More

    ಗೋವಾದಲ್ಲಿ ಯಶ್​: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಕಿಂಗ್​ ಸ್ಟಾರ್​? ಜ್ಯೋತಿಷಿ ಭವಿಷ್ಯ ನಿಜವಾಗುತ್ತಾ?

    ಬೆಂಗಳೂರು: ಕೆಜಿಎಫ್​-2 ಚಿತ್ರದ ಭರ್ಜರಿ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್​ ಯಶ್​ ಮತ್ತೆ ಸುದ್ದಿಯಲ್ಲಿದ್ದಾರೆ. ಹಲವಾರು ಹಿಟ್​ ಚಿತ್ರಗಳನ್ನು ನೀಡಿರುವ ಈ ನಟ, ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಗುಸುಗುಸು ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಯಶ್​ ದಂಪತಿ ಗೋವಾಕ್ಕೆ ಭೇಟಿ ಕೊಟ್ಟ ಬಳಿಕ ಆಗಿರುವ ಬೆಳವಣಿಗೆ ಹಾಗೂ ಈಚೆಗೆ ಜ್ಯೋತಿಷಿ ನುಡಿದಿರುವ ಭವಿಷ್ಯ!

    ಯಶ್​ ಮತ್ತು ರಾಧಿಕಾ ಗೋವಾಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಭೇಟಿಯಾಗಿದ್ದಾರೆ. ಬಾಗಲಕೋಟ್ ಯಶಿಸಂ ಎನ್ನುವ ಇನ್​ಸ್ಟಾಗ್ರಾಂ ಪೇಜ್ ಈ ಭೇಟಿಯ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದೆ. ಇದಕ್ಕೆ ‘ಯಶ್ ಬಾಸ್ ಗೋವಾ ಸಿಎಂ ಪ್ರಮೋದ್​ ಸಾವಂತ್ ಹಾಗೂ ಕೆವಿಎನ್ ಪ್ರೊಡಕ್ಷನ್ ಜೊತೆ ಪಣಜಿಯಲ್ಲಿ’ ಎಂದು ಶೀರ್ಷಿಕೆ ಕೊಡಲಾಗಿದೆ. ಇದು ಯಶ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ಮುನ್ಸೂಚನೆ ಎಂದೇ ಬಣ್ಣಿಸಲಾಗುತ್ತಿದೆ.

    ಗೋವಾದಲ್ಲಿ ಯಶ್​: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಕಿಂಗ್​ ಸ್ಟಾರ್​? ಜ್ಯೋತಿಷಿ ಭವಿಷ್ಯ ನಿಜವಾಗುತ್ತಾ?

    ಇದಕ್ಕೆ ಕಾರಣವೂ ಇದೆ. ಅದೇನೆಂದರೆ ಇತ್ತೀಚೆಗೆ ಬೆಂಗಳೂರಿನ ಜ್ಯೋತಿಷಿಯೊಬ್ಬರು ನುಡಿದಿರುವ ಭವಿಷ್ಯ. ದಶಕದ ನಂತರ ಯಶ್ ರಾಜಕೀಯಕ್ಕೆ ಬರುತ್ತಾರೆ ಎಂದು ಈ ಜ್ಯೋತಿಷಿ ನುಡಿದಿರುವುದು ಸುದ್ದಿಯಾಗಿದ್ದು, ಇದು ನಿಜವಾಗುತ್ತದೆ ಎಂದೇ ನಂಬಲಾಗಿದೆ. ಶಾರುಖ್​ ಖಾನ್​ ಅವರಂತೆ ಯಶ್​ ದೊಡ್ಡ ಸ್ಟಾರ್​ ಆಗುತ್ತಾರೆ ಎಂದು ಇದೇ ಜ್ಯೋತಿಷಿ ಹೇಳಿದ್ದರಂತೆ. ಕೆಜಿಎಫ್​-2 ಭಾರಿ ಸಂಚಲನ ಸೃಷ್ಟಿಸಿದ ನಂತರ ದೇಶಾದ್ಯಂತ ಯಶ್​ ಭಾರಿ ಜನಪ್ರಿಯತೆ ಪಡೆದುಕೊಂಡು ಈ ಮಾತು ನಿಜವಾಗಿರುವ ಕಾರಣ ರಾಜಕೀಯದ ಭವಿಷ್ಯವೂ ನಿಜವಾಗಲಿದೆಯೇ ಎಂಬ ಸಂದೇಹ ಅಭಿಮಾನಿಗಳಲ್ಲಿ ಮೂಡಿದೆ.

    ‘ಯಶೋಮಾರ್ಗ’ದ ಮೂಲಕ ಈಗಾಗಲೇ ಅವರು ಸಾಮಾಜಿಕ ಕೆಲಸ ಕೂಡ ಮಾಡಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಸಂದರ್ಶನದಲ್ಲಿ ಅವರು “ನನ್ನ ಗುರಿ ಬೇರೆಯೇ ಇದೆ” ಎಂದೂ ಹೇಳಿಕೊಂಡಿದ್ದು, ರಾಜಕೀಯದ ಎಂಟ್ರಿಯ ಬಗ್ಗೆ ಇನ್ನಷ್ಟು ಪುಷ್ಟಿ ನೀಡುತ್ತಿದೆ.

    ಶಾರುಖ್​ ನನ್ನನ್ನು ಎತ್ತಿಕೊಳ್ತಾರೆ ಎಂದು ಬರೀ ಕಡಲೆಕಾಯಿ ತಿಂದಿದ್ದೆ- ಗುಟ್ಟು ಬಿಚ್ಚಿಟ್ಟ ಟ್ವಿಂಕಲ್​ ಖನ್ನಾ

    ಕೋರ್ಟ್​ ಕಟಕಟೆಯಲ್ಲಿ ನೆಹರೂ, ಎಡ್ವಿನಾ ಲವ್​ ಸ್ಟೋರಿ: ಇಬ್ಬರ ನಡುವಿನ ಪತ್ರ ಬಹಿರಂಗಕ್ಕೆ ನಕಾರ

    ಮಸೀದಿ ಬಳಿ ಮೊಳಗಿತು ಹನುಮಾನ್​ ಚಾಲೀಸಾ! ಹೇಳಿದ್ದು ಕೇಳದಿದ್ದಕ್ಕೆ ಪಾಠವಂತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts