ರಾಜಮೌಳಿ, ಪ್ರಿನ್ಸ್​ ಚಿತ್ರಕ್ಕೆ ಹಾಲಿವುಡ್​ ನಟಿ ಎಂಟ್ರಿ! ಬಹುನಿರೀಕ್ಷಿತ ಬಿಗ್ ಬಜೆಟ್​ 'ವಾರಣಾಸಿ'ಯ ಈ ಬೆಡಗಿ ಯಾರು? | Varanasi Movie

ಈ ಸಿನಿಮಾದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದು, ಪೃಥ್ವಿರಾಜ್ ಸುಕುಮಾರನ್ ಸೇರಿ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ, ಹಾಲಿವುಡ್​ನ ಸ್ಟಾರ್​ ನಟಿಯೊಬ್ಬರು ಚಿತ್ರತಂಡ ಸೇರಿರುವುದು ಇದೀಗ ಸಿನಿಪ್ರಿಯರ ಕುತೂಹಲ ಕೆರಳಿಸಿದೆ.
Varanasi Movie
ರಾಜಮೌಳಿ, ಪ್ರಿನ್ಸ್​ ಚಿತ್ರಕ್ಕೆ ಹಾಲಿವುಡ್​ ನಟಿ ಎಂಟ್ರಿ! ಬಹುನಿರೀಕ್ಷಿತ ಬಿಗ್ ಬಜೆಟ್​ 'ವಾರಣಾಸಿ'ಯ ಬೆಡಗಿ ಯಾರು? | Varanasi Movie
Published on: 

ಬೆಂಗಳೂರು: ಪ್ರಸ್ತುತ ಭಾರತೀಯ ಚಲನಚಿತ್ರೋದ್ಯಮದಲ್ಲಿ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್​ ಆಗಲು ಎದುರುನೋಡುತ್ತಿದ್ದು, ಟೈಟಲ್​, ಟೀಸರ್​ ಮತ್ತು ಟ್ರೇಲರ್​ನಿಂದಲೇ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಕೆರಳಿಸಿವೆ. ಈ ಪೈಕಿ ಟಾಲಿವುಡ್​ ಪ್ರಿನ್ಸ್​, ಮಹೇಶ್​ ಬಾಬು ನಟನೆಯ ಹಾಗೂ ಸ್ಟಾರ್​ ನಿರ್ದೇಶಕ ಎಸ್​.ಎಸ್​. ರಾಜಮೌಳಿ ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್​ ಚಿತ್ರ 'ವಾರಣಾಸಿ' (Varanasi Movie) ಸದ್ಯ ರಿಲೀಸ್​ಗೂ ಮುನ್ನವೇ ಭಾರತೀಯ ಚಿತ್ರೋದ್ಯಮದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ.

1,100 ಕೋಟಿ ರೂ. ಬಜೆಟ್‌

ಸದಾ ಹೊಸತನ, ಉನ್ನತ ಮಟ್ಟದ ಗ್ರಾಫಿಕ್ಸ್​, ವಿಎಫ್​ಎಕ್ಸ್​ ವಿಶ್ಯೂವಲ್ಸ್​ ಹಾಗೂ ಸಿನಿಮ್ಯಾಟಿಕ್​ ಅನುಭವವನ್ನು ತಮ್ಮ ಚಿತ್ರಗಳಲ್ಲಿ ತುಂಬಿಸುವ ರಾಜಮೌಳಿ, 'ವಾರಣಾಸಿ' ಚಿತ್ರವನ್ನು ಸುಮಾರು 1,100 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. ವರದಿಗಳ ಪ್ರಕಾರ, ಪ್ರಸ್ತುತ ಭಾರತದ ಎರಡನೇ ಅತಿದೊಡ್ಡ ಬಜೆಟ್ ಚಿತ್ರ ಇದಾಗಿದೆ. ಈ ಸಿನಿಮಾದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದು, ಪೃಥ್ವಿರಾಜ್ ಸುಕುಮಾರನ್ ಸೇರಿ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ, ಹಾಲಿವುಡ್​ನ ಸ್ಟಾರ್​ ನಟಿಯೊಬ್ಬರು ಚಿತ್ರತಂಡ ಸೇರಿರುವುದು ಇದೀಗ ಸಿನಿಪ್ರಿಯರ ಕುತೂಹಲ ಕೆರಳಿಸಿದೆ.

