

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಿಖಿಲ್ ನಾಗೇಶ್ ಭಟ್ ನಿರ್ದೇಶನದ, ಲಕ್ಷ$್ಯ ತಾನ್ಯಾ, ರಾವ್ ಜುಯೆಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಆ್ಯಕ್ಷನ್ ಥ್ರಿಲ್ಲರ್ "ಕಿಲ್' ಶುಕ್ರವಾರ ರಿಲೀಸ್ ಆಗಿದೆ. ವಿಶೇಷ ಅಂದರೆ ರಿಲೀಸ್ಗೂ ನಾಲ್ಕು ದಿನ ಮುನ್ನವೇ ಚಿತ್ರತಂಡಕ್ಕೆ ಶುಭಸುದ್ದಿ ದೊರೆತಿದೆ. ಹಾಲಿವುಡ್ನ ಸೂಪರ್ಸ್ಟಾರ್ ಕಿಯಾನು ರೀವ್ಸ್ ಅಭಿನಯದ "ಜಾನ್ ವಿಕ್' ಖ್ಯಾತಿಯ ನಿರ್ದೇಶಕ ಚಾಡ್ ಸ್ಟಹೆಲ್ಸ್ಕಿ "ಕಿಲ್' ಚಿತ್ರದ ಇಂಗ್ಲೀಷ್ ರಿಮೇಕ್ ನಿರ್ಮಿಸುವುದಾಗಿ ಘೋಷಣೆ ಮಾಡಿದ್ದಾರೆ. 87 ಇಲೆವೆನ್ ಎಂಟರ್ಟೇನ್ಮೆಂಟ್ ಮತ್ತು ಲಯನ್ಸ್ಗೇಟ್ ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ "ಕಿಲ್' ಹಾಲಿವುಡ್ ರಿಮೇಕ್ ನಿರ್ಮಿಸಲಿವೆ. ಹಾಗಂತ ಭಾರತೀಯ ಸಿನಿಮಾವೊಂದು ಹಾಲಿವುಡ್ನಲ್ಲಿ ರಿಮೇಕ್ ಆಗುತ್ತಿರುವುದು ಇದೇ ಮೊದಲೇನಲ್ಲ. ಈಗಾಗಲೇ ಹಲವು ಚಿತ್ರಗಳು ಇಂಗ್ಲೀಷ್ನಲ್ಲಿ ಹೊಸ ರೂಪ ಪಡೆದು, ವಿಶ್ವಾದ್ಯಂತ ಪ್ರೇಕ್ಷಕರನ್ನು ತಲುಪಿವೆ, ರಂಜಿಸಿವೆ.
10 ಭಾಷೆಗಳಲ್ಲಿ "ದೃಶ್ಯಂ' ಅನಾವರಣ
ಮೋಹನ್ ಲಾಲ್ ನಟಿಸಿದ್ದ, ಜೀತು ಜೋಸ್ೆ ನಿರ್ದೇಶಿಸಿದ್ದ 2013ರ ಹಿಟ್ ಮಲಯಾಳಂ ಸಿನಿಮಾ "ದೃಶ್ಯಂ', ಈಗಾಗಲೇ ಕನ್ನಡ, ಹಿಂದಿ, ತೆಲುಗು, ಸಿಂಹಳ, ಮಂಡಾರಿನ್ ಭಾಷೆಗಳಲ್ಲಿ ರಿಮೇಕ್ ಆಗಿದೆ. ಅದರ ಬೆನ್ನಲ್ಲೇ ಇದೀಗ ಕೊರಿಯನ್, ಸ್ಪ್ಯಾನಿಶ್ ಮತ್ತು ಇಂಗ್ಲೀಷ್ನಲ್ಲಿ ರಿಮೇಕ್ ಆಗಲಿದ್ದು, ಸದ್ಯ ಪ್ರಿ&ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಜತೆಗೆ "ದೃಶ್ಯಂ' ರಿಮೇಕ್ ಹಕ್ಕುಗಳನ್ನು ಖರೀದಿಸಿರುವ ಪನೋರಮಾ ಸ್ಟುಡಿಯೋಸ್ ಸಂಸ್ಥೆ ಮುಂದಿನ ಐದು ವರ್ಷಗಳಲ್ಲಿ ವಿಶ್ವಾದ್ಯಂತ 10 ಭಾಷೆಗಳಲ್ಲಿ ಈ ಸಿನಿಮಾ ನಿರ್ಮಿಸಲು ಯೋಜನೆ ಮಾಡಿಕೊಂಡಿದೆ.
