ಪ್ಲೀಸ್​ ಕೊಡ್ತೀರಾ ಎಂದ ಬಾಲಕ: ಈ ರೀತಿ ಕೇಳಿದ್ರೆ ನಿನ್ನ ಅಮ್ಮ ನಿನ್ನನ್ನು ಕೊಂದೇ ಬಿಡ್ತಾರೆ ಅಂದ್ರು ಪೂನಂ ಪಾಂಡೆ!

Poonam Pandey
Published on

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಪಡ್ಡೆ ಹುಡುಗರ ಎದೆ ಝಲ್​ ಎನಿಸುವಂತಹ ಫೋಟೋ-ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಾ ಸದಾ ಸುದ್ದಿಯಲ್ಲಿರುವ ಪೂನಂ ಪಾಂಡೆ ಇದೀಗ ಬೇರೆ ಕಾರಣಕ್ಕೆ ಮತ್ತೆ ಸುದ್ದಿಯಾಗಿದ್ದಾರೆ. ಬಾಲಕನೊಬ್ಬ ಪೂನಂ ಪಾಂಡೆ ಬಳಿ ಇನ್​ಸ್ಟಾಗ್ರಾಂ ಐಡಿ ಕೇಳಿದ್ದಕ್ಕೆ ಆಕೆ ಕೊಟ್ಟ ಪ್ರತಿಕ್ರಿಯೆ ಇದೀಗ ವೈರಲ್​ ಆಗುತ್ತಿದೆ.

ಸದ್ಯ ಪೂನಂ ಪಾಂಡೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ರಿಕೆಟ್ ಆಡುತ್ತಿದ್ದ ಮಕ್ಕಳು ಪೂನಂ ಅವರನ್ನು ಕಂಡು, ಭೇಟಿಯಾಗಲು ಬರುತ್ತಾರೆ. ಬಳಿಕ ಅವರನ್ನು ನೋಡಿದ ಪೂನಂ, ಮಕ್ಕಳೇ ನೀವು ಎಲ್ಲಿ ಕ್ರಿಕೆಟ್ ಆಡುತ್ತಿದ್ದೀರಿ ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರಿಸುವ ಮಕ್ಕಳು ಇಲ್ಲಿಯೇ ಎಂದು ಹೇಳುತ್ತಾರೆ.

ಈ ವೇಳೆ ಪುಟ್ಟ ಬಾಲಕನೊಬ್ಬ ನಿಮ್ಮ ಬಳಿ Instagram ಐಡಿ ಇದೆಯೇ? ಇದ್ರೆ ಪ್ಲೀಸ್​ ಕೊಡ್ತೀರಾ ಎಂದು ಪೂನಂ ಅವರನ್ನು ಕೇಳುತ್ತಾನೆ. ಇದಕ್ಕೆ ಉತ್ತರಿಸುವ ಪೂನಂ, ನನ್ನ Instagram ID ಇಟ್ಟುಕೊಂಡು ನೀವು ಏನು ಮಾಡುತ್ತೀರಿ? ಎಂದು ಪ್ರಶ್ನಿಸುತ್ತಾರೆ. ಅಲ್ಲದೆ, ನಿನಗೆ ನಿನ್ನ ತಾಯಿಯ ಅಂದರೆ ಭಯವಿಲ್ಲವೇ? ಈ ರೀತಿ ವರ್ತಿಸಿದರೆ ಅಮ್ಮ ನಿನ್ನನ್ನು ಸಾಯಿಸುತ್ತಾಳೆ ಎಂದು ಪೂನಂ ಹೇಳುತ್ತಾರೆ.

ಬಳಿಕ ಪೂನಂ ತನ್ನ ಸುತ್ತಲೂ ನೆರೆದಿದ್ದ ಜನರನ್ನು ಉದ್ದೇಶಿಸಿ, ನೋಡಿ ಈ ಪುಟ್ಟ ಬಾಲಕ ನನ್ನ ಇನ್​ಸ್ಟಾಗ್ರಾಂ ಐಡಿ ಕೇಳುತ್ತಿದ್ದಾನೆ. ಅದೂ ಕೂಡ ಧೈರ್ಯ ಮಾಡಿ. ಇಂದಿನ ಮಕ್ಕಳನ್ನು ನೋಡಿ, ಅವರು Instagram ID ಕೇಳುತ್ತಾರೆ. ಈ ಬಗ್ಗೆ ನಾನು ನಿಮಗೆ ಮುಂಚೆಯೇ ಎಚ್ಚರಿಕೆ ಸಂದೇಶ ನೀಡುತ್ತಿದ್ದೇನೆ ಎಂದು ಪೂನಂ ಹೇಳಿದರು.

ಸದ್ಯ ಪೂನಂ ಪಾಂಡೆ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೇ ರೀತಿಯಲ್ಲಿ ಸಾಕಷ್ಟು ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗನೊಬ್ಬ "ಬಚ್ಚೆ ಮನ್ ಕೆ ಸಚ್ಜೆ" ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಪೂನಂ ಅವರ ಇನ್‌ಸ್ಟಾಗ್ರಾಮ್ ಐಡಿ ಮಕ್ಕಳಿಗಾಗಿ ಅಲ್ಲ ಎಂದು ತಿಳಿದಿದೆ ಅಂತಾ ಕಾಮೆಂಟ್​ ಮಾಡಿದ್ದಾರೆ.

ಅಂದಹಾಗೆ ಪೂನಂ ಪಾಂಡೆ ಸದಾ ಜನರ ಗಮನ ಸೆಳೆಯಲು ಮತ್ತು ಪ್ರಚಾರದಲ್ಲಿರಲು ಅನೇಕ ಸಾಹಸಗಳನ್ನು ಮಾಡುತ್ತಿರುತ್ತಾರೆ. ಕಳೆದ ಫೆ.1ರಂದು ಪೂನಂ ತಮ್ಮ ಸಾವಿನ ಸುದ್ದಿಯನ್ನು ಹಬ್ಬಿಸಿದ್ದರು. ಪೂನಂ ಪಾಂಡೆ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಸಾವಿನ ಬಗ್ಗೆ ತಿಳಿಸಲಾಗಿತ್ತು. ಗರ್ಭಕಂಠದ ಕ್ಯಾನ್ಸರ್​ನಿಂದ ಮೃತಪಟ್ಟಿದ್ದಾರೆ ಎಂದು ಎಲ್ಲ ಮಾಧ್ಯಮಗಳು ಸುದ್ದಿ ಮಾಡಿದ್ದವು. ಆಕೆಯ ಮ್ಯಾನೇಜರ್​ ಕೂಡ ಸಾವಿನ ಸುದ್ದಿ ಖಚಿತಪಡಿಸಿದ್ದ. ಆದರೆ, ಮರುದಿನ ಆಕೆ ಜೀವಂತವಾಗಿರುವುದಾಗಿ ಖಚಿತಪಡಿಸಿದರು. ನಾನಿನ್ನೂ ಬದುಕಿದ್ದೇನೆ. ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಜಾಗ್ರತೆ ಇರಲಿ. ಅದಕ್ಕಾಗಿ ಈ ವಿಡಿಯೋ ಮಾಡಿದೆ ಎಂದು ಹೇಳಿದ್ದರು. ಈ ಘಟನೆ ಬಳಿಕ ಪೂನಂ ಸಾಕಷ್ಟು ಟ್ರೋಲ್​ಗೆ ಗುರಿಯಾಗಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net