಪ್ರೇಮ್‌ಗಿಅಮರೆನ್, ಕರುಣಾಕರನ್ ಮುಂತಾದವರು ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net