

ಈ ಕ್ವಾರಂಟೈನ್ ಟೈಮ್ಲ್ಲಿ ನಾನು ತುಂಬಾ ಸಿನಿಮಾಗಳನ್ನು ನೋಡಿದ್ದೇನೆ. ಅದರಲ್ಲೂ ನನಗೆ ತುಂಬ ಖುಷಿ ಕೊಟ್ಟಿದ್ದೆಂದರೆ ಶಂಕರ್ನಾಗ್ ಅವರ ನಿರ್ದೇಶನದ ‘ಮಾಲ್ಗುಡಿ ಡೇಸ್’ ಸೀರಿಸ್.
ಪ್ರತಿದಿನ ಊಟದ ಸಮಯದಲ್ಲಿ ಅದೇ ಒಂದು ರೊಟೀನ್ ಆಗಿತ್ತು. ದಿನಕ್ಕೊಂದು ಎಪಿಸೋಡ್ ನೋಡಿಯೇ ಮಲಗುತ್ತಿದ್ದಿದ್ದು. ಅದರಲ್ಲಿ ಕುದುರೆಯ ಕಲಾಕೃತಿಯೊಂದನ್ನು ಬ್ರಿಟಿಷರಿಗೆ ಮಾರಾಟ ಮಾಡುವ ಸನ್ನಿವೇಶವೊಂದು ಬರುತ್ತದೆ. ಅದರಲ್ಲಿ ಅವರಿಗೆ ಇವರ ಭಾಷೆ ಬರುವುದಿಲ್ಲ, ಇವರಿಗೆ ಅವರ ಭಾಷೆ ಬರುವುದಿಲ್ಲ. ಆ ಸನ್ನಿವೇಶವಂತೂ ಸಖತ್ ತಮಾಷೆಯಾಗಿತ್ತು. ‘ಮಾಲ್ಗುಡಿ ಡೇಸ್’ ಸೀರಿಸ್ ನೋಡುವಾಗೆಲ್ಲ ನಮ್ಮದೇ ಹಳ್ಳಿಯ ದೃಶ್ಯ ಅನಿಸುತ್ತದೆ. ಈ ಲಾಕ್ಡೌನ್ನಲ್ಲಿ ಟೈಮ್ಾಸ್ ಮಾಡಲು ನಾನು ‘ವಿಜಯವಾಣಿ’ ಓದುಗರಿಗೂ ಮಾಲ್ಗುಡಿ ಡೇಸ್ ಸೀರಿಸ್ ಶಿಫಾರಸು ಮಾಡುತ್ತೇನೆ. ಏಕೆಂದರೆ ಇದು ಹಲವಾರು ವರ್ಷಗಳ ಹಿಂದೆ ನಿರ್ವಿುಸಿದ್ದಾದರೂ ಈಗಿನ ಕಾಲಕ್ಕೂ ಹೊಸತೆಂಬಂತೆಯೇ ಇದೆ. ಅಲ್ಲದೆ ದಿನಕ್ಕೊಂದು ಕಥೆಯಂತೆ ಎಪಿಸೋಡ್ ಇರುವುದರಿಂದ ಒಂದು ದಿನ ಮಿಸ್ ಆದರೂ ಅಂಥ ಸಮಸ್ಯೆ ಅನಿಸುವುದಿಲ್ಲ. ಎಲ್ಲಕ್ಕಿಂತ ಹೆಚ್ಚು, ಮುಜುಗರ ಎನಿಸುವಂಥ ಯಾವುದೇ ಸನ್ನಿವೇಶ ಇಲ್ಲ. ಲಾಕ್ಡೌನ್ನಲ್ಲಿ ಎಲ್ಲರೂ ಮನೆಯಲ್ಲೇ ಇರುವುದರಿಂದ ಕುಟುಂಬಸಮೇತರಾಗಿ ಒಟ್ಟಿಗೇ ನೋಡಲು ಇದು ಅತ್ಯಂತ ಸೂಕ್ತ.
| ಹರಿಪ್ರಿಯಾ ನಟಿ
ಲಾಕ್ಡೌನ್ ಸಂದರ್ಭದಲ್ಲಿ ನೀವು ಯಾವ ಸಿನಿಮಾ ನೋಡಿದಿರಿ? ಅದು ನಿಮಗೆ ಇಷ್ಟವಾಗಿದ್ದರೆ ವಿಜಯವಾಣಿ ಓದುಗರಿಗೂ ಸೂಕ್ತ ವಿವರಣೆಯೊಂದಿಗೆ ಶಿಫಾರಸು ಮಾಡಿ. ನಿಮ್ಮ ಶಿಫಾರಸನ್ನು vmlcinivani@gmail.comಗೆ ಕಳುಹಿಸಿಕೊಡಿ.