ಪ್ರೇಮಕಥೆ: ಬಯಸಿದಂಥ ಬಾಳಸಂಗಾತಿ

9-Tara Nagendra gundlupete
Published on

ಬದುಕಿನಲ್ಲಿ ಒಮ್ಮೆಯಾದರೂ ಎಲ್ಲರ ಎದೆಗೂಡಿನಲ್ಲಿ ಅರಳುವ ಪ್ರೇಮ ಒಂದು ಮಧುರ ಕ್ಷಣ. ಪ್ರೇಮ ನಿವೇದನೆಯ ತಲ್ಲಣಗಳು, ಅದಕ್ಕೆ ಬರುವ ಸಕಾರಾತ್ಮಕ ಪ್ರತಿಕ್ರಿಯೆ... ಅದರ ಪರಿಣಾಮವಾಗಿ ಉಂಟಾಗುವ ಉಲ್ಲಾಸ ಇನ್ನಷ್ಟು ಮಧುರ. ಆ ದಿನಗಳ ವಿರಹವೂ ಮಧುರ ಯಾತನೆಯೇ. ಅವೆಲ್ಲವನ್ನೂ ದಾಟಿ ಮದುವೆ ಎಂಬಲ್ಲಿಗೆ ಬಂದು ನಿಂತರೆ ಅದೇ ದೊಡ್ಡ ಖುಷಿ. ಮದುವೆಯ ನಂತರವೂ ಪ್ರೀತಿ ತಾಜಾ ಆಗಿಯೇ ಉಳಿದರಂತೂ ಅದು ಅಮರಪ್ರೇಮ. ಅಂಥ ಪ್ರೇಮದ ಬಗ್ಗೆ ಬರೆದು ಕಳಿಸಿ ಎಂದು ‘ವಿಜಯವಾಣಿ’ ನೀಡಿದ್ದ ಕರೆಗೆ ಸಾವಿರಾರು ಓದುಗರು ಸ್ಪಂದಿಸಿದ್ದಾರೆ. ಆಯ್ದ ಯಶಸ್ವೀ ನೈಜ ಪ್ರೇಮಕಥೆಗಳು ಇಲ್ಲಿವೆ.

ನಮ್ಮದು ಅಂತರ್ಜಾತಿ ಪ್ರೇಮ ವಿವಾಹ. ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಹಿರಿಯರು, ಸ್ನೇಹಿತರು, ಕುಟುಂಬ, ಬಂಧು-ಬಳಗದವರ ಸಮ್ಮುಖದಲ್ಲಿ ನಡೆದ ವಿವಾಹ. ನನ್ನವರನ್ನು ನೋಡಿದ ದಿನದಂದೇ ಅವರ ಬಗೆಗಿನ ನನ್ನ ಪ್ರೀತಿ ಭದ್ರವಾಗಿ ಬೇರೂರಿತು. ನಮ್ಮ ವಿವಾಹವಾಗಿ ಈ ಮೇ 31ಕ್ಕೆ 5 ವರ್ಷವಾಗುತ್ತದೆ. ನಾನು ಬಯಸಿದಂಥ ಬಾಳಸಂಗಾತಿಯನ್ನೇ ಪಡೆದೆ. ಪ್ರೀತಿ ನಮ್ಮ ಬಹುದೊಡ್ಡ ಆಸ್ತಿ. ಬದುಕಿನ ಏರಿಳಿತಗಳಲ್ಲಿ ಸಮಾನವಾಗಿ ಸುಖದುಃಖ ಹಂಚಿಕೊಂಡು ಮುನ್ನಡೆವ ಗುಣ ಇಬ್ಬರಲ್ಲೂ ಇದೆ. ಕಲೆ, ಅಭಿರುಚಿಯಲ್ಲಿ ಸಂಪೂರ್ಣ ಸಮಾನತೆಯೇ ನಮಗೆ ದೇವರು ಕೊಟ್ಟಿರುವ ಬಹು ದೊಡ್ಡ ವರ. ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ, ಸಮಾನತೆ ಬೇಕೆಂದು ಚಿಕ್ಕವಳಿದ್ದಾಗಿನಿಂದ ಬಯಸುತ್ತಿದ್ದೆ, ಜಾತಿಭೇದ ಇಲ್ಲದೆ ಏಕತೆ ಇರಬೇಕು ಎಂಬ ಯೋಚನೆ ನನ್ನದು. ಈ ಎಲ್ಲವನ್ನೂ ಅವರಲ್ಲಿ ಪಡೆದ ನಾನು ನಿಜವಾಗಿಯೂ ಧನ್ಯೆ.

| ತಾರಾ ನಾಗೇಂದ್ರ ಗುಂಡ್ಲುಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net