ಸಿಕ್ಸ್​ ಪ್ಯಾಕ್​ ಸುದೀಪ್​ ; 46ನೇ ಸಿನಿಮಾಗಾಗಿ ಕಿಚ್ಚನ ತಯಾರಿ

ಸುದೆಎಪ ನೆಡ
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕಿಚ್ಚ ಸುದೀಪ್​ ಸದ್ಯ 46ನೇ ಸಿನಿಮಾದ ಚಿತ್ರೀಕರಣದಲ್ಲಿ ಬಿಜಿಯಿದ್ದಾರೆ. ಮಹಾಬಲಿಪುರಂನಲ್ಲಿ ಶೂಟಿಂಗ್​ ನಡೆಯುತ್ತಿದ್ದು, ಚಿತ್ರಕ್ಕಾಗಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ತನು ನಿರ್ಮಿಸುತ್ತಿರುವ ಈ ಚಿತ್ರ, ವಿಜಯ್​ ಕಾರ್ತಿಕೇಯನ್​ ನಿರ್ದೇಶನದಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಪ್ಯಾನ್​ ಇಂಡಿಯಾ ಮೂಡಿಬರುತ್ತಿದೆ. ಈ ಹಿಂದೆ ಚಿತ್ರ ಹಾಗೂ ತಯಾರಿಯ ಬಗ್ಗೆ, "ಇದೇ ತಿಂಗಳ 29ರವರೆಗೆ ಮಹಾಬಲಿಪುರಂನಲ್ಲಿ ಚಿತ್ರೀಕರಣ ನಡೆಯಲಿದ್ದು, ಬಳಿಕ ಬ್ರೇಕ್​ ಪಡೆದು ನಂತರ ಪಾಂಡಿಚೆರಿಯಲ್ಲಿ ಶೂಟಿಂಗ್​ ನಡೆಯಲಿದೆ. ಚಿತ್ರಕ್ಕಾಗಿ ಪ್ರತಿದಿನ ವಕೌರ್ಟ್​ ಮಾಡಿ ಮೊದಲಿಗಿಂತ ಹೆಚ್ಚು ಫಿಟ್​ ಆಗಿದ್ದೇನೆ' ಎಂದಿದ್ದರು.

ಇದೀಗ ಕಿಚ್ಚ ಸುದೀಪ್​ ಸಿಕ್ಸ್​ ಪ್ಯಾಕ್​ ಸಿದ್ಧತೆ ಮಾಡಿಕೊಳ್ಳುತ್ತಿರುವ ಫೋಟೋ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಜತೆಗೆ, "ವರ್ಕೌಟ್​ ಈಗ ನನ್ನ ಹೊಸ ಸಂತೋಷದ ಸ್ಥಳ. ಇದು ನನ್ನನ್ನು ಹೆಚ್ಚು ಶಾಂತ ಹಾಗೂ ಫೋಕಸ್​ ಆಗಿರಲು ನೆರವಾಗಿದೆ. ನನ್ನ 46ನೇ ಸಿನಿಮಾದ ಕ್ಲೆಮಾಕ್ಸ್​ ಫೈಟ್​ ಸನ್ನಿವೇಶದ ಚಿತ್ರೀಕರಣಕ್ಕೆ ಇನ್ನೇನು ಒಂದು ತಿಂಗಳು ಇರಬಹುದು. ಸಾಕಷ್ಟು ತಯಾರಿ ಬೇಕಿದೆ' ಎಂದು ಬರೆದುಕೊಂಡಿದ್ದಾರೆ.

ಒಂದಾದ ಕಿಚ್ಚ, ದರ್ಶನ್​?
ನಟ ಸುದೀಪ್​ ಹಾಗೂ ದರ್ಶನ್​ ನಡುವೆ ಮೂಡಿದ್ದ ಬಿರುಕು, ಮನಸ್ತಾಪಕ್ಕೆ ಈಗ ಬ್ರೇಕ್​ ಬಿದ್ದಿದೆ ಎನ್ನಲಾಗಿದೆ. ಕಳೆದ ಹಲವು ವರ್ಷಗಳಿಂದ ಯಾವುದೇ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳದ ದರ್ಶನ್​ ಮತ್ತು ಸುದೀಪ್​ ಇತ್ತೀಚೆಗೆ ನಡೆದ ರ್ಬತ್​ಡೇ ಪಾರ್ಟಿಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಒಂದೇ ವೇದಿಕೆಯಲ್ಲಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸ್ಟಾರ್​ ನಟರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಈ ಇಬ್ಬರ ಕಾಂಬಿನೇಷನ್​ನಲ್ಲಿ ಒಂದು ಪ್ಯಾನ್​ ಇಂಡಿಯಾ ಸಿನಿಮಾ ಕೂಡ ಮೂಡಿಬರುವ ಸಾಧ್ಯತೆಯಿದೆ ಎಂಬ ಸುದ್ದಿಯೂ ಹಬ್ಬಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net