

| ಚೇತನ್
ಎಲ್ಲರೂ ಇದು ಅವನದೇ ಆಟ ಅಂದುಕೊಂಡಿರುತ್ತಾರೆ. ಪೋಲ್ಯಾಂಡ್ನಲ್ಲಾದ ಬ್ಲಾಸ್ಟ್ಗಳು, ಅಲ್ಲಿನ ಮ್ಯೂಜಿಯಂನಲ್ಲಿ ಕಳ್ಳತನ, ಇಂಟರ್ಪೋಲ್ನವರೊಂದಿಗೆ ಕಣ್ಣಾಮುಚ್ಚಾಲೆಯಾಟ ... ಇದೆಲ್ಲದರಲ್ಲೂ ಸತ್ಯನ ಕೈವಾಡ ಇದೆ ಎಂದು ನಂಬಿರುತ್ತಾರೆ. ಹಿಂದಿನ ಭಾಗದಂತೆ ಇಲ್ಲೂ ಶಿವ ಎಂಬ ಇನ್ನೊಂದು ಹೆಸರಿನಲ್ಲಿ ಸತ್ಯನೇ ಮಾಡುತ್ತಿದ್ದಾನೆ ಎಂಬ ತೀರ್ಮಾನಕ್ಕೆ ಎಲ್ಲರೂ ಬಂದಿರುತ್ತಾರೆ. ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡುವಷ್ಟು ಬೆಳೆದಿದ್ದಾನೆ ಎಂದೇ ಎಲ್ಲರೂ ಭಾವಿಸಿರುತ್ತಾರೆ. ನಿಜಕ್ಕೂ ಇವೆಲ್ಲವನ್ನೂ ಸತ್ಯನೇ ಮಾಡುತ್ತಿದ್ದಾನಾ? ಅಥವಾ ಅವನ ಹಿಂದೆ ಕಾಣದ ಕೈಗಳೇನಾದರೂ ಇವೆಲ್ಲವನ್ನೂ ಮಾಡಿಸುತ್ತಿವೆಯಾ?
ಹಾಗಾಗಿ, ಚಿತ್ರವನ್ನು ಪುನ@ ಟ್ರಾಕ್ಗೆ ತರುವುದಕ್ಕೆ ಸುದೀಪ್ ನೆಲೆಯೂರುವವರಿಗೂ ಕಾಯಬೇಕು. ಅವರ ಜತೆಗೆ ರವಿಶಂಕರ್ ಸೇರಿಕೊಳ್ಳುವವರೆಗೂ ತಾಳ್ಮೆಯಿಂದ ಇರಬೇಕು. ಇದೆಲ್ಲವೂ ಸಾಧ್ಯವಾಗುವುದು ದ್ವೀತಿಯಾರ್ಧದಲ್ಲಿ. ಅಲ್ಲಿಂದ ಚಿತ್ರಕ್ಕೊಂದು ವೇಗ ಸಿಗುತ್ತದೆ. ಚಿತ್ರ ಮುಗಿಯುವುದಕ್ಕೆ ಅರ್ಧ ಗಂಟೆ ಇರುವಾಗ, ಯಾರೂ ನಿರೀಸದ ಒಂದು ಸಖತ್ ಟ್ವಿಸ್ಟ್ ಇದೆ. ಅದೇ ಚಿತ್ರದ ದೊಡ್ಡ ಹೈಲೈಟ್ ಎಂದರೆ ತಪ್ಪಿಲ್ಲ. ಸುದೀಪ್ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದಾರೆ. ನಟನೆ, ಹಾಡು, ೈಟು ಎಲ್ಲದರಲ್ಲೂ ಮಿಂಚಿದ್ದಾರೆ. ರವಿಶಂಕರ್ ಎಂದಿನಂತೆ ಇಷ್ಟವಾಗುತ್ತಾರಾದರೂ, ಅವರು ಪದೇಪದೇ ನಾಯಕನನ್ನು ಹೊಗಳುವುದು, ಬಿಲ್ಡಪ್ ಕೊಡುವುದು ಕಿರಿಕಿರಿ ಎಂದನಿಸುತ್ತದೆ. ಮಿಕ್ಕ ಪಾತ್ರಗಳು ಹೇಗಾದರೂ ಇರಲಿ, ಪಾತ್ರಧಾರಿಗಳಂತೂ ತೀರಾ ಸಪ್ಪೆ. ಮಡೋನಾ, ಅ್ತಾಭ್, ಶ್ರದ್ಧಾ ಮುಂತಾದವರು ಬಹಳ ಕಷ್ಟಪಟ್ಟು ನಟಿಸಿರುವುದು ಗೊತ್ತಾಗುತ್ತದೆ. ತಾಂತ್ರಿಕತೆಯ ವಿಷಯದಲ್ಲಿ ಚಿತ್ರ ಗಟ್ಟಿಯಾಗಿದೆ. ಅರ್ಜುನ್ ಜನ್ಯಾ ಹಾಡುಗಳು, ಶೇಖರ್ ಚಂದ್ರು ಛಾಯಾಗ್ರಣದ ಜತೆಗೆ ಗಮನಸೆಳೆಯುವ ಇನ್ನೊಂದು ಅಂಶವೆಂದರೆ ಅರುಣ್ ಸಾಗರ್ ಅವರ ಕಲಾ ನಿರ್ದೇಶನ. ಪರಿಸರವನ್ನು ಅದ್ಧೂರಿಯಾಗಿ ಕಟ್ಟಿಕೊಡಲು ಅರುಣ್ ಪಾತ್ರವೂ ದೊಡ್ಡದಿದೆ. ಇವರೆಲ್ಲರ ಸಹಯೋಗದಿಂದ ಶಿವಕಾರ್ತಿಕ್ ಮೊದಲ ಪ್ರಯತ್ನದಲ್ಲೇ ಗಮನಸೆಳೆಯುತ್ತಾರೆ.
ಚಿತ್ರ: ಕೋಟಿಗೊಬ್ಬ 3 ನಿರ್ದೇಶನ: ಶಿವಕಾರ್ತಿಕ್ ನಿರ್ಮಾಣ: ಸೂರಪ್ಪ ಬಾಬು ತಾರಾಗಣ: ಸುದೀಪ್, ಮಡೋನಾ ಸೆಬಾಸ್ಟಿಯನ್, ರವಿಶಂಕರ್, ನವಾಬ್ ಷಾ, ರಂಗಾಯಣ ರು ಮುಂತಾದವರು.