ಭಾರತೀಯ ನಿರ್ದೇಶಕ ರಾಜಮೌಳಿ ಮತ್ತು ಸೂಪರ್‌ಸ್ಟಾರ್ ಮಹೇಶ್ ಬಾಬು ಅವರನ್ನೊಳಗೊಂಡ 'ವಾರಣಾಸಿ' ಚಿತ್ರದ ಮೇಲಿನ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಚಿತ್ರದ ಕುರಿತು ಹೊರಬರುತ್ತಿರುವ ರೋಚಕ ಸುದ್ದಿಗಳು ಚಲನಚಿತ್ರ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿಸಿವೆ. ಇತ್ತೀಚೆಗೆ 'ವಾರಣಾಸಿ' ಚಿತ್ರದ ಬಗ್ಗೆ ಒಂದು ಆಸಕ್ತಿದಾಯಕ ಮಾಹಿತಿ ಹೊರಬಿದ್ದಿದೆ; ಈ ಚಿತ್ರದಲ್ಲಿ ಮಹೇಶ್ ಬಾಬು ಅವರೊಂದಿಗೆ ಹಾಲಿವುಡ್ ನಟಿಯೊಬ್ಬರು ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕೆಮಿಸ್ಟ್ರಿ ಸಿನಿಮಾದ ಮುಖ್ಯ ಆಕರ್ಷಣೆ

ಅಷ್ಟಕ್ಕೂ ಆಕೆ ಬೇರಾರೂ ಅಲ್ಲ, ಅವರೇ ಹಾಲಿವುಡ್ ನಟಿ ಡೈಸಿ ಜೆಸ್ಸಿಕಾ ಎಡ್ಗರ್ ಜೋನ್ಸ್. 'ವಾರಣಾಸಿ' ಚಿತ್ರದಲ್ಲಿ ಜೋನ್ಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದೆ ಎಂಬ ಮಾತುಗಳು ಸದ್ಯ ಟಾಲಿವುಡ್​ ಅಂಗಳದಲ್ಲಿ ಜೋರಾಗಿವೆ. ಈ ಚಿತ್ರದಲ್ಲಿ ಮಹೇಶ್ ಬಾಬು ಮತ್ತು ಡೈಸಿ ಎಡ್ಗರ್ ಜೋನ್ಸ್ ನಡುವೆ ಕೆಲವು ಪ್ರಮುಖ ಪ್ರಣಯ ದೃಶ್ಯಗಳು ಇರಲಿವೆ ಎಂಬ ಚರ್ಚೆಗಳೂ ನಡೆಯುತ್ತಿವೆ. ಇವರಿಬ್ಬರ ನಡುವಿನ ಕೆಮಿಸ್ಟ್ರಿ ಸಿನಿಮಾದ ಮುಖ್ಯ ಆಕರ್ಷಣೆ ಎಂದೂ ಹೇಳಲಾಗಿದೆ. ಆದರೆ, ಚಿತ್ರತಂಡ ಮಾತ್ರ ಇಲ್ಲಿಯವರೆಗೆ ಯಾವುದೇ ಮಾಹಿತಿಯನ್ನು ಇನ್ನೂ ಅಧಿಕೃತವಾಗಿ ಹೊರಬಿಟ್ಟಿಲ್ಲ ಎಂಬುದು ಗಮನಾರ್ಹ.

