ರೈತನ ಸಮಸ್ಯೆಯನ್ನು ಹೇಳುವುದಕ್ಕೆ ಸಿದ್ಧವಾಯ್ತು ಸಿನಿಮಾ ‘ಕೂಗು’

ರೈತ
Published on

ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್​ವುಡ್​ನಲ್ಲಿ ರೈತರ ಬಗ್ಗೆ ಸಾಕಷ್ಟು ಸಿನಿಮಾಗಳು ಮೂಡಿ ಬರುತ್ತಿದ್ದು, ಆ ಸಾಲಿಗೆ ಹೊಸ ಸೇರ್ಪಡೆ ‘ಕೂಗು’. ಭಾಸ್ಕರ್ ಫಿಲಂಸ್ ಬ್ಯಾನರ್​ನಲ್ಲಿ ಡಾ.ಕೆ.ಪದ್ಮನಾಭನ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ರೈತರು ದೇಶಕ್ಕೆ ಬಹಳ ಅನಿವಾರ್ಯ, ಆದರೆ ಅವರ ಬದುಕು ಇಂದು ನೆಮ್ಮದಿಯಾಗಿಲ್ಲ ಎಂಬ ಅಂಶಗಳನ್ನು ತೆರೆಗೆ ತರಲಾಗಿದೆಯಂತೆ.

ಸದ್ಯದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರವನ್ನು ಆರ್.ರಂಗನಾಥ್ ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದಾರೆ. ಎ.ಟಿ. ರವೀಶ್ ಸಂಗೀತ ನೀಡಿದ್ದು, ಚಂದ್ರಣ್ಣ ಛಾಯಾಗ್ರಹಣ, ಸೋಸಲೆ ಗಂಗಾಧರ ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ. ಡಾ. ಕೆ.ಪದ್ಮನಾಭನ್, ಸಂಗೀತ, ವರ್ಷ,ದತ್ತ, ಅಶೋಕ್ ಡಾಬಾ, ಧನಂಜಯಸ್ವಾಮಿ ಕುಣಿಗಲ್, ಧನಂಜಯ ರಕ್ಷಣಾ ವೇದಿಕೆ, ನಟಿಸಿದ್ದಾರೆ. ಇವರೆಲ್ಲರ ಜತೆಗೆ ನಾಗಮಂಗಲ ಶಾಸಕ ಸುರೇಶ್ ಗೌಡ ಸಹ ಚಿತ್ರದ ಒಂದು ಪಾತ್ರದಲ್ಲಿದ್ದಾರೆ.

ಜಾಲಿಬಾಸ್ಟಿನ್, ವೇಲು ಸಾಹಸ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೆಶನವನ್ನು ಮಾಡಿದ್ದಾರೆ. ರಮೇಶ್ ಕನಸಿನ ಭಾರತ ಕಥೆ, ಹರೀಶ್ ನಾಗರಾಜ್ ಮಂಚೇನಹಳ್ಳಿ ಸಹ ನಿಮಾಪಕರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net