

ಬಾಲಿವುಡ್ನಲ್ಲಿ ಪಾತ್ರಗಳಿಗೆ ತಕ್ಕಂತೆ ದೇಹದ ಆಕಾರವನ್ನು ಬದಲಿಸುವ ಆಮೀರ್ ಖಾನ್, ಮಿಸ್ಟರ್ ಫರ್ಫೆಕ್ಷನಿಸ್ಟ್ ಎಂದೇ ಖ್ಯಾತಿ ಪಡೆದವರು. ಇದೀಗ ಅದೇ ಮಿಸ್ಟರ್ ಫರ್ಫೆಕ್ಷನಿಸ್ಟ್ ಪಟ್ಟ ಬಾಲಿವುಡ್ ನಟಿ ಕೃತಿ ಸನೋನ್ಗೂ ಸಿಕ್ಕಿದೆ! ಅದಕ್ಕೆ ಕಾರಣ ಇತ್ತೀಚೆಗೆ ತೆರೆಕಂಡ ‘ಮಿಮಿ’ ಸಿನಿಮಾ.
ಮರಾಠಿ ಮೂಲದ ‘ಮಲಾ ಆಯಿ ವ್ಯಾಯ್ಚಯ್’ ಚಿತ್ರವನ್ನೇ ಹಿಂದಿಯಲ್ಲಿ ‘ಮಿಮಿ’ಯಾಗಿ ರಿಮೇಕ್ ಮಾಡಲಾಗಿತ್ತು. ಬಾಡಿಗೆ ತಾಯ್ತನದ ಬಗ್ಗೆ ಮೂಡಿಬಂದಿದ್ದ ಈ ಚಿತ್ರದ ಸಲುವಾಗಿ ಬರೋಬ್ಬರಿ 15 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದರು ಕೃತಿ. ಹಾಗೆ ತೂಕ ಹೆಚ್ಚಿಸಿಕೊಂಡಿದ್ದಕ್ಕೆ, ಹಲವು ಸಂದರ್ಶನಗಳಲ್ಲಿ ಅವರಿಗೆ ‘ಲೇಡಿ ಆಮೀರ್ ಖಾನ್’ ಎಂದು ಕೆಲವರು ಸಂಬೋಧಿಸಿದ್ದರು.
ತನ್ನನ್ನು ಆಮೀರ್ಗೆ ಹೋಲಿಸಿದ್ದಕ್ಕೆ ಅಷ್ಟೇ ನಯವಾದ ಉತ್ತರ ನೀಡಿರುವ ಕೃತಿ, ‘ಬೇಡ ಬೇಡ ಇಷ್ಟೊಂದು ದೊಡ್ಡ ಒತ್ತಡವನ್ನು ನನ್ನ ಮೇಲೆ ಹೇರದಿರಿ. ಆಮೀರ್ ಖಾನ್ ಅವರ ಜತೆಗೆ ಹೋಲಿಕೆ ಮಾಡುವುದು ಬೇಡ. ಅವರ ಜತೆ ಹೋಲಿಸುವುದು ದೂರದ ಮಾತು’ ಎನ್ನುವ ಅವರು, ‘ನಾನು ಮಾಡಿದ ಪಾತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ಎಂದರೆ, ಅದಕ್ಕಿಂತ ಆತ್ಮತೃಪ್ತಿ ಬೇರೊಂದಿಲ್ಲ’ ಎಂದಿದ್ದಾರೆ. -ಏಜೆನ್ಸೀಸ್