'ಹಾಲು ಜೇನು' ಖ್ಯಾತಿಯ ಸಿಂಗೀತಂ ಶ್ರೀನಿವಾಸ್ ರಾವ್ ನಿಧನ! ಶಿವರಾಜ್​ಕುಮಾರ್​ ಸೇರಿ ಸ್ಯಾಂಡಲ್​ವುಡ್​ ಕಲಾವಿದರ​ ಸಂತಾಪ | Singeetham Srinivas Rao

ತೀವ್ರ ಆನಾರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದ ಸಿಂಗೀತಂ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಿ ನಿರಂತರವಾಗಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ 10:30ರ ಸುಮಾರಿಗೆ ಅವರು ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
 Singeetham Srinivasa Rao
'ಹಾಲು ಜೇನು' ಖ್ಯಾತಿಯ ಸಿಂಗೀತಂ ಶ್ರೀನಿವಾಸ್ ರಾವ್ ನಿಧನ! ಶಿವರಾಜ್​ಕುಮಾರ್​ ಸೇರಿ ಸ್ಯಾಂಡಲ್​ವುಡ್​ ಕಲಾವಿದರ​ ಸಂತಾಪ
Published on: 

ಬೆಂಗಳೂರು: ವರನಟ, ಡಾ. ರಾಜ್​ಕುಮಾರ್​ ಅವರ ಹಲವಾರು ಯಶಸ್ವಿ ಸಿನಿಮಾಗಳಿಗೆ ಆ್ಯಕ್ಷನ್ ಕಟ್​ ಹೇಳಿದಂತ ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ (94) ಅವರು ವಯೋಸಹಜ ಕಾಯಿಲೆಗಳಿಂದ ಕೊನೆಯುಸಿರೆಳೆದಿದ್ದಾರೆ.

ತೀವ್ರ ಆನಾರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದ ಸಿಂಗೀತಂ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಿ ನಿರಂತರವಾಗಿ ಚಿಕಿತ್ಸೆ ಕೊಡಿಸಲಾಗತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ 10:30ರ ಸುಮಾರಿಗೆ ಅವರು ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಭಾರತೀಯ ಚಿತ್ರೋದ್ಯಮದಲ್ಲಿ ಬಹುದೊಡ್ಡ ಹೆಸರು ಸೃಷ್ಟಿಸಿದ ಅವರು, ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು ಸೇರಿದಂತೆ ಸುಮಾರು 60 ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕನ್ನಡದಲ್ಲಿ ಡಾ. ರಾಜ್​ಕುಮಾರ್ ಅಭಿನಯದ ‘ಹಾಲು ಜೇನು’, ‘ಚಲಿಸುವ ಮೋಡಗಳು’, ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ‘ದೇವತಾ ಮನುಷ್ಯ’ ಮತ್ತು ಶಿವರಾಜಕುಮಾರ್ ನಟನೆಯ ಮೊದಲ ಚಿತ್ರ ‘ಆನಂದ್’, ‘ಸಂಯುಕ್ತ’, ಕಮಲ್ ಹಾಸನ್‌ರ ಮೂಕಿ ಸಿನಿಮಾ ‘ಪುಷ್ಪಕ ವಿಮಾನ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇವುಗಳ ಪೈಕಿ ಬಹುತೇಕ ಸಿನಿಮಾಗಳು ಸೂಪರ್​ಹಿಟ್​ ಆಗಿವೆ.

Also Read
ರಾಜಮೌಳಿ, ಪ್ರಿನ್ಸ್​ ಚಿತ್ರಕ್ಕೆ ಹಾಲಿವುಡ್​ ನಟಿ ಎಂಟ್ರಿ! ಬಹುನಿರೀಕ್ಷಿತ ಬಿಗ್ ಬಜೆಟ್​ 'ವಾರಣಾಸಿ'ಯ ಈ ಬೆಡಗಿ ಯಾರು? | Varanasi Movie
 Singeetham Srinivasa Rao

ಎರಡು ರಾಷ್ಟ್ರಪ್ರಶಸ್ತಿ, ಮೂರು ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಅವರ ಮುಡಿಗೇರಿವೆ. ಹಿರಿಯ ನಿರ್ದೇಶಕನ ಅಗಲಿಕೆಯೆ ಸುದ್ದಿಗೆ ಕನ್ನಡ, ತಮಿಳು ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ತಮ್ಮ ಮೊದಲ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳಿದ ನಿರ್ದೇಶಕರನ್ನು ನೆನೆದ ನಟ ಶಿವರಾಜ್​ಕುಮಾರ್​, "ಸಿಂಗೀತಂ ಶ್ರೀನಿವಾಸ ರಾವ್ ಸರ್, ನೀವು ನನಗೆ 'ಆನಂದ್​' ಚಿತ್ರದ ಮೂಲಕ 40 ವರ್ಷಗಳ ಚಲನಚಿತ್ರಗಳ ಪ್ರಯಾಣದ ಆರಂಭವನ್ನು ಕೊಟ್ಟಿದ್ದೀರಿ. 94ನೇ ವಯಸ್ಸಿನಲ್ಲಿ ಸಿನಿಮಾ ನಿರ್ದೇಶಿಸುವ ಮೂಲಕ ಇಡೀ ಜಗತ್ತಿಗೆ ಸ್ಫೂರ್ತಿ ತುಂಬಿದ್ದೀರಿ. ನೀವು ವಯಸ್ಸು ಒಂದು ನಂಬರ್​ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ" ಎಂದು ಭಾವುಕ ಮನದಾಳದ ಮಾತುಗಳನ್ನು ಟ್ವೀಟ್​ ಮೂಲಕ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net