

ಮುಂಬೈ: ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಮಾರುಕಟ್ಟೆ ವಿಸ್ತಾರವಾಗಿ ಬೆಳೆದಿದೆ. ಇದಕ್ಕೆ ಉದಾಹರಣೆಯಾಗಿ ಆರ್ಆರ್ಆರ್ ದಾಖಲೆಯನ್ನೂ ಮೀರಿ ಕೆಜಿಎಫ್ 2 ಸಿನಿಮಾ ಬಿಡುಗಡೆಗೂ ಮುನ್ನವೇ 20 ಕೋಟಿ ರೂ. ಗಳಿಕೆ ಮಾಡಿದೆ.
ಇದು ಈ ಹಿಂದಿನ ಎಲ್ಲಾ ಸಿನಿಮಾ ಗಳಿಕೆಯನ್ನು ಮೀರಿದೆ. ಹಿಂದಿ ಭಾಷೆಯೊಂದರಲ್ಲೇ ಕೆಜಿಎಫ್ ಧೂಳೆಬ್ಬಿಸಿದೆ.
ಆರ್ಆರ್ಆರ್ ಚಿತ್ರ ಬಿಡುಗಡೆಗೂ ಮುನ್ನ 11 ಕೋಟಿ ರೂ. ಗಳಿಕೆ ಕಂಡಿತ್ತು. ಆದರೆ ಯಶ್ ನಟನೆಯ ಕೆಜಿಎಫ್ -2 ಈ ಹಿಂದಿನ ಎಲ್ಲಾ ದಾಖಲೆಯನ್ನು ಸರಿಗಟ್ಟಿದ್ದು, ಮುಂಬೈ, ಪುಣೆ ಹಾಗೂ ದೆಹಲಿಯಲ್ಲಿ 2000 ರೂ.ವರೆಗೆ ಟಿಕೆಟ್ ಮಾರಾಟವಾಗಿದೆ.