"ಫಿಯರ್' ಆಯಿತು "ಡರ್'
ಶಾರುಖ್ ಖಾನ್ ನಾಯಕನಾಗಿದ್ದ 1993ರ ಸಿನಿಮಾ "ಡರ್' ಬಾಕ್ಸಾಫಿಸಿನಲ್ಲಿ ಭರ್ಜರಿ ಗಳಿಕೆ ಮಾಡಿಕೊಂಡಿತ್ತು. ಜತೆಗೆ ಶಾರುಖ್ಗೆ ಸ್ಟಾರ್ ಪಟ್ಟ ನೀಡಿತ್ತು. ಆ ಚಿತ್ರದಿಂದ ಸ್ಪೂರ್ತಿ ಪಡೆದಿದ್ದ ಹಾಲಿವುಡ್ ನಿರ್ದೇಶಕ ಜೇಮ್ಸ್ ಾಲೆ 1996ರಲ್ಲಿ "ಫಿಯರ್' ಸಿನಿಮಾ ಮಾಡಿದ್ದರು. ಅದರಲ್ಲಿ ಮಾರ್ಕ್ ವಾಹ್ಲ್ರ್ಬಗ್ ಶಾರುಖ್ ಪಾತ್ರದಲ್ಲಿ ಹಾಗೂ ರೀಸ್ ವಿದರ್ಸ್ಪೂನ್, ಜೂಹಿ ಚಾವ್ಲಾ ಪಾತ್ರದಲ್ಲಿ ನಟಿಸಿದ್ದರು.
ಓಲ್ಡ್ ಈಸ್ ಗೋಲ್ಡ್
1976ರಲ್ಲಿ ಬಸು ಚಟರ್ಜಿ ನಿರ್ದೇಶಿಸಿದ್ದ "ಛೋಟಿ ಸೀ ಬಾತ್' ಚಿತ್ರದಿಂದ ಸ್ಪೂರ್ತಿ ಪಡೆದು ಹಾಲಿವುಡ್ ನಿರ್ದೇಶಕ ಆ್ಯಂಡಿ ಟೆನ್ನಂಟ್ 2005ರಲ್ಲಿ "ಹಿಚ್' ಸಿನಿಮಾ ಮಾಡಿದ್ದರು. ವಿಲ್ ಸ್ಮಿತ್ ಮತ್ತು ಈವಾ ಮೆಂಡಿಸ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಚಿತ್ರವಿದು. ಕ್ರಮೇಣ ಅದೇ ಸಿನಿಮಾ ಮತ್ತೆ 2007ರಲ್ಲಿ "ಪಾರ್ಟನರ್'ಆಗಿ ಬಾಲಿವುಡ್ನಲ್ಲಿ ರಿಮೇಕ್ ಆಗಿತ್ತು. ಈ ರಿಮೇಕ್ನಲ್ಲಿ ಸಲ್ಮಾನ್ ಖಾನ್, ಗೋವಿಂದ ಮತ್ತು ಕತ್ರಿನಾ ಕ್ೈ ನಟಿಸಿದ್ದರು.
ಕಾಮನ್ ಮ್ಯಾನ್ ಆಯಿತು ಎ ವೆನಸ್ಡೇ
ನೀರಜ್ ಪಾಂಡೆ ನಿರ್ದೇಶನದಲ್ಲಿ ನಾಸಿರುದ್ದೀನ್ ಶಾ ಮತ್ತು ಅನುಪಮ್ ಖೇರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ "ಎ ವೆನಸ್ಡೇ' ಸಿನಿಮಾ 2008ರಲ್ಲಿ ರಿಲೀಸ್ ಆಗಿತ್ತು. 2013ರಲ್ಲಿ ರಿಲೀಸ್ ಆದ ಅದರ ಇಂಗ್ಲೀಷ್ ರಿಮೇಕ್ನಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ನಟಿ ಬೆನ್ ಕಿಂಗ್ಸ್ಲಿ ಮತ್ತು ಬೆನ್ ಕ್ರಾಸ್ ನಟಿಸಿದ್ದರು. ಹಾಲಿವುಡ್ ರಿಮೇಕ್ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಹಾಲಿವುಡ್ನಲ್ಲಿ ಜಬ್ ವಿ ಮೆಟ್
ಶಾಹಿದ್ ಕಪೂರ್, ಕರೀನಾ ಕಪೂರ್ ನಟಿಸಿದ್ದ, ಇಮ್ತಿಯಾಜ್ ಅಲಿ ನಿರ್ದೇಶಿಸಿದ್ದ ರೊಮ್ಯಾಂಟಿಕ್ ಕಾಮಿಡಿ "ಜಬ್ ವಿ ಮೆಟ್' 2007ರಲ್ಲಿ ರಿಲೀಸ್ ಆಗಿತ್ತು. ಅದರಿಂದ ಸ್ಪೂರ್ತಿ ಪಡೆದ "ಲೀಪ್ ಇಯರ್' ಎಂಬ ಹಾಲಿವುಡ್ ಸಿನಿಮಾ 2010ರಲ್ಲಿ ಬಿಡುಗಡೆಯಾಯಿತು. ಆನಂದ್ ಟಕ್ಕರ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಏಮಿ ಅಡಮ್ಸ್ ಮತ್ತು ಮ್ಯಾಥ್ಯೂ ಗೂಡ್ ನಟಿಸಿದ್ದರು.
ರಿಮೇಕ್ ಆಗಿರುವ ಚಿತ್ರಗಳು
ರಾಜ್ ಕಪೂರ್ 1964ರಲ್ಲಿ ನಟಿಸಿ ನಿರ್ದೇಶಿಸಿದ್ದ ಹಿಟ್ ಸಿನಿಮಾ "ಸಂಗಮ್', 2001ರಲ್ಲಿ "ಪರ್ಲ್ ಹಾರ್ಬರ್' ಹೆಸರಿನಲ್ಲಿ ರಿಮೇಕ್ ಆಗಿತ್ತು. ಬಾಲಿವುಡ್ನ "ವಿಕ್ಕಿ ಡೋನರ್', ಹಾಲಿವುಡ್ನಲ್ಲಿ "ಡೆಲಿವರಿ ಮ್ಯಾನ್' ಆಗಿದೆ. "ಮೈನೆ ಪ್ಯಾರ್ ಕ್ಯೂ ಕಿಯಾ', "ಜಸ್ಟ್ ಗೋ ವಿತ್ ಇಟ್' ಆಗಿದೆ. "ಲೇಡೀಸ್ ವರ್ಸಸ್ ವಿಕ್ಕಿ ಬೆಹ್ಲ್'& "ದ ಅದರ್ ವಿಮೆನ್', "ಅಭಯ್' & "ಕಿಲ್ ಬಿಲ್', "ರಂಗೀಲಾ' & "ವಿನ್ ಎ ಡೇಟ್ ವಿತ್ ಟ್ಯಾಡ್ ಹ್ಯಾಮಿಲ್ಟನ್', 1997ರ ತೆಲುಗು ಸಿನಿಮಾ "ಆಹ್ವಾನಮ್' ಹಾಲಿವುಡ್ನಲ್ಲಿ "ದ ಡಿವೋರ್ಸ್ ಇನ್ವಿಟೇಷನ್' ಆಗಿದೆ. 1964ರ "ಚಾರುಲತಾ', 2005ರಲ್ಲಿ "ಾರ್ಟಿ ಶೇಡ್ಸ್ ಆ್ ಬ್ಲೂ' ಎಂಬ ಹೆಸರಿನಲ್ಲಿ ರಿಮೇಕ್ ಆಗಿದೆ.