ಶಾರೂಖ್​ ಖಾನ್ ಸರಿಯಿಲ್ಲ, ಅವರೊಬ್ಬ​ ಫ್ರಾಡ್​ ಎಂದ ಕೆಆರ್​ಕೆ

KRK - Shahrukh Khan - Final
Published on

ಮುಂಬೈ: ಕಳೆದ ಕೆಲವು ದಿನಗಳಿಂದ ಸಲ್ಮಾನ್​ ಖಾನ್​ ವಿರುದ್ಧ ಸತತವಾಗಿ ಹರಿಹಾಯುತ್ತಲೇ ಇರುವ ನಟ ಮತ್ತು ವಿಮರ್ಶಕ ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್‌ಕೆ ಇದೀಗ ಶಾರೂಖ್​ ಖಾನ್​ ವಿರುದ್ಧ ತೆರಿಗೆ ಬಿದ್ದಿದ್ದಾರೆ. ಅವರು ಸರಿ ಇಲ್ಲ, ಅವರೊಬ್ಬ ಫ್ರಾಡ್​ ಅಂತೆಲ್ಲಾ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಸಲ್ಮಾನ್​ ಅಭಿನಯದ ರಾಧೇ ಬಿಡುಗಡೆಯಾಗಿತ್ತು. ಈ ಚಿತ್ರ ನೋಡಿದ ಕೆಆರ್​ಕೆ ಹಿಗ್ಗಾಮುಗ್ಗ ಬೈದು ವಿಮರ್ಶೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ, ಅವರ ವಿರುದ್ಧ ಸಲ್ಮಾನ್​ ಖಾನ್​ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.ಸಲ್ಮಾನ್​ ಖಾನ್​ ಮಾಡಿದ್ದೇ ಸರಿಯಾಗಿದೆ ಎಂದು ಗಾಯಕ ಮಿಖಾ ಸಿಂಗ್​, ನಟಿ ಆಕಾಂಕ್ಷ ಪುರಿ ಸೇರಿದಂತೆ ಹಲವರು ಬೆಂಬೆಲಿಸಿದ್ದರು. ಅವರ ವಿರುದ್ಧ ಸಿಡಿದೆದ್ದ ಕೆಆರ್​ಕೆ, ಬಾಯಿಗೆ ಬಂದಂತೆ ಬಾಯ್ದಿದ್ದರು. ಅಷ್ಟು ಸಾಲದೆಂಬಂತೆ, ಬೆಂಬಲಿಗರ ಹಿಂದೆ ಬಚ್ಚಿಟ್ಟುಕೊಂಡು ಯುದ್ಧ ಮಾಡಬೇಡ ಎಂದು ಸಲ್ಮಾನ್​ಗೆ ಹೇಳಿದ್ದರು. ಅಷ್ಟೇ ಅಲ್ಲ, ಸಲ್ಮಾನ್​ ವೃತ್ತಿಜೀವನವನ್ನು ಸರ್ವನಾಶ ಮಾಡುವುದರ ಜತೆಗೆ, ಅವರನ್ನು ಟಿವಿ ನಟನನ್ನಾಗಿ ಮಾಡುತ್ತೀನಿ ಎಂದಿದ್ದರು.

ಅಷ್ಟಕ್ಕೇ ಮುಗಿದಿಲ್ಲ. ಕೆಆರ್​ಕೆ, ಇದೀಗ ಈ ವಿಷಯಕ್ಕೆ ಶಾರೂಖ್​ ಖಾನ್​ ಅವರನ್ನು ಸಹ ಎಳೆದು ತಂದಿದ್ದಾರೆ. ತಾನು ಸುಮ್ಮನೆ ಯಾರದೋ ವಿರುದ್ಧ ಮಾತನಾಡುವುದಿಲ್ಲ, ಯಾವಾಗಲೂ ಸತ್ಯವನ್ನೇ ಹೇಳುತ್ತೇನೆ ಎಂದಿದ್ದಾರೆ. ಈ ವಿಷಯವಾಗಿ ಮಾತನಾಡಿರುವ ಕೆಆರ್​ಕೆ, 'ಒಂದು ಪಕ್ಷ ನಾನು ಶಾರೂಖ್​ ಖಾನ್​ ಒಬ್ಬ ಫ್ರಾಡ್​, ಅವರು ಸರಿಯಿಲ್ಲ, ಒಂದು ಪೈಸೆ ಸಹಾಯ ಮಾಡದೇ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದೆಲ್ಲ ಹೇಳಿದರೆ, ಅದು ಅವರಿಗೆ ಬೇಸರವಾಗಬಹುದು. ನನ್ನ ಮಾತುಗಳನ್ನು ಯಾರೂ ನಂಬದಿರಬಹುದು. ಆದರೆ, ನಾನು ಸತ್ಯವನ್ನೇ ಹೇಳುತ್ತಿರುತ್ತೇನೆ' ಎಂದು ಹೇಳಿದ್ದಾರೆ.

ಶಾರೂಖ್​ ಖಾನ್​ ಮತ್ತು ಕೆಆರ್​ಕೆ ನಡುವಿನ ವೈಮನಸ್ಯ ಇಂದು ನಿನ್ನೆಯದಲ್ಲ. ಕೆಆರ್​ಕೆ ಒಂದಲ್ಲ ಒಂದು ಕಾರಣಕ್ಕೆ ಶಾರೂಖ್​ ಖಾನ್​ ಅವರನ್ನು ಬಯ್ಯುತ್ತಲೇ ಇರುತ್ತಾರೆ. ಆದರೆ, ಶಾರೂಖ್​ ಹೆಚ್ಚು ಪ್ರತಿಕ್ರಿಯಿಸುವುದಕ್ಕೆ ಹೋಗಿಲ್ಲ. ಈ ಬಾರಿ ಏನು ಮಾಡುತ್ತಾರೋ ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net