‘ಕೆಜಿಎಫ್​ ಚಾಪ್ಟರ್ 2’ ಖಳ ಸಂಜಯ್​ ದತ್​ ಲುಕ್​ ಬಹಿರಂಗ..

EeEUuiiU4AAOtUu
Published on

ಬೆಂಗಳೂರು: ಸಂಜಯ್​ ದತ್​ ಜನ್ಮದಿನದ ಪ್ರಯುಕ್ತ, ಕೆಜಿಎಫ್​ ಚಿತ್ರತಂಡದಿಂದ ಅವರ ಫಸ್ಟ್ ಲುಕ್​ ಉಡುಗೊರೆ ರೂಪದಲ್ಲಿ ಸಿಕ್ಕಿದೆ. ಈ ಮೊದಲು ಹೇಳಿಕೊಂಡಂತೆ ಕ್ರೌರ್ಯತೆಯ ಕರಾಳ ಮುಖವನ್ನು ಬಿಡುಗಡೆ ಮಾಡಿಕೊಳ್ಳುವಂತೆ ಚಿತ್ರತಂಡ ಹೇಳಿತ್ತು. ಅದರಂತೆ ಇದೀಗ ಚಿತ್ರದಲ್ಲಿನ ಸಂಜಯ್​ ದತ್​ ಅವರ ಲುಕ್​ ಬಹಿರಂಗವಾಗಿದೆ. ವಿಲನ್​ ಅವತಾರದಲ್ಲಿ ಹಿಂದೆಂದೂ ನೋಡದ ಸಂಜಯ್​ ಇದೀಗ ಕೆಜಿಎಫ್​ನಲ್ಲಿ ಎದುರಾಗಿದ್ದಾರೆ.

ಅಂದಹಾಗೆ, 29ಕ್ಕೆ ಟೀಸರ್ ರಿಲೀಸ್ ಆಗಬಹುದಾ ಅಥವಾ ಸಂಜಯ್ ದತ್ ಅವರ ಲುಕ್ ಬಿಡುಗಡೆ ಆಗಬಹುದಾ ಎಂಬ ಪ್ರಶ್ನೆ ಇದೆ. ಈ ವಿಷಯವಾಗಿ ಚಿತ್ರತಂಡ ಗೌಪ್ಯತೆ ಕಾಪಾಡಿಕೊಂಡಿತ್ತು. ಇದೀಗ ಫಸ್ಟ್​ ಲುಕ್​ ಮೂಲಕ ಸರ್ಪೈಸ್​ ನೀಡಿದೆ.

ಇನ್ನು ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ಅಭಿನಯದ ‘ಕೆಜಿಎಫ್ – ಚಾಪ್ಟರ್ 2’ ಸಿನಿಮಾ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡು, ಚಿತ್ರೀಕರಣೋತ್ತರ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಕರೊನಾ ಹಾವಳಿ ತಗ್ಗುತ್ತಿದ್ದಂತೆ ಬಾಕಿ ಉಳಿದ ಚಿತ್ರೀಕರಣ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದೆ.ಹೊಂಬಾಳೆ ಫಿಲಂಸ್ ಬ್ಯಾನರ್​ನಲ್ಲಿ ವಿಜಯಕುಮಾರ್ ಕಿರಗಂದೂರು ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net