‘ಬೇರೆಯವರು ಬಳಸಿದ ತಟ್ಟೆ, ಟಾಯ್ಲೆಟ್​ ನಾನೇಕೆ ಕ್ಲೀನ್​ ಮಾಡಲಿ’; ಬಿಗ್​ಬಾಸ್​ ಬಗ್ಗೆ ನಟಿಯ ಮಾತು

Lakshmi-Menon-Bio
Published on

ಚೆನ್ನೈ: ಈಗಾಗಲೇ ತೆಲುಗಿನಲ್ಲಿ ಬಿಗ್​ಬಾಸ್​ ರಿಯಾಲಿಟಿ ಶೋ ಆರಂಭವಾಗಿದೆ. ಇನ್ನೇನು ಹಿಂದಿಯಲ್ಲಿಯೂ ಆರಂಭವಾಗಲಿದೆ. ಜತೆಗೆ ತಮಿಳಿನಲ್ಲಿಯೂ ಕಮಲ್​ ಹಾಸನ್​ ಶೋ ನಡೆಸಿಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಇದೇ ಶೋ ಬಗ್ಗೆ ಕಾಲಿವುಡ್​ ನಟಿ ಹೇಳಿಕೆಯೊಂದನ್ನು ನೀಡಿದ್ದು, ಅವರ ಹೇಳಿಕೆ ಸದ್ಯ ವಿವಾದಕ್ಕೆ ಕಾರಣವಾಗಿದೆ.

ಬಿಗ್​ ಮನೆಗೆ ಯಾರೆಲ್ಲ ತೆರಳಲಿದ್ದಾರೆ ಎಂಬ ಕುತೂಹಲ ಸಹಜ. ಈಗಾಗಲೇ ಹಲವು ಸೆಲೆಬ್ರಿಟಿಗಳ ಹೆಸರುಗಳು ಬಹಿರಂಗವಾಗಿದ್ದು, ಇನ್ನಷ್ಟೇ ಅಧಿಕೃತವಾಗಬೇಕು. ಹೀಗಿರುವಾಗಲೇ ತಮಿಳಿನ ಬಿಗ್​ಬಾಸ್​ ಸೀಸನ್​ 4ರಲ್ಲಿ ನಟಿ ಲಕ್ಷ್ಮೀ ಮೆನನ್​ ಸಹ ಸ್ಪರ್ಧಿಯಾಗಿರಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಆ ಸುದ್ದಿಗೆ ಉತ್ತರಿಸಿರುವ ಲಕ್ಷ್ಮೀ, ‘ನಾನು ಬಿಗ್​ಬಾಸ್​ನಲ್ಲಿ ಸ್ಪರ್ಧಿಸುತ್ತಿಲ್ಲ. ಬೇರೆಯವರು ಬಳಸಿದ ತಟ್ಟೆಗಳನ್ನು ಮತ್ತು ಟಾಯ್ಲೆಟ್​ ಕ್ಲೀನ್​ ಮಾಡಲು ನಾನು ಆ ಶೋಗೆ ಹೋಗುವುದಿಲ್ಲ. ಅಲ್ಲಿನ ಕ್ಯಾಮರಾಗಳ ಜತೆಗೆ ಜಗಳ ಮಾಡುವುದು ನನಗಿಷ್ಟವಿಲ್ಲ’ ಎಂದಿದ್ದಾರೆ.

ಸದ್ಯ ಲಕ್ಷ್ಮೀ ಅವರ ಹೇಳಿಕೆ ವೀಕ್ಷಕರ ವಲಯದಿಂದ ಚರ್ಚೆಗೆ ಕಾರಣವಾಗಿದ್ದು, ನೆಗೆಟಿವ್​ ರೀತಿಯ ಕಮೆಂಟ್​ಗಳು ಸಂದಾಯವಾಗುತ್ತಿವೆ. ಅಂದಹಾಗೆ, ಅಕ್ಟೋಬರ್ 4ರಿಂದ ಈ ಶೋ ಪ್ರಸಾರವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net