ಚಾಮರಾಜನಗರದಲ್ಲಿ ಕಬ್ಬಿಣ ವ್ಯಾಪಾರಿ ಮೇಲೆ ಗುಂಡಿನ ದಾಳಿ

crime
Published on

ಚಾಮರಾಜನಗರ: ದುಷ್ಕರ್ಮಿಗಳ ತಂಡ ವ್ಯಾಪಾರಿ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಚಾಮರಾಜನಗರದ ಕೆ.ಸಿ.ಮೊಹಲ್ಲಾದ ರಾಜಿಕ್​ ಅಹಮದ್​ ಎಂಬುವವರ ಮೇಲೆ ಗುಂಡಿನ ದಾಳಿ ನಡೆದಿದೆ. ರಾಜಿಕ್​ ಅಹಮದ್​ ಅವರ ತೊಡಗೆ ಗುಂಡು ಹೊಕ್ಕಿವೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ.

ಫಾರೂಕ್, ತೌಷಿರ್ ಹಾಗೂ ಶಾಜನ್ ಎಂಬುವವರು ಗುಂಡು ಹಾರಿಸಿ ತಲೆ ಮರಸಿಕೊಂಡಿದ್ದಾರೆ.

ಫಾರೂಕ್​ ಹಾಗೂ ರಾಜಿಕ್​ ಹಲವು ವರ್ಷಗಳಿಂದ ಕಬ್ಬಿಣದ ವ್ಯವಹಾರವನ್ನು ಪಾಲುದಾರಿಕೆಯಲ್ಲಿ ನಡೆಸುತ್ತಿದ್ದರು.

ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಇಬ್ಬರು ಪ್ರತ್ಯೇಕವಾಗಿ ವ್ಯವಹಾರ ನಡೆಸುತ್ತಿದ್ದರು. ಇತ್ತೀಚೆಗೆ ರಾಜಿಕ್​ ಕಡಿಮೆ ಬೆಲೆಗೆ ಕಬ್ಬಿಣ ಮಾರಾಟ ಮಾಡುತ್ತಿದ್ದರು. ಇದರಿಂದ ಫಾರೂಕ್​ಗೆ ನಷ್ಟ ಉಂಟಾಗಿತ್ತು. ಕಡಿಮೆ ಬೆಲೆಗೆ ಮಾರಾಟ ಮಾಡದಂತೆ ಅವರು ಎಚ್ಚರಿಸಿದ್ದರು. ಹೀಗಿದ್ದರೂ ರಾಜಿಕ್​ ಕಡಿಮೆ ಬೆಲೆಗೆ ಕಬ್ಬಿಣ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಮರಾಜನಗರ ಟೌನ್ ಪೊಲೀಸರು ಕೇಸು ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.(ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net