'ನಾನು ದೈವಭಕ್ತೆ, ಆದ್ರೆ ಸಾಂಪ್ರದಾಯಿಕ ಆಚರಣೆಗಳಿಗೆ ಸೀಮಿತವಾಗಿಲ್ಲ'; ಪಾಸಿಟಿವ್​ ಎನರ್ಜಿ ಬಗ್ಗೆ ಕೀರ್ತಿ ಸುರೇಶ್​​ ಹೇಳಿದ್ದಿಷ್ಟು..Keerthy Suresh

'ನಾನು ದೈವಭಕ್ತೆ, ಆದ್ರೆ ಸಾಂಪ್ರದಾಯಿಕ ಆಚರಣೆಗಳಿಗೆ ಸೀಮಿತವಾಗಿಲ್ಲ';  ಪಾಸಿಟಿವ್​ ಎನರ್ಜಿ ಬಗ್ಗೆ ಕೀರ್ತಿ ಸುರೇಶ್​​ ಹೇಳಿದ್ದಿಷ್ಟು..Keerthy Suresh
Published on: 
  • ಅಕ್ಕ ವೆಬ್​ಸರಣಿಯಲ್ಲಿ ಕೀರ್ತಿ ಸುರೇಶ್​ ಮತ್ತು ರಾಧಿಕಾ ಆಪ್ಟೆ ಮಿಂಚು.

  • ವೆಬ್​ ಸರಣಿಯಲ್ಲಿ ಪ್ರಚಾರ ಕಾರ್ಯದಲ್ಲಿ ಕೀರ್ತಿ ಸುರೇಶ್​ ಮತ್ತು ರಾಧಿಕಾ ಆಪ್ಟೆ.

  • ನಾನು ದೈವ ಭಕ್ತೆ ಹೆಚ್ಚು ದೇವರನ್ನು ನಂಬುತ್ತೇನೆ ಆದರೆ, ಸಂಪ್ರದಾಯಸ್ಥಳಲ್ಲ ಎಂದ ಕೀರ್ತಿ ಸುರೇಶ್.

  • ನಾನು ದೇವರನ್ನು ನಂಬಲ್ಲ...ದೇವರ ಮೂರ್ತಿಗಳ ಬದಲಾಗಿ ಪರಿಸರವನ್ನು ನಂಬಬೇಕು ಎಂದ ರಾಧಿಕಾ ಆಪ್ಟೆ.

Keerhy Suresh, Radhika Apte on God: ಸೌತ್​ ಇಂಡಿಯಾದ ಬಹು ಬೇಡಿಕೆಯ ನಟಿ ಕೀರ್ತಿ ಸುರೇಶ್​, 'ಡೊರೋಥಿ' ಸಿನಿಮಾ ನಂತರ ಸದ್ಯ ರಾಧಿಕಾ ಆಪ್ಟೆ ಜೊತೆಗೆ ನಟಿಸಿರುವ 'ಅಕ್ಕ' ಎನ್ನುವ ಕ್ರೈಂ ಥ್ರಿಲ್ಲರ್​ ವೆಬ್ ಸರಣಿ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಬ್ಬರು ಜಂಟಿಯಾಗಿ ಭಾಗವಹಿಸಿದ ಸಂದರ್ಶನದಲ್ಲಿ ದೇವರ ಮೇಲಿನ ನಂಬಿಕೆ ಬಗ್ಗೆ ಮಾತನಾಡಿರುವುದು ಸಾಕಷ್ಟ ಚರ್ಚೆಗೆ ಕಾರಣವಾಗಿದೆ.

ಕೀರ್ತಿ ಸುರೇಶ್​ ತಮ್ಮ 13 ವರ್ಷದ ಸಿನಿ ಜರ್ನಿಯಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಹಲವು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಟಾಲಿವುಡ್​ ಸೇರಿದಂತೆ ಹಲವು ಸಿನಿಮಾ ರಂಗಕ್ಕೆ ಇಂದಿಗೂ ಅವರು ಬಹು ಬೇಡಿಕೆಯ ನಟಿ. ಆದರೆ, ಅವರಿಗೆ ಹೆಚ್ಚು ಫೇಮ್​ ತಂದು ಕೊಟ್ಟಿದ್ದು 2018ರಲ್ಲಿ ರಿಲೀಸ್ ಆದ ಮಹಾನಟಿ ಸಿನಿಮಾ ಹಾಗೂ ಇತ್ತೀಚೆಗೆ ರಿಲೀಸ್ ಆದ ಡೊರೋಥಿ ಸಿನಿಮಾ.

ಏನಿದೆ ಸಂದರ್ಶನದಲ್ಲಿ?

ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ, ಕೀರ್ತಿ ಸುರೇಶ್ ತಾವು ಹೆಚ್ಚು ದೇವರನ್ನು ನಂಬುತ್ತೇನೆ ಎಂದು ಹೇಳಿಕೊಂಡಿರುವುದು ಹಾಗೂ ನಟಿ ರಾಧಿಕಾ ಆಪ್ಟೆ ದೇವರನ್ನು ನಂಬಲ್ಲ..ಪರಿಸರ ಎನ್ನುವ ಪವರ್​ ಅನ್ನು ನಂಬುತ್ತೇನೆ ಎಂದಿರುವುದು ಚರ್ಚೆಗೆ ಗ್ರಾಸವಾಗಿದೆ.

ನಿರೂಪಕಿಯೊಬ್ಬರು 'ನಿಮ್ಮನ್ನು ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿರುವ ಆ ಶಕ್ತಿ ಅಥವಾ ಉನ್ನತ ದೈವಿಕ ಶಕ್ತಿಯ ಮೇಲೆ ನಿಮಗೆ ನಂಬಿಕೆಯಿದೆಯೇ?' ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿ ಕೀರ್ತಿ ಸುರೇಶ್​ ಅವರು, 'ಹೌದು ನಾನು ದೇವರನ್ನು ನಂಬುತ್ತೇನೆ. ನಾನು ತುಂಬಾನೆ ಭಕ್ತಿ ಪರವಶಳು. ನಾನು ಯಾವುದೋ ಒಂದು ಶಕ್ತಿ ಇದೆ ಎಂದು ನಾನು ನಂಬುತ್ತೇನೆ. ನನಗೆ ಭಕ್ತಿ ಹೆಚ್ಚು, ಆದರೆ ನಾನು ಧಾರ್ಮಿಕ ಆಚರಣೆಗಳಿಗೆ ