ಅವ್ರು ಹಾಗಂತಾರೆ, ಇವ್ರು ಹೀಗಂತಾರೆ ... ನಿಜ ಯಾವುದು?

Sushant Singh Rajaput - Final
Published on

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಅವರ ಅಸಹಜ ಸಾವು ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ. ಈ ವಿಚಾರದಲ್ಲಿ ಸಿಬಿಐ ತನಿಖೆಯನ್ನು ಮುಂದುವರೆಸಿದ್ದು, ಈ ಮಧ್ಯೆ ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸಸ್​ನ (ಏಮ್ಸ್​) ವೈದ್ಯರೊಬ್ಬರ ಹೇಳಿಕೆ ಈ ಪ್ರಕರಣವನ್ನು ಇನ್ನಷ್ಟು ಜಟಿಲಗೊಳಿಸಿದೆ.

ಸುಶಾಂತ್​ ಸಿಂಗ್​ ರಜಪೂತ್​ ಅವರ ಪೋಸ್ಟ್​ ಮಾರ್ಟಂ ಪರಿಶೀಲಿಸಿದ್ದ ಏಮ್ಸ್​ನ ವೈದ್ಯರ ತಂಡವು, ಇತ್ತೀಚೆಗೆ ಸುಶಾಂತ್​ ಅವರ ಸಾವು, ಆತ್ಮಹತ್ಯೆ ಎಂದು ಹೇಳಿತ್ತು. ಸುಶಾಂತ್​ ಅವರು ಉಸಿರುಗಟ್ಟಿ ಸತ್ತಿದ್ದಾರೆ ಎಂದು ತಿಳಿಸಿತ್ತು.

ಆದರೆ, ಈಗ ಆ ತಂಡದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದ ಡಾ ಸುಧೀರ್​ ಗುಪ್ತಾ ಅವರು ಪೊಲೀಸರಿಗೆ ಹೇಳಿಕೆಯೊಂದನ್ನು ನೀಡಿದ್ದು, ಇದು ಕೊಲೆ ಎಂದು ಅವರು ಹೇಳಿದ್ದಾರೆ ಎಂದು ರಿಪಬ್ಲಿಕ್​ ಟಿವಿ ವರದಿ ಮಾಡಿದೆ. ಆಗಸ್ಟ್​ 22ರಂದು ಸುಧೀರ್​ ಅವರು ಪೊಲೀಸರಿಗೆ ಈ ವಿಚಾರವಾಗಿ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಟೈಮ್ಸ್​ ನವ್​ ವರದಿ ಮಾಡಿದ್ದು, ಅದರ ಪ್ರಕಾರ ಏಮ್ಸ್​ ತಂಡದವರು, ಈ ಹಿಂದೆ ನೀಡಿದ ಹೇಳಿಕೆಗೆ ಬದ್ಧರಾಗಿದ್ದಾರಂತೆ.

ಇದಕ್ಕೂ ಮುನ್ನ, ಡಾ. ಸುಧೀರ್​ ಗುಪ್ತಾ ನೇತೃತ್ವದ ಏಳು ವೈದ್ಯರ ತಂಡವು ಎಲ್ಲಾ ನಿಟ್ಟಿನಲ್ಲಿ ಪರಿಶೀಲಿಸಿದ್ದು, ಅದರ ಪ್ರಕಾರ ಸುಶಾಂತ್ ಅವರ ಸಾವು ಉಸಿರುಗಟ್ಟಿದ್ದರಿಂದ ಉಂಟಾಗಿತ್ತಂತೆ. ದೇಹದ ಯಾವುದೇ ಭಾಗದಲ್ಲಿ ಇಂಜ್ಯುರಿಗಳು ಕಂಡುಬರದ ಹಿನ್ನೆಲೆಯಲ್ಲಿ ಇದು ಆತ್ಮಹತ್ಯೆ ಎಂದು ಹೇಳಲಾಗಿತ್ತು.

ಡಾ. ಗುಪ್ತಾ ಅವರ ಆಡಿಯೋ ಟೇಪ್​ ಬಗ್ಗೆ ಅವರಾಗಲೀ ಅಥವಾ ಅವರ ತಂಡದ ಇತರೆ ಸದಸ್ಯರಾಗಲೀ ಯಾವ ರೀತಿಯ ಹೇಳಿಕೆ ನೀಡುತ್ತಾರೆ ಎಂಬ ಕುತೂಹಲ ಈಗ ಎಲ್ಲರಲ್ಲೂ ಮನೆಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net