ಆತಂಕಪಡುವ ಅವಶ್ಯಕತೆ ಇಲ್ಲ; ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ವೇಲು ಹೇಳಿಕೆ

Lahari Velu
Published on

ಬೆಂಗಳೂರು: ಭಾನುವಾರ ರಾತ್ರಿ ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಅವರ ರಿಸೆಪ್ಶನ್​ ಸಂದರ್ಭದಲ್ಲಿ ಕುಸಿದು ಬಿದ್ದಿದ್ದ ಲಹರಿ ವೇಲು ಇದೀಗ ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಡೆದ ಅದಿತಿ ಪ್ರಭುದೇವ ಅವರ ಮದುವೆ ರಿಸೆಪ್ಶನ್​ನಲ್ಲಿ ಅವರಿಗೆ ಶುಭ ಕೋರಲು ಬಂದಿದ್ದ ಲಹರಿ ಸಂಸ್ಥೆ ವೇಲು ಅನಾರೋಗ್ಯದಿಂದ ಹಠಾತ್ತನೇ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್​​ ಮಾಡಲಾಗಿತ್ತು.

ಅನಾರೋಗ್ಯದಿಂದ ಕ್ರಮೇಣ ಚೇತರಿಸಿಕೊಳ್ಳುತ್ತಿರುವ ವೇಲು ತಮಗೇನೂ ಆಗಿಲ್ಲ ಎಂದು ಹೇಳಿದ್ದಾರೆ. ತಮ್ಮ ಮೇಲೆ ಪ್ರೀತಿ ಇಟ್ಟಿರುವ ಎಲ್ಲರಿಗೂ ಸದಾ ಚಿರಋಣಿ ಎಂದು ಹೇಳಿದ್ದಾರೆ. ಈ ಸಂಬಂಧ ಸೋಮವಾರ ಮಧ್ಯಾಹ್ನ ಅವರೊಂದು ವಿಡಿಯೋ ಬಿಡುಗಡೆ ಮಾಡಿ, ಅದರ ಮೂಲಕ ತಮ್ಮ ಆರೋಗ್ಯದ ಕುರಿತು ಅಪ್​ಡೇಟ್​ ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ನಿನ್ನೆ ಸಮಾರಂಭಕ್ಕೆ ಹೋದಾಗ. ಆರೋಗ್ಯದಲ್ಲಿ ಏರುಪೇರಾಗಿ, ತಲೆ ಸುತ್ತು ಬಂದಿತು. ಅಲ್ಲೇ ಇದ್ದ ಮಿತ್ರರು ನನ್ನನ್ನು ತಕ್ಷಣ ವಿಕ್ರಮ್​ ಆಸ್ಪತ್ರೆಗೆ ಕರೆದುಕೊಂಡು ಹೋದರು. ಎಂ.ಆರ್​.ಐ ಸೇರಿದಂತೆ ಹಲವು ಟೆಸ್ಟ್​ಗಳನ್ನು ಮಾಡಿದ ನಂತರ, ವೈದ್ಯರು ನನಗೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಹೇಳಿದರು. ನಾಲ್ಕೈದು ದಿನಗಳಿಂದ ಓಡಾಟ ಜಾಸ್ತಿ ಆಗಿದ್ದರಿಂದ ಹೀಗಾಗಿರಬಹುದು. ಹಾಗಾಗಿ, ನನಗೆ ಯಾವುದೇ ಸಮಸ್ಯೆ ಇಲ್ಲ. ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಆದಷ್ಟು ಬೇಗ ಆರೋಗ್ಯವಂತನಾಗಿ ಬರುತ್ತೇನೆ ಎಂದು ವೇಲು ವಿಡಿಯೋ ಮೂಲಕ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net