61ರ ಬಾಲಯ್ಯನ ಚಿತ್ರ ರಿಜೆಕ್ಟ್ ಮಾಡಿ 42ರ ಪ್ರಭಾಸ್ ಚಿತ್ರಕ್ಕೆ ಸಹಿ ಹಾಕಿದ 18ರ ಕೃತಿ ಶೆಟ್ಟಿ?

Published on
ಹೈದರಾಬಾದ್: ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಮೊದಲ ಮೂರು ಸಿನಿಮಾಗಳ ಮೂಲಕವೇ ಹ್ಯಾಟ್ರಿಕ್ ಹೀರೋಯಿನ್ ಎಂಬ ಪಟ್ಟ ಪಡೆದ 18 ವರ್ಷದ ನಟಿ ಕೃತಿ ಶೆಟ್ಟಿ ಅವರಿಗೆ ಸಾಲು ಸಾಲು ದೊಡ್ಡ ಚಿತ್ರಗಳ ಆಫರ್‌ಗಳು ಮಾತ್ರ ಬರ್ತಿವೆ. ಹೌದು, ಅತಿ ವೇಗವಾಗಿ ಯಶಸ್ಸು ಪಡೆದ ನಟಿಯರ ಪಟ್ಟಿಯಲ್ಲಿ ಕೃತಿ ಶೆಟ್ಟಿ ಅವರ ಹೆಸರು ಮೊದಲ ಸ್ಥಾನ ಪಡೆಯುತ್ತೆ. ತಮ್ಮ ಮೊದಲ ಚಿತ್ರ 'ಉಪ್ಪೇನಾ'ದಲ್ಲಿಯೇ ಈ ಯುವ ನಾಯಕಿ ಕೃತಿ ಶೆಟ್ಟಿ ಅವರಿಗೆ ಲಕ್ ಕುದುರಿದೆ ಎಂಬಂತೆ ಕಾಣುತ್ತಿದೆ. ಅವರ ಮೊದಲ ಸಿನಿಮಾ 'ಉಪ್ಪೇನಾ' ಬರೋಬ್ಬರಿ 100 ಕೋಟಿ ಗಳಿಸಿತ್ತು. ಹಾಗಾಗಿ, ಇವರನ್ನು ಟಾಲಿವುಡ್​ನ ಲಕ್ಕಿ ಕ್ವೀನ್ ಎಂದೇ ಕರೆಯಲಾಗುತ್ತಿದೆ.
ಇನ್ನು, ಅಂದಿನಿಂದ ಇಂದಿನವರೆಗೆ ನಟಿ ಕೃತಿ ಶೆಟ್ಟಿ ಮಾಡಿರುವ ಎಲ್ಲಾ ಚಿತ್ರಗಳು ಯಶಸ್ಸು ಕಂಡಿವೆ. ಸದ್ಯ, ನಟಿ ಕೃತಿ ಶೆಟ್ಟಿ ಹೆಸರು ಬಿಗ್‌ ಸ್ಟಾರ್‌ ನಟರ ಜೊತೆಗೆ ಕೇಳಿ ಬರ್ತಿದೆ. ಅಂದಹಾಗೆ, ಸಿನಿಮಾಗಳನ್ನು ತುಂಬಾ ಹುಷಾರಾಗಿ ಅಯ್ಕೆ ಮಾಡಿಕೊಳ್ಳುವ ಕೃತಿ, ಹಲವು ಸಿನಿಮಾಗಳನ್ನು ರಿಜೆಕ್ಟ್ ಮಾಡಿಯೇ ಸುದ್ದಿಯಾಗಿದ್ದರು. ಇತ್ತೀಚೆಗೆ, ನಟಿ ಕೃತಿ ಶೆಟ್ಟಿ ಅವರು ಬಾಲಯ್ಯನ 107 ನೇ ಸಿನಿಮಾದಲ್ಲಿ ಅಭಿನಯಿಸುವ ಆಫರ್ ಬೇಡ ಎಂದಿದ್ದಾರಂತೆ. ಸದ್ಯಕ್ಕೆ, ನಟಿ ಕೃತಿ ಚಿತ್ರರಂಗದಲ್ಲಿ ಹೆಚ್ಚು ವಯಸ್ಸಾಗಿರುವ ಹಿರಿಯ ನಟರ ಜೊತೆಗೆ ಅಭಿನಯ ಮಾಡುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈಗ ಒಬ್ಬ ಸ್ಟಾರ್ ನಟನ ಸಿನಿಮಾ ಒಪ್ಪಿಕೊಳ್ಳುವ ಮೂಲಕ ಹೆಚ್ಚು ಹೆಚ್ಚು ಸುದ್ದಿಯಲ್ಲಿದ್ದಾರೆ. ಸದ್ಯ, ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ, ಬುಟ್ಟ ಬೊಮ್ಮಾ ಪೂಜಾ ಹೆಗ್ಡೆ ಬಿಟ್ಟರೆ ಟಾಲಿವುಡ್‌ನಲ್ಲಿ ಅತಿ ಹೆಚ್ಚು ಹೆಸರು ಮಾಡುತ್ತಿರುವ ನಟಿ ಅಂದರೆ ಅದು ಕೃತಿ ಶೆಟ್ಟಿ ಎನ್ನಲಾಗಿದೆ. ನಟಿ ಕೃತಿ ಶೆಟ್ಟಿ ಈಗ 'ಬಾಹುಬಲಿ' ನಟ ಡಾರ್ಲಿಂಗ್ ಪ್ರಭಾಸ್ ಅವರ ಜೊತೆಗೆ ತೆರೆಹಂಚಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಕೃತಿ ಶೆಟ್ಟಿ ಅವರಿಗೆ ಪ್ರಭಾಸ್ ಜೊತೆಗೆ ಅಭಿನಯಿಸುವ ಒಂದು ಅವಕಾಶ ಸಿಕ್ಕಿದೆಯಂತೆ. ನಟ ಪ್ರಭಾಸ್ ಅವರ ಮುಂಬರುವ ನಿರ್ದೇಶಕ ಮಾರುತಿ ಅವರ 'ರಾಜಾ ಡಿಲಕ್ಸ್' ಸಿನಿಮಾದಲ್ಲಿ ಕೃತಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಅಂದಹಾಗೆ, 'ರಾಜಾ ಡಿಲಕ್ಸ್' ಸಿನಿಮಾದಲ್ಲಿ ಮೂವರು ನಾಯಕಿಯರು ತೆರೆ ಮೇಲೆ ಮಿಂಚಲಿದ್ದಾರೆ ಎನ್ನಲಾಗಿದೆ. ಇನ್ನು, ನಟಿ ಮಾಳವಿಕಾ ಮೋಹನನ್, ನಟಿ ಶ್ರೀಲೀಲಾ ಈಗಾಗಲೇ ಈ ಸಿನಿಮಾಗೆ ಇಬ್ಬರೂ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದ್ದು, ಮೂರನೇ ನಟಿಯಾಗಿ ಮೆಹ್ರೀನ್ ಪಿರ್ಜಾದಾ ಅವರು ಆಯ್ಕೆಯಾಗಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ, ನಟಿ ಮೆಹ್ರೀನ್ ಪಿರ್ಜಾದಾ ಅವರನ್ನು ಕೈಬಿಟ್ಟಿದ್ದು ಅವರ ಸ್ಥಾನಕ್ಕೆ ನಟಿ ಕೃತಿ ಶೆಟ್ಟಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲಿಯೂ, ಈ ಚಿತ್ರಕ್ಕೆ ಕೃತಿ ಶೆಟ್ಟಿ ಮುಖ್ಯ ನಾಯಕಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸದ್ಯ, ಈ ವಿಚಾರ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗುತ್ತಿದೆ. ಇನ್ನು, ಈ ಎಲ್ಲಾ ಕುತೂಹಲಗಳಿಗೆ ಉತ್ತರ ಸಿಗುವುದು ಕೇವಲ ಈ ಚಿತ್ರತಂಡ ಅಧಿಕೃತ ಪ್ರಕಟಣೆ ಮಾಡಿದಾಗ. ಇದೀಗ, 61 ವರ್ಷದ ಬಾಲಯ್ಯನ ಸಿನಿಮಾವನ್ನು ರಿಜೆಕ್ಟ್ ಮಾಡಿ 42 ವರ್ಷದ ಪ್ರಭಾಸ್ ಸಿನಿಮಾವನ್ನು 18 ವರ್ಷದ ಕೃತಿ ಶೆಟ್ಟಿ ಹೇಗೆ ಒಪ್ಪಿಕೊಂಡರು ಎಂಬ ಮಾತುಗಳು ಕೇಳಬರುತ್ತಿವೆ. ಬಾಲಯ್ಯ ಹಾಗೂ ಕೃತಿ ಅವರಿಗೆ ಬರೋಬ್ಬರಿ 43 ವರ್ಷಗಳು ಅಂತರವಿದ್ದರೆ, ಮತ್ತೊಂದೆಡೆ ನಟ ಪ್ರಭಾಸ್ ಹಾಗೂ ಕೃತಿ ಅವರಿಗೆ ಬರೋಬ್ಬರಿ 24 ವರ್ಷಗಳ ವಯಸ್ಸಿನ ಅಂತರವಿದೆ. ಹಾಗಾಗಿ, ನಟ ಪ್ರಭಾಸ್ ಕೂಡಾ ಕೃತಿ ಅವರಿಗಿಂತ ವಯಸ್ಸಿಲ್ಲಿ ತುಂಬಾನೆ ದೊಡ್ಡವರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net