'ಭೀಮ್ಲಾ ನಾಯಕ್' ಚಿತ್ರವನ್ನು ಸುದೀಪ್ ಅದರ ಕಥೆಯ ಕಾರಣಕ್ಕೆ ಕೈಬಿಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಲ್ಲದೇ, 'ಭೀಮ್ಲಾ ನಾಯಕ್' ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿಯೇ ಸುದೀಪ್ 'ವಿಕ್ರಾಂತ್ ರೋಣ' ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದರು. ಜೊತೆಗೆ, ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಸಹ ತೊಡಗಿಸಿಕೊಂಡಿದ್ದರು. ಇನ್ನು, ಸದ್ಯ 'ಭೀಮ್ಲಾ ನಾಯಕ್' ಟ್ರೈಲರ್ ಕಂಡ ಕಿಚ್ಚ ಸುದೀಪ್ ಅಭಿಮಾನಿಗಳು ಸುದೀಪ್ 'ಭೀಮ್ಲಾ ನಾಯಕ್' ಚಿತ್ರವನ್ನು ಒಪ್ಪಿಕೊಂಡಿದ್ದಿದ್ದರೆ ಸುದೀಪ್ರ ಹೀರೋ ಇಮೇಜಿಗೆ ಧಕ್ಕೆ ಆಗುವ ಸಾಧ್ಯತೆ ಇತ್ತು ಎಂಬ ಭಾವನೆಯಲ್ಲಿದ್ದಾರೆ. ಹಾಗಾಗಿ, ಟ್ರೈಲರ್ ನೋಡಿದ ಸುದೀಪ್ ಅಭಿಮಾನಿಗಳು, ನಟ ರಾಣಾ ಅವರ ಪಾತ್ರ ಕಂಡು ಆ ಸಿನಿಮಾದಲ್ಲಿ, ಅದರಲ್ಲಿಯೂ ರಾಣಾ ಪಾತ್ರದಲ್ಲಿ ಕಿಚ್ಚ ನಟಿಸದಿರುವುದು ಒಳ್ಳೆಯದಾಯಿತು ಎಂದುಕೊಳ್ಳುತ್ತಿದ್ದಾರೆ. ಭೀಮ್ಲಾ ನಾಯಕ್' ಸಿನಿಮಾ ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್ ಆಗಿದ್ದು, ಒಬ್ಬ ಪೊಲೀಸ್ ಅಧಿಕಾರಿ ಹಾಗೂ ಒಬ್ಬ ಮಾಜಿ ಸೈನಿಕನ ನಡುವೆ ನಡೆವ ಕದನದ ಕಥೆಯಾಗಿದೆ.