ರಾಮ ಪ್ರಭಾಸ್​ಗೆ ಸೀತೆಯಾದ ಕೃತಿ

Kriti Sanon
Kriti Sanon
Published on

ರಾಮಾಯಣವನ್ನು ಆಧರಿಸಿ ಬಹುಭಾಷೆಗಳಲ್ಲಿ ‘ಆದಿಪುರುಷ್’ ಸಿನಿಮಾ ಸಿದ್ಧವಾಗುತ್ತಿದೆ. ಪ್ರಭಾಸ್ ರಾಮನಾಗಿ ನಟಿಸುತ್ತಿದ್ದರೆ, ಲಕ್ಷ್ಮಣನಾಗಿ ಸನ್ನಿ ಸಿಂಗ್ ಬಣ್ಣ ಹಚ್ಚುತ್ತಿದ್ದಾರೆ. ರಾವಣನ ಅವತಾರದಲ್ಲಿ ಸೈಫ್ ಅಲಿಖಾನ್ ಖದರ್ ತೋರಿಸುತ್ತಿದ್ದಾರೆ.

ಆದರೆ, ಸೀತೆ ಯಾರಾಗಲಿದ್ದಾರೆ? ಎಂಬ ವಿಷಯ, ಕಳೆದ ಕೆಲವು ತಿಂಗಳುಗಳಿಂದ ಕುತೂಹಲ ಮೂಡಿಸಿತ್ತು. ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಬಾಲಿವುಡ್ ನಟಿ ಕೃತಿ ಸನೋನ್ ’ಆದಿಪುರುಷ್’ ಚಿತ್ರದಲ್ಲಿ ಸೀತೆಯಾಗಿದ್ದಾರೆ.

ಸಿನಿಮಾ ಘೋಷಣೆ ಆದ ದಿನದಿಂದ ಸೀತೆಯ ಪಾತ್ರ ಯಾರು ಮಾಡಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಆ ಪಾತ್ರಕ್ಕೆ ತಕ್ಕಂತೆ ಒಂದಷ್ಟು ನಟಿಯರ ಹೆಸರುಗಳು ತಳುಕು ಹಾಕಿಕೊಂಡಿದ್ದವು. ಕೃತಿ ಸನೋನ್, ಕಿಯಾರಾ ಅಡ್ವಾಣಿ, ಕೀರ್ತಿ ಸುರೇಶ್, ಅನುಷ್ಕಾ ಶೆಟ್ಟಿ, ಅನುಷ್ಕಾ ಶರ್ಮಾ ಹೀಗೆ ಹಲವರ ಹೆಸರುಗಳು ಹರಿದಾಡಿದ್ದವು.

ಆ ಪೈಕಿ ಕೃತಿಯೇ ಸೀತೆ ಎಂದು ಹೇಳಲಾಗಿತ್ತಾದರೂ ಅಧಿಕೃತ ಸುದ್ದಿ ಹೊರಬಂದಿರಲಿಲ್ಲ. ಇದೀಗ ಶುಭ ಶುಕ್ರವಾರ ಚಿತ್ರತಂಡ ಸೀತೆಯನ್ನು ಬರಮಾಡಿಕೊಂಡಿದೆ. 2022ರ ಆಗಸ್ಟ್ 11ಕ್ಕೆ ‘ಆದಿಪುರುಷ್’ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದ್ದು, ‘ತಾನಾಜಿ: ದಿ ಅನ್​ಸಂಗ್ ವಾರಿಯರ್’ ಸಿನಿಮಾ ನಿರ್ದೇಶನ ಮಾಡಿದ್ದ ಓಂ ರಾವತ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಟಿ-ಸಿರೀಸ್​ನ ಭೂಷಣ್ ಕುಮಾರ್ ಚಿತ್ರ ನಿರ್ವಿುಸುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net