ಪ್ರಭಾಸ್ ಜತೆ ಮದುವೆ ಆಗುವಾಸೆ; ನಟಿ ಕೃತಿ ಸನಾನ್...

Krihti
Published on

ಸಿನಿಮಾ ನಟಿಯರಿಗೆ ಮದುವೆ ಯಾವಾಗ, ಯಾರ ಜತೆ ಅಂತೆಲ್ಲ ಪ್ರಶ್ನೆಗಳು ಸಾಮಾನ್ಯ ವಿಷಯ. ನಟಿಯರು ಸಹ ಈ ಪ್ರಶ್ನೆಗಳಿಗೆ ಉತ್ತರಿಸಿ, ಉತ್ತರಿಸಿ ಸುಸ್ತಾಗಿ ಹೋಗಿರುತ್ತಾರೆ. ಕೆಲವರು ಈ ಪ್ರಶ್ನೆಗಳನ್ನು ಹಗುರವಾಗಿ ಸ್ವೀಕರಿಸಿ, ತಮಾಷೆಯಾಗಿ ಉತ್ತರಿಸುತ್ತಾರೆ. ಇತ್ತೀಚೆಗೆ, ಬಾಲಿವುಡ್​ನ ಬೇಡಿಕೆಯ ನಟಿ ಕೃತಿ ಸನಾನ್ ಸಹ ಇದೇ ತಂತ್ರವನ್ನು ಅನುಸರಿಸಿದ್ದಾರೆ. ಇತ್ತೀಚೆಗೆ, ಸಂದರ್ಶನವೊಂದರಲ್ಲಿ ಕೃತಿಗೆ ಒಂದು ಪ್ರಶ್ನೆ ಕೇಳಲಾಗಿದೆ.

ಟೈಗರ್ ಶ್ರಾಫ್, ಕಾರ್ತಿಕ್ ಆರ್ಯನ್ ಮತ್ತು ಪ್ರಭಾಸ್ ನಡುವೆ ಯಾರ ಜತೆಗೆ ನೀವು ಡೇಟಿಂಗ್ ಮಾಡುವುದಕ್ಕೆ ಮತ್ತು ಮದುವೆಯಾಗುವುದಕ್ಕೆ ಇಷ್ಟಪಡುತ್ತೀರಿ ಎಂದು ಕೇಳಲಾಗಿದೆ. ತಕ್ಷಣವೇ ಕೃತಿ, ಪ್ರಭಾಸ್ ಹೆಸರು ಹೇಳಿದ್ದಾರೆ. ಪ್ರಭಾಸ್ ಹೆಸರು ಕೇಳಿಬರುತ್ತಿದ್ದಂತೆ ಗುಸುಗುಸು ಶುರುವಾಗಿದೆ. ‘ಆದಿಪುರುಷ್’ ಚಿತ್ರದಲ್ಲಿ ಪ್ರಭಾಸ್ ಮತ್ತು ಕೃತಿ ಜತೆಯಾಗಿ ನಟಿಸುತ್ತಿದ್ದು, ಅವರಿಬ್ಬರ ನಡುವೆ ಅಫೇರ್ ಇರಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ‘ಆದಿಪುರುಷ್’ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡರೆ, ಸೀತೆಯಾಗಿ ಕೃತಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ‘ಬಚ್ಚನ್ ಪಾಂಡೆ’, ‘ಹಮ್ ದೋ ಹಮಾರೇ ದೋ’, ‘ಗಣಪತ್’ ಮುಂತಾದ ಚಿತ್ರಗಳಲ್ಲಿ ಕೃತಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net