ಲವ್ ಮಾಕ್ಟೇಲ್ 31 ಜನವರಿ 2020ರಲ್ಲಿ ರಿಲೀಸ್ ಆಗಿದ್ದು, ರೊಮ್ಯಾಂಟಿಕ್ ಚಿತ್ರ. ಈ ಸಿನಿಮಾವನ್ನು ಕೃಷ್ಣ ಮತ್ತು ಮಿಲನಾ ನಾಗರಾಜ್ ನಿರ್ದೇಸಿದ್ದರು. ಆದಿ ಮತ್ತು ಜೋ ಪ್ರೀತಿ ಮಾಡುತ್ತಿರುತ್ತಾರೆ. ಆದರೆ, ಇಬ್ಬರ ಮಧ್ಯೆಯ ಹಣದ ವಿಚಾರಕ್ಕೆ ನಡೆದ ಕಿತ್ತಾಟ ದೂರವಾಗಿಸುತ್ತದೆ. ನಂತರ ಆದಿಗೆ ಪರಿಚಯವಾಗೋದೆ ನಿಧಿ ಅದೇ ಮಿಲನಾ ನಾಗರಾಜ್ ಆಕೆಗೂ ಕ್ಯಾನ್ಸರ್ನಿಂದಾಗಿ ಮೃತಪಡುತ್ತಾಳೆ. ಇದರ ನಂತರ ಬರೋದೆ ಲವ್ ಮಾಕ್ಟೇಲ್ 2, ಈಗ ಲವ್ ಮಾಕ್ಟೇಲ್ 3 ಇದರಲ್ಲಿ ಆದಿ ಮಗುವನ್ನು ದತ್ತು ಪಡೆದುಕೊಳ್ಳುವುದು ಅದಕ್ಕೆ ಎದುರಾಗುವ ಸವಾಲುಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ.