ಕನ್ನಡತಿ ಮುಡಿಗೆ ಮಿಸಸ್ ಯೂನಿವರ್ಸ್ ಕಿರೀಟ ! ಲಯನ್ ಸತ್ಯವತಿ ಬಸವರಾಜ್ ಸಾಧನೆ...

ಎಲ್ಲ ವಿಭಾಗಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ಮತ್ತು ಅನೇಕ ಟಾಸ್ಕ್ಗಳಲ್ಲಿ ಭಾಗಿಯಾಗಿ ತಮ್ಮ ಪ್ರತಿಭೆ ಮತ್ತು ಕೌಶಲ್ಯದಿಂದ `ಮಿಸಸ್ ಯೂನಿವರ್ಸ್' ಗೆದ್ದು ಬೀಗಿದ್ದಾರೆ. ವಿಶೇಷ ಅಂದರೆ ಈ ಕಾರ್ಯಕ್ರಮದಲ್ಲಿ ಮಸ್ಕಟ್‌ನ ರಕ್ಷಣಾ ಸಚಿವರು ಸಹ ಭಾಗಿಯಾಗಿದ್ದರು.
3c276704-7990-4586-adff-835fb867c7ee
Published on

ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್, ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಗಳಂತೆಯೇ ಮದುವೆಯಾದ ಗೃಹಿಣಿಯರಿಗೆಂದೇ ಮಿಸಸ್ ಇಂಡಿಯಾ, ಮಿಸಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಗಳು ಆಗಾಗ ನಡೆಯುತ್ತವೆ. ಇತ್ತೀಚೆಗಷ್ಟೇ `ಏಷಿಯಾ ಪೆಸಿಫಿಕ್ ಇಂಟರ್‌ನ್ಯಾಷನಲ್ ಫ್ಯಾಷನ್ ಶೋ ೨೦೨೨' ದೂರದ ಮಸ್ಕಟ್‌ನಲ್ಲಿ ನಡೆಯಿತು. ಭಾರತ, ಓಮನ್, ಫಿಲಪ್ಪೀನ್ಸ್, ಇರಾನ್, ಇಂಡೋನೇಷಿಯಾ, ಸೂಡಾನ್, ಶ್ರೀಲಂಕಾ ಸೇರಿದಂತೆ ಹಲವಾರು ದೇಶಗಳಿಂದ ಈ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದರು. ವಿಶೇಷ ಅಂದರೆ ಈ ಅಂತಾರಾಷ್ಟಿçÃಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಕನ್ನಡತಿ ಲಯನ್ ಸತ್ಯವತಿ ಬಸವರಾಜ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಎಲ್ಲ ವಿಭಾಗಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ಮತ್ತು ಅನೇಕ ಟಾಸ್ಕ್ಗಳಲ್ಲಿ ಭಾಗಿಯಾಗಿ ತಮ್ಮ ಪ್ರತಿಭೆ ಮತ್ತು ಕೌಶಲ್ಯದಿಂದ `ಮಿಸಸ್ ಯೂನಿವರ್ಸ್' ಗೆದ್ದು ಬೀಗಿದ್ದಾರೆ. ವಿಶೇಷ ಅಂದರೆ ಈ ಕಾರ್ಯಕ್ರಮದಲ್ಲಿ ಮಸ್ಕಟ್‌ನ ರಕ್ಷಣಾ ಸಚಿವರು ಸಹ ಭಾಗಿಯಾಗಿದ್ದರು.

ಸೌಂದರ್ಯ ಸ್ಪರ್ಧೆಗಳು ಲಯನ್ ಸತ್ಯವತಿ ಬಸವರಾಜ್ ಅವರಿಗೆ ಹೊಸದೇನಲ್ಲ. ಏಕೆಂದರೆ ಅವರು ಈ ಹಿಂದೆ ಡಾರ್ಜಲಿಂಗ್ ಮಿಸಸ್ ಕರ್ನಾಟಕ, ಮಿಸಸ್ ಎಲಿಗೆಂಟ್ ಸೇರಿದಂತೆ ಕೆಲವು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಟೈಟಲ್‌ಗಳನ್ನು ಗೆದ್ದಿದ್ದರು. ವಯಸ್ಸು ಎಂಬುದು ಸಂಖ್ಯೆಯಷ್ಟೇ, ಸಾಧನೆಗೆ ಅದು ಗಣನೆಯಲ್ಲ ಎಂಬುದನ್ನು ಸತ್ಯವತಿ ನಿರೂಪಿಸಿದ್ದಾರೆ. ಪ್ರತಿಷ್ಠಿತ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಸಹ ಅವರನ್ನು ಅಭಿನಂದಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net