

ಬೆಂಗಳೂರು: ಯಾವುದೇ ಪೂರ್ವತಯಾರಿ ಇಲ್ಲದೆ ಲಾಂಗ್ ಡ್ರೈವ್ಗೆ ಹೋದಾಗ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈಗ ಅದೇ ವಿಷಯವನ್ನಿಟ್ಟುಕೊಂಡು 'ಲಾಂಗ್ ಡ್ರೈವ್' ಎಂಬ ಚಿತ್ರವೊಂದು ಸದ್ದಿಲ್ಲದೆ ಸಿದ್ಧವಾಗಿದೆ. ಫೆಬ್ರವರಿ 10ಕ್ಕೆ ಬಿಡುಗಡೆಯೂ ಆಗುತ್ತಿದೆ. ಅದಕ್ಕೂ ಮುಂಚಿತವಾಗಿ ಈ ಚಿತ್ರದ ಟ್ರೈಲರ್ ಬಿಡಗುಡೆಯಾಗಿದೆ.
ಇದನ್ನೂ ಓದಿ: ‘ಸಾಕ್ಷಾತ್ಕಾರ’ ಖ್ಯಾತಿಯ ಹಿರಿಯ ನಟಿ ಜಮುನಾ ನಿಧನ …
'ಲಾಂಗ್ ಡ್ರೈವ್' ಚಿತ್ರವನ್ನು ಮಂಜುನಾಥ ಗೌಡ ಅಲಿಯಾಸ್ ಶಬರಿ ಮಂಜು ಅವರು ನಿರ್ಮಿಸಿದ್ದು, ಒಂದು ಪ್ರಮುಖ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ. ಇನ್ನು, ಶ್ರೀರಾಜ್ ಎನ್ನುವವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಅರ್ಜುನ್ ಯೋಗಿ, ಸುಪ್ರೀತಾ ಸತ್ಯನಾರಾಯಣ್, ತೇಜಸ್ವಿನಿ ಪ್ರಕಾಶ್, ಬಲ ರಾಜವಾಡಿ ಸೇರಿದಂತೆ ಹಲವರು ನಟಿಸಿದ್ದಾರೆ.
ತೇಜಸ್ವಿನಿ ಶೇಖರ್ಗೆ ಅನಿರೀಕ್ಷಿತವಾಗಿ ಈ ಪಾತ್ರ ಸಿಕ್ಕಿತಂತೆ. 'ಪ್ರತಿಯೊಬ್ಬರಿಗೂ ಇಷ್ಟವಾಗುವ ಕಥೆ ಇದು. ಮೀರಾ ಎಂಬ ಮುಗ್ದ ಹುಡುಗಿಯ ಪಾತ್ರ' ನನ್ನದು ಎಂದರೆ, ಮತ್ತೊಬ್ಬ ನಟಿ ಸುಪ್ರೀತಾ ಸತ್ಯನಾರಾಯಣ್ ಈ ಚಿತ್ರದಲ್ಲಿ ಡಾಕ್ಟರ್ ಪಾತ್ರ ಮಾಡಿದ್ದಾಗಿ ಹೇಳಿಕೊಂಡರು. 'ತಕ್ಷಣದ ನಿರ್ದಾರದಿಂದ ಎಲ್ಲರ ಜೀವನದಲ್ಲಿ ಏನೆಲ್ಲಾ ಆಗಲಿದೆ ಎಂದು ಹೇಳುವ ಚಿತ್ರ ಇದು ಎಂದು ಅಭಿಪ್ರಾಯಪಡುತ್ತಾರೆ.
ಈ ಚಿತ್ರಕ್ಕೆ ವಿಕಾಸ್ ವಸಿಷ್ಠ ಅವರ ಸಂಗೀತ, ಕಿಟ್ಟಿ ಕೌಶಿಕ್ ಅವರ ಛಾಯಾಗ್ರಹಣವಿದೆ.