

ಮುಂಬೈ: ಬಾಲಿವುಡ್ನ ಸ್ವಯಂಘೋಷಿತ ನಂಬರ್ ಒನ್ ವಿಮರ್ಶಕ ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್ಕೆ, ಎಲ್ಲ ಸ್ಟಾರ್ ನಟರ ಕಾಲೆಳೆಯುತ್ತಲೇ ಇರುತ್ತಾರೆ. ಅದರಲ್ಲೂ ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರನ್ನು ಒಂದಲ್ಲ ಒಂದು ಕಾರಣಕ್ಕೆ ಹೀಯಾಳಿಸುತ್ತಲೇ ಇರುವ ಕೆಆರ್ಕೆ, ಅದೇ ಕಾರಣಕ್ಕೆ ಸಾಕಷ್ಟು ಜನಪ್ರಿಯತೆಯನ್ನೂ ಪಡೆದಿದ್ದಾರೆ.
ಇದನ್ನೂ ಓದಿ: ಮ್ಯಾನ್ ಆಫ್ ದಿ ಮ್ಯಾಚ್ಗೆ ಪವರ್..
ಇದೀಗ ಶಾರೂಖ್ ಖಾನ್ ಅವರನ್ನು ಕೆಆರ್ಕೆ ಮತ್ತೆ ಕಾಲೆಳೆದಿದ್ದಾರೆ. ಶಾರೂಖ್ ಖಾನ್ ಮುದುಕ, ಅವರಿಗೆ ಯಾವ ರೀತಿಯ ಪಾತ್ರಗಳನ್ನು ಮಾಡಬೇಕೆಂಬುದೇ ಗೊತ್ತಿಲ್ಲ ಎಂದು ಹೀಯಾಳಿಸಿದ್ದಾರೆ. ಅದಕ್ಕೆ ಕಾರಣ, ಶಾರೂಖ್ ಖಾನ್ ಇತ್ತೀಚೆಗೆ ಒಪ್ಪಿಕೊಂಡಿರುವ ಒಂದಿಷ್ಟು ಹೊಸ ಚಿತ್ರಗಳು. ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದಲ್ಲಿ ಒಂದು ಚಿತ್ರದಲ್ಲಿ ಶಾರೂಖ್ ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಇದಕ್ಕೆ ಕಾರಣವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಕೆಆರ್ಕೆ, 'ಶಾರೂಖ್ ಯಾಕೆ ಅಟ್ಲಿ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ವಿಷಯವೇ ಅರ್ಥವಾಗುವುದಿಲ್ಲ. ಅಟ್ಲಿಗೆ ಹಿಂದಿ ಪ್ರೇಕ್ಷಕರ ಅಭಿರುಚಿ ಗೊತ್ತಿಲ್ಲ. ಶಾರೂಖ್ ಸಮಸ್ಯೆ ಏನು ಗೊತ್ತಾ? ಅವರು ಕಥೆಗಳನ್ನು ನಂಬುವುದಕ್ಕಿಂತ ಹೆಚ್ಚಾಗಿ ತಂತ್ರಜ್ಱರನ್ನು ನಂಬುತ್ತಾರೆ. 'ಪಠಾಣ್' ತರಹದ ಚಿತ್ರಗಳಲ್ಲಿ ನಟಿಸಿದರೆ, ಜನ ಇಷ್ಟಪಡುವುದಿಲ್ಲ ಎಂದು ಶಾರೂಖ್ ಖಾನ್ಗೆ ಗೊತ್ತಿಲ್ಲ' ಎಂದು ಕೆಆರ್ಕೆ ಹೇಳಿದ್ದಾರೆ.
'ಎಲ್ಲ ಸ್ಟಾರ್ಗಳು ಮಾಡುವ ತಪ್ಪುಗಳನ್ನೇ ಶಾರೂಖ್ ಸಹ ಪದೇಪದೇ ಮಾಡುತ್ತಿದ್ದಾರೆ. ಅವರಿಗೆ 56 ವರ್ಷವಾಗಿದೆ. ಮುದುಕನಾದರೂ ಅವರಿಗೆ ಇನ್ನೂ ಕ್ಯೂಟ್ ಹುಡುಗನ ಪಾತ್ರಗಳನ್ನು ಮಾಡುವ ಆಸೆ. ಅದೆಲ್ಲ ಜನರಿಗೆ ಇಷ್ಟವಾಗುವುದಿಲ್ಲ ಎಂಬ ವಿಷಯ ಅವರಿಗೆ ಅರ್ಥವಾಗುವುದಿಲ್ಲ. ಬಾಲಿವುಡ್ ನಟಿರಿಗೆ ಚಿಕ್ಕ ಹುಡುಗಿಯರ ಜತೆಗೆ ಕ್ಯೂಟ್ ಹುಡುಗ ಪಾತ್ರ ಮಾಡುವ ಅಭ್ಯಾಸವಾಗಿ ಬಿಟ್ಟಿದೆ. ಅದರಿಂದ ಅವರು ಆಚೆಗೇ ಬರುವುದಿಲ್ಲ' ಎಂದು ಕೆಆರ್ಕೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರ ಟ್ವೀಟ್ಗಳಿಗೆ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗುತ್ತಿವೆ.