

ಬೆಂಗಳೂರು: ‘ಬಿಗ್ ಬಾಸ್’ ಖ್ಯಾತಿಯ ಚಂದನ್ ಆಚಾರ್ ಈಗ ಕಿಚ್ಚ ಸುದೀಪ್ಗೆ ಹೇರ್ಕಟ್ ಮಾಡಬೇಕಂತೆ. ಅರೇ ಚಂದನ್ ಯಾಕೆ ಸುದೀಪ್ ಅವರ ಹೇರ್ ಕಟ್ ಮಾಡುತ್ತಾರೆ ಎಂದರೆ, ಅದಕ್ಕೆ ಉತ್ತರ ‘ಮಂಗಳವಾರ ರಜಾ ದಿನ’.
ಹೌದು, ಚಂದನ್ ಆಚಾರ್ ನಾಯಕರಾಗಿ ನಟಿಸಿರುವ ‘ಮಂಗಳವಾರ ರಜಾ ದಿನ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ವೈರಲ್ ಆಗಿದೆ. ಈ ಟ್ರೇಲರ್ನಲ್ಲಿ ನಾಯಕ, ಸುದೀಪ್ ಅವರಿಗೆ ಹೇರ್ ಕಟ್ ಮಾಡಬೇಕು ಎಂಬ ಕನಸು ಕಾಣುತ್ತಿರುತ್ತಾನೆ. ಹಾಗಾದರೆ, ಸುದೀಪ್ ಈ ಚಿತ್ರದಲ್ಲಿ ನಟಿಸಿದ್ದಾರಾ, ಅವರಿಗೆ ನಾಯಕ ಹೇರ್ ಕಟ್ ಮಾಡುತ್ತಾನಾ ಎಂಬ ಪ್ರಶ್ನೆ ಬರಬಹುದು.
ಈ ಕುರಿತು ಮಾತನಾಡುವ ಚಂದನ್, ‘ಈ ಚಿತ್ರದಲ್ಲಿ ಸುದೀಪ್ ಅವರಿಗೆ ಹೇರ್ ಕಟ್ ಮಾಡಬೇಕು ಎಂದು ಕನಸು ಕಾಣುತ್ತಿರುವ ಯುವಕನ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಈ ಟ್ರೇಲರ್ ಈಗ ವೈರಲ್ ಆಗಿದ್ದು ಸುದೀಪ್ ಅವರಿಗೂ ರೀಚ್ ಆಗಿದೆ. ನಮ್ಮ ಟ್ರೇಲರ್ ಮೆಚ್ಚಿಕೊಂಡು ಅವರು ಟ್ವೀಟ್ ಮಾಡಿದ್ದಾರೆ. ಅಂದರೆ ಸುದೀಪ್ ಈ ಚಿತ್ರದಲ್ಲಿ ನಟಿಸಿದ್ದಾರ ಇಲ್ಲವಾ ಎಂಬುದನ್ನು ಚಿತ್ರದಲ್ಲಿಯೇ ನೋಡಿ’ ಎನ್ನುತ್ತಾರೆ ಚಂದನ್.
‘ಒಳ್ಳೆಯ ಸಿನಿಮಾ ಮಾಡಿದ್ದೇವೆ, ಅದು ಜನರಿಗೆ ಒಂದಷ್ಟು ರೀಚ್ ಆಗಿದೆ. ನಮ್ಮ ಸಿನಿಮಾದ ಮೇನ್ ಥೀಮ್ ಟ್ರೇಲರ್ ಮೂಲಕ ಅನಾವರಣಗೊಂಡಿದ್ದು, ಉಳಿದ ಸಿಕ್ರೇಟ್ ಸಿನಿಮಾದಲ್ಲಿರಲಿದೆ’ ಎಂದಷ್ಟೇ ಹೇಳುವ ನಿರ್ದೇಶಕ ಯುವಿನ್, ಸುದೀಪ್ ನಟಿಸಿದ್ದಾರಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಬಿಟ್ಟುಕೊಡುವುದಿಲ್ಲ. ಸದ್ಯದಲ್ಲೆ ಚಿತ್ರ ರಿಲೀಸ್ ಆಗಲಿದ್ದು, ಆಗ ಎಲ್ಲವೂ ರಿವೀಲ್ ಆಗುತ್ತದೆ ಎನ್ನುತ್ತಾರವರು. ‘ಮಂಗಳವಾರ ರಜಾದಿನ’ ಚಿತ್ರದಲ್ಲಿ ಚಂದನ್ ಆಚಾರ್ಗೆ ನಾಯಕಿಯಾಗಿ ಲಾಸ್ಯ ನಾಗರಾಜ್ ನಟಿಸಿದ್ದು, ಗೋಪಾಲ್ ದೇಶಪಾಂಡೆ ಮುಖ್ಯಪಾತ್ರದಲ್ಲಿದ್ದಾರೆ.