ನಾನು ಮಗು ಕಳೆದುಕೊಳ್ಳಲು ಸಿಎಂ ವಿಜಯ್ ಕಾರಣ! ನಟಿ ಜೂಲಿ ಆರೋಪ, ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ! Actor Vijay

ನಾನು ಮಗು ಕಳೆದುಕೊಳ್ಳಲು ಸಿಎಂ ವಿಜಯ್ ಕಾರಣ! ನಟಿ ಜೂಲಿ ಆರೋಪ, ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ! Actor Vijay
ನಾನು ಮಗು ಕಳೆದುಕೊಳ್ಳಲು ಸಿಎಂ ವಿಜಯ್ ಕಾರಣ! ನಟಿ ಜೂಲಿ ಆರೋಪ, ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ! Actor Vijay
Published on

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡು ಮುಖ್ಯಮಂತ್ರಿ ವಿಜಯ್ ವಿರುದ್ಧ ಗಂಭೀರ ಆರೋಪ ಮಾಡಿದ ಬಿಗ್ ಬಾಸ್ ಖ್ಯಾತಿಯ ನಟಿ ಮರಿಯಾ ಜೂಲಿಯಾನ
  • ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ನಡೆಯುತ್ತಿರುವ ಸೈಬರ್ ದಾಳಿಗೆ ವಿಜಯ್​ ಕಾರಣ ಎಂದ ನಟಿ
  • ಡಿಎಂಕೆ ಅಧಿಕಾರದಲ್ಲಿದ್ದಾಗ ಮಾರ್ಚ್ ತಿಂಗಳಲ್ಲಿ ದೂರು ನೀಡಿದ್ದೆ ಆದ್ರೆ ಟಿವಿಕೆ ಅಧಿಕಾರಕ್ಕೆ ಬರುತ್ತಿದ್ದಂತೆ ದೂರು ಮಾಯ
  • ನಾನು ನನ್ನ ಮಗುವನ್ನು ಕಳೆದುಕೊಳ್ಳಲು ವಿಜಯ್ ಅವರೇ ಜವಾಬ್ದಾರರು ಎಂದು ಆರೋಪ ಮಾಡಿದ ನಟಿ ಜೂಲಿ
Actor Vijay : ಬಿಗ್ ಬಾಸ್ ಖ್ಯಾತಿಯ ನಟಿ ಮರಿಯಾ ಜೂಲಿಯಾನ (ಜೂಲಿ), ತಮಿಳುನಾಡು ಮುಖ್ಯಮಂತ್ರಿ ವಿಜಯ್ ಹಾಗೂ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಬೆಂಬಲಿಗರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ನಡೆಯುತ್ತಿರುವ ತೀವ್ರ ಸೈಬರ್ ದಾಳಿ ಮತ್ತು ನಿಂದನೆಗಳ (ಟ್ರೋಲಿಂಗ್) ಕುರಿತು ಜೂಲಿ ಅವರು ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ರಾಜಕೀಯ ಬೆಂಬಲಿಗರಿಂದ ತಮಗೆ ಎದುರಾಗಿರುವ ಈ ಕಿರುಕುಳದ ವಿರುದ್ಧ ಜೂಲಿ ತೀವ್ರ ಆಕ್ರೋಶ ಹೊರಹಾಕಿದ್ದು, ಸದ್ಯ ಈ ವಿಷಯ ತಮಿಳುನಾಡು ರಾಜಕಾರಣ ಮತ್ತು ಸಿನಿಮಾ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ನಟಿಯ ಪ್ರಕಾರ, ಸೈಬರ್ ಬುಲ್ಲಿಂಗ್ (ಅಂತರ್ಜಾಲ ಕಿರುಕುಳ) ವಿರುದ್ಧ ರಕ್ಷಣೆ ಕೋರಿ, ಎಂಟು ಜನರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಈ ಪ್ರಕರಣವನ್ನು ಕ್ರಿಮಿನಲ್ ಪ್ರಕರಣವಾಗಿ ಪರಿಗಣಿಸದೆ ಸಿವಿಲ್ ಪ್ರಕರಣವನ್ನಾಗಿ ದಾಖಲಿಸಿಕೊಳ್ಳಲಾಗುವುದು ಎಂಬ ಮಾಹಿತಿ ಪೊಲೀಸರಿಂದ ತಮಗೆ ಬಂದಿದೆ ಎಂದು ಜೂಲಿ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ (DMK) ಆಡಳಿತ ಮುಗಿದು ಟಿವಿಕೆ (TVK) ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ಪೊಲೀಸರ ಈ ವರ್ತನೆಯ ಬದಲಾವಣೆಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಈ ಇಡೀ ವ್ಯವಸ್ಥಿತ ದಾಳಿಯ ಹಿಂದೆ ಟಿವಿಕೆ ಬೆಂಬಲಿಗನೊಬ್ಬ ಹಾಗೂ ವಕೀಲರೊಬ್ಬರ ಕೈವಾಡವಿದೆ. ಆ ಸಮಯದಲ್ಲಿ ನಾನು ಸುಖಿ ಸಂಸಾರ ನಡೆಸುತ್ತಾ ಗರ್ಭಿಣಿಯಾಗಿದ್ದೆ, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಟಿವಿಕೆ ಬೆಂಬಲಿಗರ ಪಡೆ ನಡೆಸಿದ ಈ ಸಂಘಟಿತ ಸೈಬರ್ ದಾಳಿಯಿಂದಾಗಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ, ನನ್ನ ಮಗುವನ್ನು ಕಳೆದುಕೊಳ್ಳಬೇಕಾಯಿತು (ಗರ್ಭಪಾತವಾಯಿತು). ಅಲ್ಲದೆ, ನನ್ನ ಪತಿಯನ್ನು ಅತ್ಯಂತ ಕೀಳಾಗಿ ನಿಂದಿಸಿದ್ದಾರೆ. ಒಬ್ಬ ಮಹಿಳೆ ಕೇವಲ ವಿಮರ್ಶೆ ಮಾಡಿದಳು ಎಂಬ ಕಾರಣಕ್ಕೆ, ಇಷ್ಟೊಂದು ವಿಕೃತ ಹಾಗೂ ಅತ್ಯಂತ ನಿಂದನೀಯ ರೀತಿಯಲ್ಲಿ ಆಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಗುರಿಯಾಗಿಸಿ ದಾಳಿ ನಡೆಸಿದ್ದಾರೆ ಎಂದು ಜೂಲಿ ತಮಗಾದ ಭೀಕರ ಕಿರುಕುಳವನ್ನು ಬಿಚ್ಚಿಟ್ಟಿದ್ದಾರೆ.
ನಾನು ಡಿಎಂಕೆ (DMK) ಅಧಿಕಾರದಲ್ಲಿದ್ದಾಗ ಮಾರ್ಚ್ ತಿಂಗಳಲ್ಲಿ ಈ ದೂರು ನೀಡಿದ್ದೆ, ಆದರೆ ಈಗ ಟಿವಿಕೆ (TVK) ಅಧಿಕಾರಕ್ಕೆ ಬರುತ್ತಿದ್ದಂತೆ ಆ ದೂರು ಮಾಯವಾಗಿದೆ. ನಾನು ನನ್ನ ಮಗುವನ್ನು ಕಳೆದುಕೊಳ್ಳಲು ವಿಜಯ್ ಅವರೇ ಜವಾಬ್ದಾರರು. ಇದರಲ್ಲಿ ಅವರ ನೇರ ಪಾತ್ರ ಇಲ್ಲದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ಮಹಿಳೆಯನ್ನು ಗುರಿ ಮಾಡಬೇಡಿ ಎಂದು ತಮ್ಮ ಬೆಂಬಲಿಗರಿಗೆ ಅವರು ಸುಲಭವಾಗಿ ಸೂಚಿಸಬಹುದಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ ಎಂದು ಜೂಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಮುಖ್ಯಮಂತ್ರಿ ವಿಜಯ್ ವಿರುದ್ಧ ನಟಿ ಜೂಲಿ ಕಠಿಣ ಪದಬಳಕೆ ಮಾಡಿರುವುದನ್ನು ಹಿರಿಯ ನಟಿ ಅಂಬಿಕಾ ತೀವ್ರವಾಗಿ ಖಂಡಿಸಿದ್ದು, ಜೂಲಿ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net