

ಬೆಂಗಳೂರು: ಕಿಚ್ಚ ಸುದೀಪ್ ನಟನೆಯ ಚಿತ್ರ ಕೋಟಿಗೊಬ್ಬ 3 ಟೀಸರ್ ಯೂಟ್ಯೂಬ್ನಿಂದ ತೆಗೆಯಲಾಗಿದೆ. ನಿರ್ಮಾಪಕ ಸೂರಪ್ಪ ಬಾಬು ಹಾಗೂ ಸಂಜಯ್ ಪೌಲ್ ನಡುವಿನ ಗಲಾಟೆಯಿಂದ ಟ್ರೇಲರ್ ಎತ್ತಂಗಡಿಯಾಗಿದೆ.
ಇತ್ತೀಚೆಗಷ್ಟೆ ಟೀಸರ್ ಬಿಡುಗಡೆ ಆಗಿದ್ದು. ಯೂಟ್ಯೂಬ್ನಲ್ಲಿ ಸಖತ್ ಸೌಂಡ್ ಮಾಡಿತ್ತು. ಆದರೆ, ಸಂಜಯ್ ಕುಮಾರ್ ಪೌಲ್ ಎಂಬುವವರು ಕೋಟಿಗೊಬ್ಬ 3 ಟೀಸರ್ ಕಾಪೀ ರೈಟ್ಸ್ ಬಗ್ಗೆ ದೂರು ನೀಡಿದ್ದಾರೆ. ಹೀಗಾಗಿ ಯುಟ್ಯೂಬ್ನಿಂದ ಲೇಟೆಸ್ಟ್ ಟೀಸರ್ ಕಾಣೆಯಾಗಿದೆ.
ಯುಟ್ಯೂಬ್ನಿಂದ ಕೋಟಿಗೊಬ್ಬ 3 ಟೀಸರ್ ತೆಗೆದಿರುವ ಬಗ್ಗೆ ಸುದೀಪ್ ಟ್ವೀಟರ್ನಲ್ಲಿ ಪ್ರತಿಕ್ರಿಯಿಸಿದ್ದಾರೆ. "ಸದ್ಯ ಮಾನವಕುಲ ಎದುರಿಸುತ್ತಿರುವ ತೊಂದರೆಗಿಂತ ಇದೇನು ದೊಡ್ಡ ಟ್ರಬಲ್ ಅಲ್ಲ. ಟೀಸರ್ ಆದಷ್ಟು ಬೇಗ ಮತ್ತೆ ಯುಟ್ಯೂಬ್ನಲ್ಲಿ ಅಪ್ಲೋಡ್ ಆಗುತ್ತೆ. ರಿಲೀಸ್ ಕೂಡ ಸಮಯ ಬಂದಾಗ ಅಗುತ್ತೆ" ಎಂದಿದ್ದಾರೆ.
ಟೀಸರ್ ಯೂಟ್ಯೂಬ್ನಿಂದ ತೆಗೆದ ಬಗ್ಗೆ ಸುದೀಪ್ ಇಂಗ್ಲಿಷ್ನಲ್ಲಿ ಟ್ವಿಟ್ ಮಾಡಿರುವ ಬಗ್ಗೆ ಸಂಜಯ್ ಎಸ್.ಕೆ, ಎನ್ನುವವರು ಕೆಟ್ಟದಾಗಿ ಬರೆದಿದ್ದಾರೆ. ಇದಕ್ಕೆ ಸುದೀಪ್ ರೀಟ್ವೀಟ್ ಮಾಡಿ "ಯಾರಾದ್ರು ಈ ವ್ಯಕ್ತಿಯನ್ನು ಹುಡುಕಿಕೊಡಿ, ಅವರ ಜತೆ ಮೀಟ್ ಅಂಡ್ ಗ್ರೀಟ್ ಮಾಡಿ ಹೇಗೆ ಮಾತನಾಡಬೇಕು ಎನ್ನುವುದನ್ನು ಹೇಳಿಕೊಡ್ತಿನಿ" ಎಂದು ನಯವಾಗಿಯೇ ಪ್ರತ್ಯುತ್ತರ ನೀಡಿದ್ದಾರೆ.