ಮಾಡೆಲಿಂಗ್ ಶೋಗೆ ಖುಷಿ ರಾಯಭಾರಿ; ಎನ್​ಎನ್ ಪ್ರೊಡಕ್ಷನ್ಸ್​ಗೆ ಸಾಥ್

NM Productions
Published on

ಬೆಂಗಳೂರು: ‘ದಿಯಾ’ ಸಿನಿಮಾ ಖ್ಯಾತಿಯ ಖುಷಿ ರವಿ ಸದ್ಯ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ‘ಸ್ಪೂಕಿ ಕಾಲೇಜ್’ ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆ ಆಗಿದೆ. ಹೀಗಿರುವಾಗಲೇ ಮಾಡೆಲಿಂಗ್​ನಲ್ಲಿಯೂ ಕಮಾಲ್ ಮಾಡಲು ಖುಷಿ ಸಜ್ಜಾಗಿದ್ದಾರೆ. ಹಾಗಂತ ಸಿನಿಮಾ ಬಿಟ್ಟು ಆ ಕಡೆ ನಡೆದರಾ ಎಂದಲ್ಲ. ಬದಲಿಗೆ ಎನ್​ಎನ್ ಪ್ರೊಡಕ್ಷನ್​ನ ಮಾಡೆಲಿಂಗ್ ಶೋ ರಾಯಭಾರಿಯಾಗಿದ್ದಾರೆ. ಆಗಸ್ಟ್​ನಲ್ಲಿ ದೆಹಲಿಯಲ್ಲಿ ‘ಮಿಸ್ಟರ್ ಆಂಡ್ ಮಿಸ್ ಇಂಡಿಯಾ 2021’ಕ್ಕೆ ಫಿನಾಲೆ ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ಈಗಾಗಲೇ ದೇಶಾದ್ಯಂತ ಆಡಿಷನ್ ಸಹ ಶುರುವಾಗಿದೆ. ನಿಶಾ ನರಸಪ್ಪ ಮತ್ತು ಹರ್ಷಿತಾ ಎನ್ ಎನ್ ಪ್ರೊಡಕ್ಷನ್ ಮಾಲೀಕರಾಗಿದ್ದಾರೆ.

ಈ ಶೋ ಬಗ್ಗೆ ಮಾಹಿತಿ ನೀಡುವ ನಿಶಾ, ‘ಈಗಾಗಲೇ ಜನವರಿಯಲ್ಲಿ ಒಂದು ಶೋ ಮುಗಿದಿದೆ. ಆಗಸ್ಟ್​ನಲ್ಲಿ ‘ಮಿಸ್ಟರ್ ಆಂಡ್ ಮಿಸ್ ಇಂಡಿಯಾ 2021’ ನಡೆಯಲಿದ್ದು, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿಯೂ ಆಡಿಷನ್ ಹಮ್ಮಿಕೊಂಡಿದ್ದೇವೆ. ಇದೀಗ ‘ದಿಯಾ’ ಸಿನಿಮಾದ ನಾಯಕಿ ಖುಷಿ ರವಿ ಇದೇ ಶೋಗೆ ರಾಯಭಾರಿ ಆಗಿದ್ದಾರೆ. ವೇದಿಕೆ ಮೇಲೆ ಅವರೂ ಸಹ ರ‍್ಯಾಂಪ್ ವಾಕ್ ಮಾಡಲಿದ್ದಾರೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net