More

    ಗ್ಲಾಮರ್​ಗೂ ಜೈ, ಹಾರರ್​ಗೂ ಸೈ: ರಚನಾಗೆ ಅನುಷ್ಕಾ ಶೆಟ್ಟಿ ತರಹ ಆಗಬೇಕಂತೆ!

    ‘ಲವ್ ಮಾಕ್ಟೇಲ್’ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಚೆಲುವೆ ರಚನಾ ಇಂದರ್. ಈಕೆ ರಶ್ಮಿಕಾ ಮಂದಣ್ಣ ಬಳಿಕ ಭರವಸೆ ಮೂಡಿಸಿರುವ ಮತ್ತೊಬ್ಬ ಕೊಡಗಿನ ಸುಂದರಿ. ಸದ್ಯ ‘ಲವ್ 360’ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಅವರು ‘ವಿಜಯವಾಣಿ’ ಜತೆ ಮಾತಿಗೆ ಸಿಕ್ಕರು.

    ‘ಹೊಸಬರ ಚಿತ್ರವಾಗಿರುವ ಕಾರಣ ವಿಮರ್ಶೆ ನೋಡಿ ಜನ ಈಗೀಗ ಥಿಯೇಟರ್​ಗಳಿಗೆ ಬರುತ್ತಿದ್ದಾರೆ. ಕೆಲವೆಡೆ ಹೌಸ್​ಫುಲ್ ಕೂಡ ಆಗುತ್ತಿದೆ. ಆದರೆ, ವಾರದಿಂದ ವಾರಕ್ಕೆ ಹೆಚ್ಚೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿರುವ ಕಾರಣ, ಜನ ಚಿತ್ರಮಂದಿರಕ್ಕೆ ಬರುವ ಮುನ್ನವೇ ನಮ್ಮ ಚಿತ್ರವನ್ನು ತೆಗೆದು ಬೇರೆ ಸಿನಿಮಾ ಹಾಕುವ ಸಾಧ್ಯತೆಯಿದೆ. ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರವೇ ಇಲ್ಲದಿದ್ದರೆ ಜನ ನೋಡಲು ಹೇಗೆ ಸಾಧ್ಯ? ಹೀಗಾಗಿಯೇ ಎರಡು ವಾರ ಸಮಯ ಕೊಡಿ ಅಂತ ಥಿಯೇಟರ್ ಮಾಲೀಕರನ್ನು ಕೇಳಿಕೊಳ್ಳುತ್ತೇನೆ’ ಎನ್ನುತ್ತಾರೆ.

    ‘ಲವ್ ಮಾಕ್ಟೇಲ್’ ಸರಣಿ, ‘ಹರಿಕಥೆ ಅಲ್ಲ ಗಿರಿಕಥೆ’, ‘ಲವ್ 360’ ಚಿತ್ರಗಳ ಬಳಿಕ ರಚನಾ ಇಂದರ್ ನಟ ಗಣೇಶ್ ಜತೆ ‘ತ್ರಿಬಲ್ ರೈಡಿಂಗ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಚಿತ್ಕಲಾ ಬಿರಾದಾರ್, ರಂಗಾಯಣ ರಘು ಅವರ ಮಗಳ ಪಾತ್ರದಲ್ಲಿ ನಟಿಸಿದ್ದೇನೆ. ಮುದ್ದಾಗಿ ಬೆಳೆದ ಬಜಾರಿ ಹುಡುಗಿಯ ಪಾತ್ರ ನನ್ನದು. ಚಿಕ್ಕಮಗಳೂರಿನ ಹಿನ್ನಲೆಯಲ್ಲಿ ನಡೆಯುವ ಸ್ಟೋರಿ’ ಎಂದು ಪಾತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ ರಚನಾ.

    ಹಾಗಾದರೆ ಮುಂದೆ? ‘ಸದ್ಯ ಕನ್ನಡದ ದೊಡ್ಡ ನಿರ್ಮಾಣ ಸಂಸ್ಥೆಯ ಚಿತ್ರವೊಂದಕ್ಕೆ ಸೈನ್ ಮಾಡಿದ್ದೇನೆ. ಆದರೆ, ಅವರು ಘೋಷಣೆ ಮಾಡುವ ಮುನ್ನವೇ ನಾನು ಏನೂ ಹೇಳುವ ಹಾಗಿಲ್ಲ. ಹಾಗೆಯೇ ಬೇರೆ ಭಾಷೆಗಳಿಂದಲೂ ಅವಕಾಶಗಳು ಬರುತ್ತಿವೆ. ‘ಲವ್ ಮಾಕ್ಟೇಲ್’ ಸಮಯದಲ್ಲಿ ‘ಡಾರ್ಲಿಂಗ್’ ಕೃಷ್ಣ ದೊಡ್ಡ ನಿರ್ಮಾಣ ಸಂಸ್ಥೆ ಅಥವಾ ಹೆಸರಾಂತ ನಿರ್ದೇಶಕರು ಅಥವಾ ಒಳ್ಳೆಯ ತಾರಾಗಣವಿದ್ದರೆ ಮಾತ್ರ ಪರಭಾಷೆಗೆ ಹೋಗು ಎಂದಿದ್ದರು. ಹೀಗಾಗಿ ನಾನು ಯಾವುದನ್ನೂ ಒಪ್ಪಿಕೊಂಡಿಲ್ಲ. ಸದ್ಯಕ್ಕೆ ಬ್ರೇಕ್​ನಲ್ಲಿದ್ದೇನೆ’ ಎನ್ನುತ್ತಾರೆ.

    ಎರಡನೇ ವರ್ಷದ ಪದವಿ ಓದುವಾಗಲೇ ಚಿತ್ರರಂಗಕ್ಕೆ ಬಂದ ರಚನಾ, ಶಿಕ್ಷಣವನ್ನೂ ಮುಂದುವರಿಸಿದ್ದಾರೆ. ‘ನಟಿಯಾಗಿಯೇ ಮುಂದುವರಿದರೂ ಶಿಕ್ಷಣ ಇರಬೇಕು ಅಂತ ಅಪ್ಪ-ಅಮ್ಮ ಹೇಳಿದ್ದರು, ಹೀಗಾಗಿ ಡಿಗ್ರಿ ಮುಗಿಸಿ ಈಗ ಎಂಬಿಎ ಮಾಡುತ್ತಿದ್ದೇನೆ. ಸದ್ಯ ಎರಡನೇ ಸೆಮಿಸ್ಟರ್ ಓದುತ್ತಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ.

    ಅಂದಹಾಗೆ, ರಚನಾಗೆ ಅನುಷ್ಕಾ ಶೆಟ್ಟಿ ಅಂದರೆ ಬಲು ಇಷ್ಟವಂತೆ, ‘ಮುಂದೆ ಹೀಗೇ ಮಾಡಬೇಕು ಅಂತ ಪ್ಲಾನ್ ಏನೂ ಇಲ್ಲ. ಆದರೆ, ಕಮರ್ಷಿಯಲ್ ಚಿತ್ರಗಳಿಗಷ್ಟೇ ಅಂಟಿಕೊಂಡಿರಬೇಕು ಎಂಬ ಆಸೆಯೂ ಇಲ್ಲ. ಅನುಷ್ಕಾ ಶೆಟ್ಟಿಯವರಂತೆ ವಿಭಿನ್ನ ಪಾತ್ರಗಳಲ್ಲಿ ನಟಿಸಬೇಕು, ಗ್ಲಾಮರಸ್ ಪಾತ್ರಗಳ ಜತೆಗೆ ಹಾರರ್ ಚಿತ್ರಗಳಲ್ಲೂ ಅಭಿನಯಿಸಬೇಕು. ಎಷ್ಟೊಂದು ಬಗೆಯ ಪಾತ್ರಗಳಿವೆ, ಅಂತಹ ಎಲ್ಲ ಪಾತ್ರಗಳಲ್ಲೂ ನಟಿಸಬೇಕು ಅಂತ ಆಸೆಯಿದೆ’ ಎನ್ನುತ್ತಾರೆ.

    ಖ್ಯಾತ ನಟನಿಗೆ ಕ್ಯಾನ್ಸರ್​, ಧನಸಹಾಯಕ್ಕಾಗಿ ಸಾರ್ವಜನಿಕರಲ್ಲಿ ಕೋರಿಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts