ಇಂದು ಸುದೀಪ್ ಹುಟ್ಟುಹಬ್ಬ: ಸಂಜೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಲಿರುವ ಕಿಚ್ಚ

Kicha
Published on

ಬೆಂಗಳೂರು: ಇಂದು (ಸೆ. 2) ಸುದೀಪ್ ಹುಟ್ಟುಹಬ್ಬ. ಆದರೆ, ಈ ಬಾರಿ ಕರೊನಾ ಪ್ರಯುಕ್ತ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಮತ್ತು ಭೇಟಿಗೆ ಲಭ್ಯವಿರುವುದಿಲ್ಲ ಎಂದು ಅವರು ಈಗಾಗಲೇ ಸಂದೇಶ ರವಾನಿಸಿದ್ದಾರೆ. ಅಭಿಮಾನಿಗಳನ್ನು ವೈಯಕ್ತಿಕವಾಗಿ ಭೇಟಿಯಾಗುವ ಬದಲು, ಗುರುವಾರ ಸಂಜೆ ಸೋಷಿಯಲ್ ಮೀಡಿಯಾ ಮೂಲಕ ಲೈವ್ ಬರಲಿದ್ದಾರೆ. ಅಲ್ಲೇ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಬಾರಿಯ ವಿಶೇಷತೆಯೆಂದರೆ, ಇತ್ತೀಚೆಗಷ್ಟೇ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ, ಸುದೀಪ್​ಗೆ ಶುಭ ಕೋರಿರುವುದು. ಈ ಕುರಿತು ವಿಡಿಯೋ ಮಾಡಿರುವ ಚೋಪ್ರಾ, ಅದರಲ್ಲಿ ಸುದೀಪ್​ಗೆ ಶುಭಾಶಯ ಕೋರಿದ್ದಾರೆ. ಇದು ಕಿಚ್ಚನ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದ್ದು, ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ಚೋಪ್ರಾ ಚಿನ್ನದ ಪದಕ ಗೆದ್ದಾಗ ಅವರಿಗೆ ಶುಭಾಶಯ ಕೋರಿದ್ದ ಸುದೀಪ್, ಈ ಬಾರಿ ಧನ್ಯವಾದ ಸಲ್ಲಿಸಿದ್ದಾರೆ.

ಇನ್ನು, ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಬೆಳಗ್ಗೆ 11.05ಕ್ಕೆ ‘ವಿಕ್ರಾಂತ್ ರೋಣ’ ಚಿತ್ರದ ‘ಡೆಡ್​ವ್ಯಾನ್ಸ್ ಆಂಥಮ್ ಟೀಸರ್ ಬಿಡುಗಡೆಯಾಗುತ್ತಿದೆ. ಮಿಕ್ಕಂತೆ, ‘ಕೋಟಿಗೊಬ್ಬ 3’ ಚಿತ್ರದ ಶುಭಕೋರುವ ಪೋಸ್ಟರ್, ವೆಂಕಟ್ ಪ್ರಭು ನಿರ್ದೇಶಿಸಲಿರುವ ಹೊಸ ಚಿತ್ರದ ಘೋಷಣಾ ಪೋಸ್ಟರ್​ಗಳು ಸಹ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net