'ಜೆನ್ನಿ' ಪಾತ್ರ

ಈ ಹಿಂದೆ, ಜಾಗತಿಕ ಮಟ್ಟದಲ್ಲಿ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದ 'ಆರ್‌ಆರ್‌ಆರ್' (RRR) ಚಿತ್ರದಲ್ಲಿ ಜೂ.ಎನ್‌ಟಿಆರ್ ಎದುರು 'ಜೆನ್ನಿ' ಪಾತ್ರವನ್ನು ಡೈಸಿ ಎಡ್ಗರ್ ಅವರೇ ಮಾಡಬೇಕಿತ್ತು. ಆದರೆ, ಸಮಯದ ತೊಂದರೆ ಮತ್ತು ಇನ್ನಿತರ ಸಮಸ್ಯೆಗಳಿಂದ ಆ ಅವಕಾಶ ಅವರ ಕೈತಪ್ಪಿತು. ಆದರೀಗ, ಮತ್ತೊಮ್ಮೆ ಅವರನ್ನೇ ರಾಜಮೌಳಿ ಆಯ್ಕೆ ಮಾಡಿದ್ದಾರೆ ಎಂಬ ಸುದ್ದಿ ನಿಜವೇ ಆದರೆ, 'ವಾರಣಾಸಿ' ಚಿತ್ರದ ಮೂಲಕ ಅವರು ಭಾರತೀಯ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡುವುದು ಖಚಿತ.

ವಿಶ್ವದ ಐದನೇ ಸಿನಿಮಾ

ರಾಜಮೌಳಿ ನಿರ್ದೇಶಿಸಲಿರುವ ಈ ಚಿತ್ರವು, ಅಂಟಾರ್ಕ್ಟಿಕಾ ಪ್ರದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಭಾರತೀಯ ಸಿನಿಮಾ ಮತ್ತು ವಿಶ್ವದ ಐದನೇ ಸಿನಿಮಾ ಎಂಬ ಪಟ್ಟಿಗೆ ಸೇರಲಿದೆ. ಹವಾಮಾನ ವೈಪರೀತ್ಯ ಮತ್ತು ಕಟ್ಟುನಿಟ್ಟಿನ ಕ್ರಮ, ನಿಯಮಗಳಿರುವ ಕಾರಣ ಕೆಲವೇ ಕೆಲವು ಸಿನಿಮಾಗಳು ಮಾತ್ರ ಈ ಪ್ರದೇಶದಲ್ಲಿ ಶೂಟಿಂಗ್​ ಮಾಡುವಲ್ಲಿ ಯಶಸ್ವಿಯಾಗಿವೆ. ಇದು ಭಾರತೀಯ ಸಿನಿಮಾಗೆ ಐತಿಹಾಸಿಕ ಮೈಲಿಗಲ್ಲು ಎಂದೇ ಹೇಳಬಹುದು.

Also Read
ಬರ್ತಿದೆ ವಿಲನ್​ ಗಾಡ್ಜಿಲ್ಲಾ... ಇದು ಯುದ್ಧಕ್ಕಿಂತಲೂ ಭೀಕರ, ಬರದ ಜತೆ ತಟ್ಟಲಿದೆ ಬೆಲೆ ಏರಿಕೆ ಬಿಸಿ, ಡೇಂಜರ್​ ಡಿಸೆಂಬರ್..! Godzilla El Niño
Varanasi Movie

ಇಲ್ಲಿಯವರೆಗೆ ಅಂಟಾರ್ಕ್ಟಿಕಾದಲ್ಲಿ ಶೂಟ್​ ಆದ ಸಿನಿಮಾಗಳಿವು

1. ದಿ ಥಿಂಗ್

2. 8​ ಬಿಲೋ

3. ಎನ್​ಕೌಂಟರ್ಸ್​ ಅಟ್​ ದಿ ಎಂಡ್​ ಆಫ್​ ದಿ ವರ್ಲ್ಡ್​

4. ಅಂಟಾರ್ಕ್ಟಿಕಾ: ಎ ಇಯರ್ ಆನ್​ ಒನ್ಸ್​, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net