ಕೃತಿ ಖರಬಂದಗೆ ಮತ್ತೆ ಕನ್ನಡಕ್ಕೆ ಬರುವ ಆಸೆಯಂತೆ. ಈ ನಿರ್ದೇಶಕನ ಬಳಿ ಅವರೇ ಹೇಳಿಕೊಂಡಿದ್ದಾರೆ!

c68457282813b6c97507e6cf82d127e7-700
Published on

ಬೆಂಗಳೂರು: ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡು ಈಗ ಬಾಲಿವುಡ್‌ನಲ್ಲಿ ಭದ್ರವಾಗಿ ನೆಲೆಕಂಡುಕೊಂಡಿರುವ ನಟಿ ಕೃತಿ ಖರಬಂದ ಮತ್ತೆ ಸ್ಯಾಂಡಲ್‌ವುಡ್‌ಗೆ ಬರುವ ಆಸೆಯನ್ನು ಹೇಳಿಕೊಂಡಿದ್ದಾರೆ. ಹೌದು, ಕನ್ನಡದಲ್ಲಿ ಲವ್ಲಿಸ್ಟಾರ್ ಪ್ರೇಮ್ ಜತೆಗೆ ದಳಪತಿ ಸಿನಿಮಾದಲ್ಲಿ ನಟಿಸಿದ್ದೇ ಕೊನೇ ಅದಾದ ಮೇಲೆ ಬೇರಾವ ಕನ್ನಡ ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿಲ್ಲ. ಹೀಗಿರುವಾಗಲೇ ಮತ್ತೆ ಕನ್ನಡಕ್ಕೆ ಬರುವೆ ಎಂದು ಗೂಗ್ಲಿ ಎಸೆದಿದ್ದಾರೆ.
ಅಂದರೆ, ಪವನ್ ಒಡೆಯರ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ನಾಯಕತ್ವದ ಗೂಗ್ಲಿ ಸಿನಿಮಾ 2013ರಲ್ಲಿ ಮೂಡಿಬಂದಿತ್ತು. ಆ ಚಿತ್ರದ ಮೇಕಿಂಗ್ ವಿಡಿಯೋ ತುಣುಕನ್ನು ಟ್ವಟರ್‌ನಲ್ಲಿ ಪವನ್ ಶೇರ್ ಮಾಡಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಕೃತಿ, ನನ್ನನ್ನು ಮರಳಿ ಆ ದಿನಗಳಿಗೆ ಕರೆದೊಯ್ದಿರಿ. ಮತ್ತೊಂದು ಗೂಗ್ಲಿ ಶುರುವಾಗಲಿ ಎಂದಿದ್ದಾರೆ. ಸದ್ಯ ಈ ಸುದ್ದಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳೂ ಸಹ ಖುಷಿಯಲ್ಲಿದ್ದಾರೆ. ಗೂಗ್ಲಿ 2 ಸಿನಿಮಾ ಶುರು ಮಾಡುವಂತೆ ಪವನ್‌ಗೆ ಜಾಲತಾಣದಲ್ಲಿ ಒತ್ತಾಯಿಸುತ್ತಿದ್ದಾರೆ. ಅಂದಹಾಗೆ, ಮೇಕಿಂಗ್ ವಿಡಿಯೋದಲ್ಲಿ ಏನಿದೆ? ಗೂಗ್ಲಿ ಗೂಗ್ಲಿ ಗಲ್ಲಿ ಗಲ್ಲಿಗಳಲ್ಲಿ ಬೀಳಲಿ. ವೀಕೆಂಡ್‌ನಲ್ಲಿ ಹೋಮ್ ಟೌನ್‌ಗೆ ಹೋಗುವಾಗ ಕನಸೊಂದು ಬಿತ್ತು.. ಎಂದು ಹಾಡಿನ ಮೂಲಕ ಶುರುವಾಗುವ ಈ ಮೇಕಿಂಗ್ ವಿಡಿಯೋದಲ್ಲಿ ಇಡೀ ಸಿನಿಮಾ ಶುರುವಾಗಿದ್ದು ಹೇಗೆ ಬಳಿಕ ಆ ಚಿತ್ರಕ್ಕೆ ಯಾರೆಲ್ಲ ಕೈ ಜೋಡಿಸಿದರು ಎಂಬುದರ ವಿವರವೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net