ಪವನ್ ಕಲ್ಯಾಣ್​ರನ್ನು ಭೇಟಿ ಮಾಡಿದ ಕಿಚ್ಚ ಸುದೀಪ್​

Sudeep Pavan
Published on

ಬೆಂಗಳೂರು: ಈ ಎರಡೂವರೆ ತಿಂಗಳುಗಳಲ್ಲಿ ಒಂದೆರಡು ಬಾರಿ ಬೆಂಗಳೂರಿಗೆ ಬಂದು ಹೋಗಿದ್ದು ಬಿಟ್ಟರೆ, ಮಿಕ್ಕಂತೆ ಹೈದರಾಬಾದ್​ನಲ್ಲೇ ಇದ್ದುಬಿಟ್ಟಿದ್ದಾರೆ ಸುದೀಪ್. ‘ಫ್ಯಾಂಟಮ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಸುದೀಪ್, ಇತ್ತೀಚೆಗೆ ಸ್ವಲ್ಪ ಬಿಡುವು ಮಾಡಿಕೊಂಡು ತೆಲುಗಿನ ಜನಪ್ರಿಯ ನಟ ಮತ್ತು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿ ಉಭಯಕುಶಲೋಪರಿ ನಡೆಸಿದ್ದಾರೆ.

ಸುದೀಪ್ ಮತ್ತು ಪವನ್ ಕಲ್ಯಾಣ್ ಇಬ್ಬರೂ ಸೆಪ್ಟೆಂಬರ್ 2ರಂದು ಜನಿಸಿದವರು. ಅವರ ನಡುವೆ ಹಲವು ವರ್ಷಗಳ ಸ್ನೇಹ ಇದೆ. ಇಬ್ಬರೂ ಭೇಟಿ ಮಾಡಬೇಕು ಎಂದು ಹಲವು ದಿನಗಳಿಂದ ಚರ್ಚೆ ನಡೆಯುತ್ತಲೇ ಇತ್ತಂತೆ. ಅದೀಗ ಕೂಡಿಬಂದಿದೆ. ಪವನ್ ಕಲ್ಯಾಣ್ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದ ಸುದೀಪ್, ಅವರ ಜತೆಗೆ ಹಲವು ಒಳ್ಳೆಯ ಕ್ಷಣಗಳನ್ನು ಕಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net