ಬಾಲಿವುಡ್​ ಹಿಂದಿಕ್ಕಿದ ಕೆಜಿಎಫ್​ 2: ಈಗ ಮಾಡಿರುವ ದಾಖಲೆ ಏನು ಗೊತ್ತಾ?

yash
Published on

ಮುಂಬೈ: ಭಾರತೀಯ ಚಿತ್ರರಂಗದಲ್ಲೇ ಕೆಜಿಎಫ್​ 2 ಮಾಡಿರದ ದಾಖಲೆಗಳಿಲ್ಲ ಎಂಬಂತಾಗಿದೆ. ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಿತ್ರ ಭರ್ಜರಿ ಪ್ರದರ್ಶನವನ್ನು ಮುಂದುವರಿಸಿದೆ.

ಬಿಡುಗಡೆಯಾಗಿ 20 ದಿನಗಳ ಬಳಿಕವೂ ದಾಖಲೆ ಬರೆಯುತ್ತಲೇ ಇರುವ ಕೆಜಿಎಫ್​2 ಹಿಂದಿ ಆವೃತ್ತಿಯಲ್ಲೇ 400 ಕೋಟಿ ರೂ.ಗಳಿಸುವ ಮೂಲಕ ಸದ್ಯ ದಂಗಲ್​ ಸಿನಿಮಾವನ್ನು ಹಿಂದಿಕ್ಕಿ 2ನೇ ಸ್ಥಾನ ಅಲಂಕರಿಸಿದೆ.

ಕೆಜಿಎಫ್​ 2 ಹಿಂದಿ ಆವೃತ್ತಿಯಲ್ಲಿ 400 ಕೋಟಿ ಗಳಿಕೆ ಕಾಣುವ ಮೂಲಕ ಅತಿ ಹೆಚ್ಚು ಗಳಿಕೆ ಕಂಡಿದ್ದ, ಅಮಿರ್​​ ಖಾನ್​ ನಟನೆಯ ದಂಗಲ್​ ಸಿನಿಮಾವನ್ನು ಹಿಂದಿಕ್ಕಿದೆ ಎಂದು ಸಿನಿಮಾ ವಿಶ್ಲೇಷಕರು ತಿಳಿಸಿದ್ದಾರೆ.

ಸದ್ಯ ಬಾಹುಬಲಿ ನಂತರದ ಸ್ಥಾನ ಪಡೆದುಕೊಂಡಿರುವ ಕೆಜಿಎಫ್​​ ಬಿಡುಗಡೆಯಾದ 15 ದಿನದಲ್ಲೇ ಸಾವಿರ ಕೋಟಿ ರೂ. ಗಳಿಕೆ ಕಾಣುವ ಮೂಲಕ ದಾಖಲೆ ಸೃಷ್ಟಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net