ಮಲಯಾಳಂನ 'ಉಯಿರ್'​ ಸಿನಿಮಾದಲ್ಲಿ ಕಿಚ್ಚ ಸುದೀಪ್​ ನಟನೆ?; ಟೀಸರ್​ನಲ್ಲಿನ ಫೋಟೋ ವೈರಲ್!..Kiccha Sudeep

Kiccha Sudeep upcoming film Uyir
Kiccha Sudeep upcoming film Uyir
Published on

ಪ್ರಮುಖ ಮುಖ್ಯಾಂಶಗಳು

  • ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದಾರಾ ಕಿಚ್ಚ ಸುದೀಪ್​?
  • ರೋಷನ್​ ಮ್ಯಾಥ್ಯೂ ನಟನೆಯ ಉಯಿರ್​ ಸಿನಿಮಾದಲ್ಲಿ ಸುದೀಪ್​, ಫೋಟೋ ವೈರಲ್​
  • ಸುದೀಪ್​ ಮಾಲಿವುಡ್​ನಲ್ಲಿ ನಟಿಸಿದ್ದಾರಾ ಎನ್ನುವ ಬಗ್ಗೆ ಇನ್ನೂ ಯಾವುದೇ ನಿಖರ ಮಾಹಿತಿ ಹೊರಬಿದ್ದಿಲ್ಲ
Kiccha Sudeep upcoming film Uyir​: ಮಾರ್ಕ್​​ ಬಳಿಕ ಸಿನಿಮಾಗಳ ಅಪಡೇಟ್​ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದ ಫ್ಯಾನ್ಸ್​ಗೆ ಕಿಚ್ಚ ಸುದೀಪ್​ ಇತ್ತೀಚೆಗೆ ಸಿಹಿಸುದ್ದಿಯೊಂದನ್ನು ಕೊಟ್ಟಿದ್ದರು. ಎಕ್ಸ್​ನಲ್ಲಿ ಬಿಲ್ಲ ರಂಗ ಭಾಷಾ ಸಿನಿಮಾ ಶೂಟಿಂಗ್​ ಶುರುವಾಗಲಿದೆ ಎಂದು ಪೋಸ್ಟ್​ ಹಂಚಿಕೊಂಡಿದ್ದರು. ಕೆಲವು ಸ್ಕ್ರಿಪ್ಟ್​ ಕೇಳಿದ್ದಾರೆ ಎನ್ನುವ ಮಾಹಿತಿಯೂ ಇದೆ. ಆದರೆ, ಸದ್ಯ ಕನ್ನಡ ಸಿನಿ ಪ್ರೇಮಿಗಳಲ್ಲಿ ಮೂಡಿರುವ ಗೊಂದಲ ಎಂದರೆ, ಬ್ಯುಸಿ ಶೆಡ್ಯೂಲ್​ ಮಧ್ಯೆಯೂ ಮಾಲಿವುಡ್​ ಸಿನಿಮಾದಲ್ಲಿ ನಟಿಸಿದ್ದು ಯಾವಾಗ ಎಂದು?.

ಉಯಿರ್​ನಲ್ಲಿ ನಟನೆ?

ಹೌದು, ಇತ್ತೀಚೆಗೆ 'ಉಯಿರ್​' ಎನ್ನುವ ಮಲಯಾಳಂ ಸಿನಿಮಾದ ಟೀಸರ್​ ರಿಲೀಸ್​ ಆಗಿತ್ತು. ಇದು ಸಸ್ಪೆನ್ಸ್​ ಥ್ರಿಲ್ಲರ್​ ಕ್ರೈಂ ಸಿನಿಮಾವಾಗಿದೆ. ಟೀಸರ್​ನ ಕೊನೆ ಹಂತದಲ್ಲಿ ಕಿಚ್ಚ ಸುದೀಪ ಅವರು ಕುಟುಂಬದೊಂದಿಗೆ ಇರುವ ಪಟವು ಪೊಲೀಸರ ಕೈಯಲ್ಲಿ ಕಾಣಿಸಿಕೊಳ್ಳುತ್ತದೆ. ಉಯಿರ್ ಸಿನಿಮಾದ ಟೀಸರ್​​ ಕಂಡ ಅಭಿಮಾನಿಗಳು ಫೋಟೋಗಳನ್ನು ಸ್ಕ್ರೀನ್​ ಶಾಟ್​ ತೆಗೆದು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ಸಮಯ ಎಲ್ಲಿತ್ತು ಇವರಿಗೆ ಎನ್ನುವ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಗೊಂದಲಕ್ಕೆ ತೆರೆ ಎಂದು?

