ಕುಂವೀ ಕಥೆ ಚಿತ್ರವಾಯಿತು; ನಟರಾಜ್ ನಟನೆಯಲ್ಲಿ 'ಕುಬುಸ'

Kumvee
Published on

ಬೆಂಗಳೂರು: ‘ರಾಮಾ ರಾಮಾ ರೇ’ ಖ್ಯಾತಿಯ ನಟರಾಜ್ ನಟನೆಯ ‘ಕುಬುಸ’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಆಗಿದೆ. ಅದೂ ಅವರ ಹುಟ್ಟುಹಬ್ಬದಂದೇ ಬಿಡುಗಡೆ ಆಗಿರುವುದು ವಿಶೇಷ. ಇತ್ತೀಚೆಗೆ ನಟ ಡಾಲಿ ಧನಂಜಯ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಗೆಳೆಯನಿಗೆ ಶುಭ ಹಾರೈಸಿದ್ದಾರೆ. ಇದು ಕನ್ನಡದ ಖ್ಯಾತ ಕಥೆಗಾರ ಕುಂ. ವೀರಭದ್ರಪ್ಪನವರ ‘ಕುಬುಸ’ ಕಥೆ ಆಧಾರಿತ ಚಿತ್ರ.

ಅಮ್ಮ-ಮಗನ ನಡುವಿನ ನಡೆಯುವ ಕಥೆಯಾಗಿದ್ದು, ತಾಯಿಯ ಪಾತ್ರದಲ್ಲಿ ಬಳ್ಳಾರಿಯ ಹನುಮಕ್ಕ ನಟಿಸಿದರೆ, ಮಗನಾಗಿ ನಟರಾಜ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪೋಸ್ಟ್​ಮ್ಯಾನ್ ಪಾತ್ರದಲ್ಲಿ ಅವರು ನಟಿಸಿದ್ದು, ಎರಡು ಕಾಲಘಟ್ಟದಲ್ಲಿ ಕಥೆ ನಡೆಯುತ್ತದಂತೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ಮಂಜಮ್ಮ ಜೋಗುತಿ ಸಹ ಇದ್ದಾರಂತೆ. ಶೋಭಾ ಸಿನಿಮಾಸ್​ನಡಿ ಚಿತ್ರ ನಿರ್ವಣವಾಗುತ್ತಿದೆ. ಚೇತನ್ ಶರ್ಮ ಛಾಯಾಗ್ರಹಣ, ಪ್ರವೀಣ್ ಚಂದ್ರ ಅವರ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net