ಧರ್ಮಸ್ಥಳದಲ್ಲಿ ಕೆಜಿಎಫ್ 2 ತಂಡ; ಕೊಲ್ಲೂರು, ಆನೆಗುಡ್ಡೆಗೂ ಭೇಟಿ

Yash
Published on

ಬೆಂಗಳೂರು: ಯಶ್ ಅಭಿನಯದ ‘ಕೆಜಿಎಫ್ 2’ ಚಿತ್ರವು ಏ. 14ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆಗೆ ಎರಡೂವರೆ ತಿಂಗಳಿದ್ದು, ಇನ್ನೇನು ಚಿತ್ರದ ಪ್ರಚಾರ ಕೆಲಸಗಳೂ ಸಹ ಶುರುವಾಗಲಿವೆ. ಈ ಮಧ್ಯೆ, ಯಶ್ ಮತ್ತು ಚಿತ್ರತಂಡವರು ಸೋಮವಾರ ಹಲವು ಧಾರ್ವಿುಕ ಕ್ಷೇತ್ರಗಳಿಗೆ ಭೇಟಿಕೊಟ್ಟಿದ್ದಾರೆ.

ಉಡುಪಿ ಜಿಲ್ಲೆಯ ಬಸ್ರೂರಿನಲ್ಲಿರುವ ಸಂಗೀತ ನಿರ್ದೇಶಕ ರವಿ ಬಸ್ರೂರು ಸ್ಟುಡಿಯೋಗೆೆ ‘ಕೆಜಿಎಫ್ 2’ ಚಿತ್ರತಂಡ ಭಾನುವಾರ ಭೇಟಿಕೊಟ್ಟಿದೆ. ಅಲ್ಲಿ ಚಿತ್ರದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ಚಿತ್ರತಂಡವು ಆ ಕೆಲಸಗಳನ್ನು ವೀಕ್ಷಿಸಿದೆ. ಬಿಡುವಿನ ವೇಳೆಯಲ್ಲಿ ಯಶ್ ಹಾಗೂ ತಂಡದವರು ಅಲ್ಲೇ ಕ್ರಿಕೆಟ್ ಸಹ ಆಡಿದ್ದಾರೆ. ಇನ್ನು, ಸೋಮವಾರ ಚಿತ್ರತಂಡದವರು ಧರ್ಮಸ್ಥಳ, ಕೊಲ್ಲೂರು, ಆನೆಗುಡ್ಡೆ ವಿನಾಯಕ ಸ್ವಾಮಿ ದೇವಸ್ಥಾನ ಮುಂತಾದ ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ ಕೊಟ್ಟು, ದೇವರ ದರ್ಶನ ಪಡೆದು ಮರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net