ಲಾಕ್​ಡೌನ್​ ನಂತರ ಬಿಡುಗಡೆಯಾಗಲಿರುವ ಮೊದಲ ಚಿತ್ರ ಯಾವುದು?

Khaali Peeli - Final
Published on

ಮುಂಬೈ: ಅಕ್ಟೋಬರ್​ 15ರಿಂದ ಚಿತ್ರಪ್ರದರ್ಶನ ಶುರು ಮಾಡಬಹುದು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಈ ವಿಷಯವನ್ನು ಕೇಳಿ ಚಿತ್ರರಂಗದ ಮಂದಿ ಖುಷಿಯಾಗಿ ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

ಈಗಾಗಲೇ ರಾಮ್​ಗೋಪಾಲ್​ ವರ್ಮಾ ಅವರು ತಮ್ಮ 'ಕರೊನಾ ವೈರಸ್​' ಚಿತ್ರವನ್ನು ಅಕ್ಟೋಬರ್​ 15ಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಕರೊನಾ ಕಾಲಾದಲ್ಲಿ ಮಾಡಿದ ಕರೊನಾ ಕುರಿತು ಚಿತ್ರವನ್ನು, ಕರೊನೋತ್ತರ ಕಾಲದಲ್ಲಿ ಬಿಡುಗಡೆ ಮಾಡುವುದಾಗಿ ಸುದ್ದಿ ಮಾಡಿದ್ದಾರೆ.

ವರ್ಮಾ ಮೊದಲ ದಿನ ಹೀಗೆ ಹೇಳಿದ್ದೇನೋ ಆಯ್ತು. ಆದರೆ, ಈಗ ಚಿತ್ರದ ಬಿಡುಗಡೆಯ ಬಗ್ಗೆ ಅವರು ಮಾತನಾಡುತ್ತಲೇ ಇಲ್ಲ. ಬಹುಶಃ ಚಿತ್ರ ಬಿಡುಗಡೆ ಮಾಡಿದರೆ ಜನ ಚಿತ್ರಮಂದಿರಕ್ಕೆ ಬರುತ್ತಾರೋ, ಇಲ್ಲೋವೋ ಎಂಬ ಭಯದಿಂದ ಅವರು ಸುಮ್ಮನಾಗಿದ್ದಾರಾ ಎಂಬ ಪ್ರಶ್ನೆಯು ಎಲ್ಲರನ್ನೂ ಕಾಡುತ್ತಿದೆ.

ಹೀಗಿರುವಾಗಲೇ, ಇಷಾನ್​ ಖಟ್ಟರ್​​ ಮತ್ತು ಅನನ್ಯಾ ಪಾಂಡೆ ಅಭಿನಯದ 'ಖಾಲಿ ಪೀಲಿ' ಚಿತ್ರವು ಅಕ್ಟೋಬರ್​ 15ಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಲಾಕ್​ಡೌನ್​ ನಂತರ ಬಿಡುಗಡೆಯಾಗಲಿರುವ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಈ ಚಿತ್ರ ಪಾತ್ರವಾಗುವ ಸಾಧ್ಯತೆ ಇದೆ.

'ಖಾಲಿ ಪೀಲಿ' ಚಿತ್ರ ಈಗಾಗಲೇ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಜೀ ಪ್ಲೆಕ್ಸ್​ನಲ್ಲಿ ಅಕ್ಟೋಬರ್​ 2ರಂದು ಈ ಚಿತ್ರ ಬಿಡುಗಡೆಯಾಗಿದ್ದು, ಇದೀಗ ಅಕ್ಟೋಬರ್​ 16ರಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದಲ್ಲದೆ ವಿಜಯ್​ ಸೇತುಪತಿ ಮತ್ತು ಐಶ್ವರ್ಯಾ ರಾಜೇಶ್​ ಅಭಿನಯದ ತಮಿಳು ಚಿತ್ರ 'ಕಾ ಪೇ ರಣಸಿಂಗಂ' ಸಹ ಅಕ್ಟೋಬರ್​ 16ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net