ನಾನು ಯಾರಿಗಾದರೂ ಉತ್ತರ ಕೊಡಬೇಕಾದರೆ ಅದು ಅವರಿಗೆ ಮಾತ್ರ, ಬೇರೆ ಯಾರಿಗೂ ಅಲ್ಲ. ನಿಮ್ಮ ರೂಮರ್ಸ್ ನನ್ನನ್ನು ನಿರ್ಧರಿಸಲಾರವು. ನಿಮ್ಮ ಸ್ಟೋರೀಸ್ ನನ್ನನ್ನು ಬದಲಾಯಿಸಲಾರವು. ನಿಮ್ಮ ಪ್ರಯತ್ನಗಳು ನನ್ನ ಆತ್ಮವನ್ನು ಮುರಿಯಲಾರವು. ಯಾಕೆಂದರೆ ನನ್ನನ್ನು ದೇವರು ಕಾಪಾಡುತ್ತಿದ್ದಾನೆ. ನನ್ನ ಜನ ಕಾಪಾಡುತ್ತಿದ್ದಾರೆ. ನಿಮ್ಮ ಮೇಲೆ ನನಗೆ ಕೋಪ ಇಲ್ಲ, ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ. ಒಂದು ದಿನ ನಿಮ್ಮ ಹೃದಯ ನಿಮ್ಮ ಅಭಿಪ್ರಾಯಕ್ಕಿಂತ ದೊಡ್ಡದಾಗಲಿ ಎಂದು. ಒಂದು ದಿನ ಬೇರೆಯವರ ನೋವು, ನಿಮಗೆ ಎಂಟಟೈನ್ಮೆಂಟ್ ಆಗದೆ ನಿಜವಾದ ನೋವಾಗಿ ಕಾಣಲಿ ಎಂದು. ಒಂದು ದಿನ ನಿಮ್ಮ ಜೀವನದಲ್ಲಿ ಅಷ್ಟೊಂದು ಪ್ರೀತಿ ತುಂಬಿರಲಿ, ಬೇರೆಯವರ ಗಾಯಗಳಲ್ಲಿ ಸಂತೋಷ ಹುಡುಕುವ ಅಗತ್ಯವೇ ಬರದಿರಲಿ ಎಂದೂ ನಟಿ ಈ ಹಿಂದೆ ಪೋಸ್ಟ್ ಮಾಡಿದ್ದರು.