'ಕೆಜಿಎಫ್' ಮತ್ತು 'ಕೆಜಿಎಫ್-2' ಸಿನಿಮಾಗೆ ಮತ್ತು ದಾಖಲೆಗಳಿಗೂ ಅದೇನೋ ನಂಟು ಅನಿಸುತ್ತೆ. ಹೌದು, 'ಕೆಜಿಎಫ್-2' ಸಿನಿಮಾದ ಮಾಹಿತಿಗಳಿಗೂ ಹೊಸ ದಾಖಲೆಗಳನ್ನು ಬರೆಯುವ ಶಕ್ತಿ ಇದೆ ಎಂದೇ ಹೇಳಬೇಕು. ಈಗಾಗಲೇ, 'ಕೆಜಿಎಫ್-2' ಸಿನಿಮಾದ ಟೀಸರ್ ಮತ್ತು ಹಾಡುಗಳು ಹಲವು ಹೊಸ ದಾಖಲೆಗಳನ್ನು ಬರೆದಿದ್ದು, ಹಲವು ದಾಖಲೆಗಳನ್ನು ಮುರಿದಿವೆ. ಇನ್ನು, ಮಾರ್ಚ್ 27 ರಂದು ರೀಲಿಸ್ ಆದ 'ಕೆಜಿಎಫ್ 2' ಟ್ರೈಲರ್ ಕೇವಲ 24 ಗಂಟೆಗಳಲ್ಲಿ 100 ಮಿಲಿಯನ್ ವೀಕ್ಷಣೆ ಪಡೆದು ಹೊಸ ದಾಖಲೆ ಸೃಷ್ಟಿಸಿತು. ಹೌದು, ಕನ್ನಡ ಸೇರಿದಂತೆ ಟ್ರೈಲರ್ ರಿಲೀಸ್ ಆದ ಬೇರೆ ನಾಲ್ಕು ಭಾಷೆಗಳಲ್ಲಿ 24 ಗಂಟೆಗಳಲ್ಲಿಯೇ 100 ಮಿಲಿಯನ್ ವೀವ್ಸ್ ಪಡೆದಿದೆ.