ಕನ್ನಡ್​ ಅಲ್ಲ.. ಕನ್ನಡ; ಅಭಿನಯ ಚಕ್ರವರ್ತಿ ಸುದೀಪ್​ ಪಾಠ ಮಾಡಿದ್ದು ಯಾರಿಗೆ?

Untitled-design-2024-09-16T193116.992
Published on

ದುಬೈ: ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್​​ ಅಮೋಘ ಅಭಿನಯದ ಮೂಲಕ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಎಲ್ಲೆ ಹೋದರು ಕಿಚ್ಚ ಸುದೀಪ್​ ಎಂದು ಗುರುತಿಸುವವರು ಇದ್ದೇ ಇರುತ್ತಾರೆ. ಇವರ ಲುಕ್​, ಬೇಸ್​​ ವಾಯ್ಸ್​​​, ಖದರ್​ ನೋಡುಗರನ್ನು ಆಕರ್ಷಿಸುವುದರಲ್ಲಿ ಡೌಟೇ ಇಲ್ಲ. ಯಾವುದೇ ಇಂಡಸ್ಟ್ರಿಗೆ ಹೋದರು ಸುದೀಪ್​ ಅವರಿಗೆ ಗೆಳಯರ ಬಳಗ ಏನು ಕಡಿಮೆ ಇಲ್ಲ.

ಪ್ರತಿ ವರ್ಷದಂತೆ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) ಪ್ರದಾನ ಕಾರ್ಯಕ್ರಮ ದುಬೈನಲ್ಲಿ ನಡೆದಿದ್ದು ಎಲ್ಲರಿಗೂ ಗೊತ್ತಿದೆ. ಮೊದಲ ದಿನವೇ ಕನ್ನಡ ಹಾಗೂ ತೆಲುಗು ಚಿತ್ರರಂಗಕ್ಕೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ಪ್ರಮುಖ ನಟ,ನಟಿಯರ ದಂಡು ಸೇರಿತ್ತು. ಇನ್ನು ಈ ಸಮಾರಂಭದಲ್ಲಿ ನಟ ಸುದೀಪ್​ ಕೂಡ ಪಾಲ್ಗೊಂಡಿದ್ದರು.

ಸೈಮಾದಲ್ಲಿ ಕಾರ್ಯಕ್ರಮದಲ್ಲಿ ಸಿಸಿಎಲ್​ (ಸೆಲಿಬ್ರಿಟಿ ಕ್ರಿಕೆಟ್​ ಲೀಗ್​) ವಿಚಾರವಾಗಿ ವೇದಿಕೆಯಲ್ಲಿದ್ದ ಸುದೀಪ್​ ಕನ್ನಡದ ಪಾಠ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ವೈರಲ್​ ವಿಡಿಯೋದಲ್ಲಿ ಸುದೀಪ್​​ ಅಲ್ಲಿದ್ದವರಿಗೆ ಅದು ಕನ್ನಡ್​ ಅಲ್ಲ ಕನ್ನಡ ಎಂದು ಹೇಳಿಕೊಟ್ಟಿದ್ದಾರೆ. ಮುಂಬೈನವರು ಕನ್ನಡ್​ ಎಂದು ಹೇಳಿದರೆ ಅದನ್ನು ನಾನು ಅರ್ಥಮಾಡಕೊಳ್ಳುತ್ತೇನೆ. ಆದರೆ ನೀವು ಹೈದರಾಬಾದ್​ನವರಾಗಿ ಕನ್ನಡ್​ ಎಂದರೆ ಸರಿಹೋಗುವುದಿಲ್ಲ (ಇಟ್ಸ್​​​ ನಾಟ್​ ಓಕೆ) ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆತ ಸಾರಿ ಅಣ್ಣಾ.. ಕನ್ನಡ ಎಂದು ಹೇಳಿದ್ದಾರೆ.

ಸುದೀಪ್​ ಅವರು ‘ಮ್ಯಾಕ್ಸ್’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಯುಕ್ತ ಹೊರನಾಡು, ಸುಕೃತಾ ವಾಗ್ಲೆ, ವರಲಕ್ಷ್ಮಿ ಶರತ್​ಕುಮಾರ್​, ಪ್ರಮೋದ್​ ಶೆಟ್ಟಿ, ರವಿಶಂಕರ್​, ತೆಲುಗು ನಟ ಸುನೀಲ್​ ಪ್ರಮುಖ ತಾರಾಗಣದಲ್ಲಿದ್ದಾರ. ನಿರ್ದೇಶಕ ಅನೂಪ್ ಭಂಡಾರಿ ಅವರು ಬಿಲ್ಲ ರಂಗ ಬಾಷ ಸಿನಿಮಾದ ಚಿತ್ರೀಕರಣವೂ ಸದ್ಯದಲ್ಲೇ ಆರಂಭವಾಗಲಿದೆ ಎನ್ನಲಾಗಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net