ಯೂಟ್ಯೂಬ್ನಲ್ಲಿ ಫೆನ್ರವರಿ 14 ರಿಂದ ಒಂದು ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದುವೇ, 'ಬೀಸ್ಟ್' ಚಿತ್ರದ 'ಅರೇಬಿಕ್ ಕುತ್ತು' ಸಾಂಗ್. ಈ ಚಿತ್ರದಲ್ಲಿ ದಳಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ಜೋಡಿ ಸಖತ್ ಕಮಾಲ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ, ಉದಾಹರಣೆ ಈ ಹಾಡು ಎಂದು ಹೇಳಬಹುದು. ಗಿಬ್ಬಿಶ್ ಸಾಹಿತ್ಯವನ್ನು ಒಳಗೊಂಡಿರುವ ಈ ಹಾಡುಗೆ ಕೇವಲ 8 ದಿನಗಳಲ್ಲಿ 75 ಮಿಲಿಯನ್ ವೀಕ್ಷಣೆಗಳು ಲಭಿಸಿದ್ದು, ವಿಜಯ್ ಅಭಿಮಾನಿಗಳ ನಿದ್ದೆಗೆಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರೂ ಈ ಹಾಡಿಗೆ ಬೇರೆ ಸೆಲೆಬ್ರಿಟಿಗಳು, ಜನರು ಮಾಡಿರುವ ರೀಲ್ಸ್ ವಿಡಿಯೋಗಳೇ ಕಂಡುಬರುತ್ತವೆ.