

ಪುಷ್ಪ-2 ಚಿತ್ರದ ಬಹುನಿರೀಕ್ಷಿತ ಐಟಂ ಸಾಂಗ್‌ನ ಪ್ರೋಮೋ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ. ರಿಲೀಸ್ ಆದ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದರಲ್ಲೂ ಪುಷ್ಪಾ 2ನ ಐಟಂ ಗರ್ಲ್ ಆಗಿ ಶ್ರೀಲೀಲಾ ಆಯ್ಕೆಯಾದಾಗಿನಿಂದ ಸ್ಪೇಷಲ್ ಸಾಂಗ್‌ಗಾಗಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದರು. ಇಂದು ಚಿತ್ರದ ವಿಶೇಷ ಹಾಡಿನ ಪ್ರೋಮೋ ರಿಲೀಸ್ ಆಗಿದ್ದು, ನಾಳೆ ವಿಶೇಷ ಹಾಡು ಬಿಡುಗಡೆಯಾಗುತ್ತಿದೆ.
ಇಂದು ʼಕಿಸ್ಸಿಕ್ʼ ಹಾಡಿನ ಪ್ರೋಮೋ ಬಿಡುಗಡೆಯಾಗಿದೆ. "ಕಿಸ್ ಕಿಸ್ ಕಿಸಾ" ಸಾಂಗಿನಲ್ಲಿ ಶ್ರೀಲೀಲಾ ಸ್ಪೇಪ್ಸ್ ಹೇಗಿರಲಿದೆ ಅಂತ ನೋಡೋಕೆ ಪ್ರೇಕ್ಷಕರು ಕಾಯುತ್ತಿದ್ದಾರೆ. ನವೆಂಬರ್ 24 ರಂದು ಸಂಜೆ 7:02 ಕ್ಕೆ ಫುಲ್ ಸಾಂಗ್ ರಿಲೀಸ್ ಆಗುತ್ತಿದೆ.
ಹಾಡನ್ನು ಸುಬ್ಲಾಷಿನಿ ತೆಲುಗು, ತಮಿಳು, ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಹಾಡಿದ್ದಾರೆ. ಲೋಹಿತಾ ಹಿಂದಿ, ಪ್ರಿಯಾ ಜೆರ್ಸನ್ ಮಲಯಾಳಂ, ಉಜ್ಜಯಿನಿ ಮುಖರ್ಜಿ ಬಂಗಾಳಿಯಲ್ಲಿ ಹಾಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ.
ಸದ್ಯ ಅಲ್ಲು ಅರ್ಜುನ್-ಸುಕುಮಾರ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಪುಷ್ಪ-2 ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅದರಲ್ಲೂ ಕಿಸಿಕ್ ಹಾಡಿನ ಮೇಲಿರುವ ನಿರೀಕ್ಷೆ ಸಾಕಷ್ಟಿದೆ.