ಇನ್ನೂ ಕೆಲವರು ಕಿಚ್ಚ ಸುದೀಪ ಅವರು ಮಲಯಾಳಂ ಸಿನಿಮಾದಲ್ಲಿ ನಿಜಕ್ಕೂ ನಟಿಸಿದ್ದಾರಾ ಎಂದರೆ. ಕಿಚ್ಚನ ತಾಕತ್ತು ಮಲಯಾಳಂನವರಿಗೂ ಗೊತ್ತು ಎಂದು ಕೊಂಡಾಡುತ್ತಾ ಕಾಮೆಂಟ್​ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್​ ಅವರು ತೆಲುಗು, ತಮಿಳು ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಲಿವುಡ್​ನಲ್ಲೂ ನಟಿಸಬೇಕಿತ್ತು ಕಾರಣಾಂತರದಿಂದ ಆ ಸಿನಿಮಾ ಸೆಟ್ಟೇರಿಲ್ಲ.

ರಿಲೀಸ್​​ ಯಾವಾಗ?

ವಾಸ್ತವಂ, ವರ್ಗಂ ಸೇರಿದಂತೆ ಹಲವು ಸಿನಿಮಾಗಳನ್ನು ಮಾಲಿವುಡ್​ಗೆ ಕೊಟ್ಟಿರುವ ಎಂ. ಪದ್ಮಕುಮಾರ್​ ಅವರು ಉಯಿರ್ ನಿರ್ದೇಶಕರು. ಇದು​ ಜೂನ್ 26ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಸಸ್ಪೆನ್ಸ್ ಇನ್ವೆಸ್ಟಿಗೇಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ರೋಷನ್ ಮ್ಯಾಥ್ಯೂ ಎಸ್‌ಐ ಅಜೀಬ್ ಪಾತ್ರದಲ್ಲಿ ನಟಿಸಿದ್ದಾರೆ. ಅವರು ನಿಜ ಜೀವನದ ಘಟನೆಗಳನ್ನು ಆಧರಿಸಿದ ನಿಗೂಢ ಪ್ರಕರಣವನ್ನು ತನಿಖೆ ಮಾಡುವ ಪ್ರೊಬೇಷನರಿ ಪೊಲೀಸ್ ಅಧಿಕಾರಿ. ಈ ಚಿತ್ರದಲ್ಲಿ ಬೈಜು ಸಂತೋಷ್, ವಿನೀತ್ ಥಟ್ಟಿಲ್, ಶ್ರುತಿ ಮೆನನ್ ಮತ್ತು ದಿವ್ಯಾ ಎಂ. ನಾಯರ್ ಸೇರಿದಂತೆ ಉತ್ತಮ ತಾರಾಗಣವಿದೆ.

ಮಾಲಿವುಡ್​ನಲ್ಲಿ ಸುದೀಪ್​ ನಟಿಸಿಲ್ಲ

ಈ ಟೀಸರ್​ನಲ್ಲಿ ಸುದೀಪ್​ ಕುಟುಂಬದೊಂದಿಗೆ ಇರುವ ಫೋಟೋ ಇದೆ. ಆದರೆ, ಸಿನಿಮಾದಲ್ಲಿ ಸುದೀಪ್​ ನಟಿಸುತ್ತಿಲ್ಲ. ಏಕೆಂದರೆ, ಪೊಲೀಸರು ತನಿಖೆ ನಡೆಸುತ್ತಿರುವ ವೇಳೆ ಕಾಣೆಯಾದ ಕುಟುಂಬದ ಒಬ್ಬ ವ್ಯಕ್ತಿ ಸುದೀಪ್​ ಅಭಿಮಾನಿ. ಆ ಕಾರಣದಿಂದ ತನಿಖೆ ವೇಳೆ ಪೊಲೀಸರಿಗೆ ಆ ಫೋಟೋ ದೊರಕುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಸದ್ಯ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆಗಳಿಗೆ ಒಂದು ಕಿಚ್ಚ ಸುದೀಪ ಅವರೇ ನೇರ ಉತ್ತರ ನೀಡಬೇಕು..ಇಲ್ಲದಿದ್ದರೆ ಸಿನಿಮಾ ರಿಲೀಸ್​ ಆಗುವವರೆಗೂ ಕಾಯಬೇಕಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net