ಸಂಭ್ರಮ ಆಚರಿಸಲು ಹಾಡು ಬಿಡುಗಡೆ; ಲವ್ 360 ಸಿನಿಮಾದಿಂದ ಭೋರ್ಗರೆದು ಹಾಡು ಬಂತು

Love 360
Published on

ಬೆಂಗಳೂರು: ಆ ಹಾಡನ್ನು ಶಶಾಂಕ್ ಅದೇ ದಿನ ಬಿಡುಗಡೆ ಮಾಡುವುದಕ್ಕೂ ಕಾರಣವಿತ್ತು. ಶಶಾಂಕ್ ನಿರ್ದೇ ಶನದ, ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಹಿಟ್ ಚಿತ್ರ ‘ಮೊಗ್ಗಿನ ಮನಸ್ಸು’, 14 ವರ್ಷಗಳ ಹಿಂದೆ ಅದೇ ದಿನ ಬಿಡುಗಡೆಯಾಗಿತ್ತು. ಅದೇ ಕಾರಣಕ್ಕೆ, ಅದೇ ದಿನದಂದು ‘ಲವ್ 360’ ಎಂಬ ತಮ್ಮ ಹೊಸ ಚಿತ್ರದ ‘ಭೋರ್ಗರೆದು’ ಎಂಬ ಮೂರನೇ ಹಾಡನ್ನು ಬಿಡುಗಡೆ ಮಾಡುವುದಕ್ಕೆ ಆಯ್ಕೆ ಮಾಡಿಕೊಂಡಿದ್ದರು ಶಶಾಂಕ್. ಈ ಹಾಡನ್ನು ‘ಲವ್ 360’ ಚಿತ್ರದ ಆತ್ಮ ಎಂದು ಕರೆಯುತ್ತಾರೆ ಶಶಾಂಕ್.

ಏಕೆಂದರೆ, ಈ ಹಾಡು ಚಿತ್ರದ ಆಶಯವನ್ನು ಹೇಳುತ್ತದಂತೆ. ಈ ಚಿತ್ರದಲ್ಲಿ ಶಶಾಂಕ್, ಪ್ರವೀಣ್ ಎಂಬ ಹೊಸಪೇಟೆಯ ಹುಡುಗನನ್ನು ಪರಿಚಯಿಸುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ರಚನಾ ಇಂದರ್ ಇದ್ದಾರೆ. ಸಿಡ್ ಶ್ರೀರಾಮ್ ಹಾಡಿರುವ ‘ಜಗವೇ ನೀನು ...’ ಹಾಡು ತುಂಬಾ ಜನಪ್ರಿಯತೆ ತಂದುಕೊಟ್ಟಿದೆ ಎಂದು ಪ್ರವೀಣ್ ಹೇಳಿದರೆ, ಚಿತ್ರಕ್ಕೆ ಎಲ್ಲ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ’ ಎಂದು ರಚನಾ ಖುಷಿಯಾಗುತ್ತಾರೆ. ಈಗಾಗಲೇ ಚಿತ್ರದ ಸೆನ್ಸಾರ್ ಆಗಿದ್ದು, ಆಗಸ್ಟ್​ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

‘ಮೊಗ್ಗಿನ ಮನಸ್ಸು 2’ ಮಾಡುವಾಸೆ: ದೇವರು ಶಕ್ತಿ ಕೊಟ್ಟರೆ, ‘ಮೊಗ್ಗಿನ ಮನಸ್ಸು 2’ ಮಾಡುವಾಸೆ ಇದೆ ಎನ್ನುತ್ತಾರೆ ಶಶಾಂಕ್. ‘ಆಗಿನ ಕಾಲಕ್ಕೆ ‘ಮೊಗ್ಗಿನ ಮನಸ್ಸು’ ದೊಡ್ಡ ಚಿತ್ರವಾಗಿತ್ತು. ಹೊಸಬರ ಚಿತ್ರವಾದರೂ, ಬಜೆಟ್ ಜಾಸ್ತಿ ಇತ್ತು. ಆ ಚಿತ್ರದಲ್ಲಿ ಆಗಿನ ತಲೆಮಾರಿನ ಯುವಕರ ಕಥೆ ಹೇಳಿದ್ದೆವು. ಅದೇ ತರಹ ‘ಮೊಗ್ಗಿನ ಮನಸ್ಸು 2’ ಚಿತ್ರದಲ್ಲಿ ಈಗಿನ ತಲೆಮಾರಿನ ಕಥೆ ಹೇಳುವ ಆಸೆ ಇದೆ. ಈ ಚಿತ್ರದಲ್ಲೂ ಹೊಸಬರೇ ಇರುತ್ತಾರೆ. ಬಜೆಟ್ ಸಹ ಜಾಸ್ತಿ ಆಗುತ್ತದೆ. ಆ ಚಿತ್ರ ನಿರ್ವಿುಸುವ ದೊಡ್ಡ ನಿರ್ವಪಕರು ಸಿಕ್ಕರೆ ಅಥವಾ ನನಗೇ ಆ ಶಕ್ತಿ ಬಂದರೆ, ನಾನೇ ಆ ಚಿತ್ರ ಮಾಡುತ್ತೀನಿ’ ಎನ್ನುತ್ತಾರೆ ಶಶಾಂಕ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net