

ಚೆನ್ನೈ: ಕಳೆದ ವರ್ಷವೇ ಬಿಡುಗಡೆ ಆಗಬೇಕಿದ್ದ ಕಾಲಿವುಡ್ ಸ್ಟಾರ್ ಧನುಷ್ ಅವರ ಜಗಮೇ ತಾಂಧಿರಮ್ ಚಿತ್ರ ಇದೀಗ ಚಿತ್ರಮಂದಿರದ ಬದಲು ಓಟಿಟಿಯಲ್ಲಿ ರಿಲೀಸ್ ಆಗಲು ಸಿದ್ಧತೆ ಮಾಡಿಕೊಂಡಿದೆ. ಅದರಂತೆ ದಿನಾಂಕವೂ ನಿಗದಿಯಾಗಿದೆ.
ಇದನ್ನೂ ಓದಿ: ಕರೊನಾ ನಡುವೆಯೂ ಚಿತ್ರೀಕರಣ ಮುಂದುವರೆಸಿದ ರಜನಿಕಾಂತ್
ಹೌದು, ಕಾರ್ತಿಕ್ ಸುಬ್ಬರಾಜು ನಿರ್ದೇಶನದಲ್ಲಿ ಸಿದ್ಧವಾಗಿರುವ ಜಗಮೇ ತಾಂಧಿರಮ್ ಚಿತ್ರ ನೆಟ್ಫ್ಲಿಕ್ಸ್‘ನಲ್ಲಿ ಜೂನ್ 18ಕ್ಕೆ ಬಿಡುಗಡೆ ಆಗಲಿದೆ. ಈ ವಿಚಾರವನ್ನು ಸ್ವತಃ ನೆಟ್ಫ್ಲಿಕ್ ಹೇಳಿಕೊಂಡಿದ್ದು, ಚಿತ್ರತಂಡವೂ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದೆ.
ಗ್ಯಾಂಗಸ್ಟರ್ ಡ್ರಾಮಾ ಶೈಲಿಯ ಈ ಸಿನಿಮಾದಲ್ಲಿ ಗ್ಯಾಂಗ್ಸ್ಟರ್ ಸುರುಲಿಯಾಗಿ ಧನುಷ್ ಪಾತ್ರ ಮೂಡಿಬಂದಿದ್ದು, ಐಶ್ವರ್ಯಾ ಲಕ್ಷ್ಮೀ, ಕಲೈಅರಸನ್, ಸೇರಿ ಹಲವು ಖ್ಯಾತನಾಮ ಕಲಾವಿದರು ಚಿತ್ರದ ಭಾಗವಾಗಿದ್ದಾರೆ. ತಮಿಳಿನ ಜತೆಗೆ ತೆಲುಗಿನಲ್ಲಿಯೂ ಜಗಮೇ ತಂತ್ರಮ್ ಹೆಸರಿನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. -ಏಜೆನ್ಸೀಸ್