

ಬೆಂಗಳೂರು: ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ಅಭಿನಯಿಸಲು ಬಾಲಿವುಡ್ ಬೆಡಗಿ ರವೀನಾ ಟಂಡನ್ ಕೆಲವು ದಿನಗಳ ಹಿಂದೆ ಚಿತ್ರತಂಡವನ್ನು ಸೇರಿಕೊಂಡಿದ್ದು ಈಗಾಗಲೇ ಗೊತ್ತಿರುವಂಥದ್ದೇ. ಇದೀಗ ಅವರು ಶೂಟಿಂಗ್ ಸ್ಪಾಟ್ನಿಂದ ಔಟ್ ಆಗಿದ್ದಾರೆ. ಅಂದರೆ ತಮ್ಮ ಪಾತ್ರಕ್ಕೆ ಸಂಬಂಧಿಸಿದ ದೃಶ್ಯಗಳ ಚಿತ್ರೀಕರಣ ಮುಗಿಸಿ ನಿರ್ಗಮಿಸಿದ್ದಾರೆ.
ಶೂಟಿಂಗ್ನಲ್ಲಿನ ಸಂತೋಷದ ಕ್ಷಣಗಳ ನೆನಪಿಗಾಗಿ ‘ಕೆಜಿಎಫ್’ ಚಿತ್ರತಂಡದ ಜತೆಗೆ ಗ್ರೂಪ್ ಫೋಟೋ ತೆಗೆಸಿಕೊಂಡಿರುವ ಅವರು ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕೂಡ ಹಂಚಿಕೊಂಡಿದ್ದಾರೆ.
ವಿಜಯ್ ಕಿರಗಂದೂರು ನಿರ್ವಣ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಯಶ್ ನಾಯಕರಾಗಿ ಅಭಿನಯಿಸುತ್ತಿದ್ದು, ಅವರಿಗೆ ಜೋಡಿಯಾಗಿ ನಾಯಕಿ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದಾರೆ. ಜತೆಗೆ ಬಾಲಿವುಡ್ನ ಸಂಜಯ್ ದತ್ ಕೂಡ ಈ ಚಿತ್ರದಲ್ಲಿದ್ದಾರೆ. ಇದರಲ್ಲಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಕಾಣಿಸಿಕೊಳ್ಳಲಿದ್ದಾರೆ.
1999ರಲ್ಲಿ ಉಪೇಂದ್ರ ನಿರ್ದೇಶನದ ‘ಉಪೇಂದ್ರ’ ಸಿನಿಮಾ ಮೂಲಕ ರವೀನಾ ಸ್ಯಾಂಡಲ್ವುಡ್ಗೆ ಪ್ರವೇಶ ಮಾಡಿದ್ದ ರವೀನಾ ಟಂಡನ್, ಎರಡು ದಶಕದ ಬಳಿಕ ‘ಕೆಜಿಎಫ್: ಚಾಪ್ಟರ್ 2’ ಮೂಲಕ ಕಮ್್ಯಾಕ್ ಮಾಡಿದ್ದಾರೆ.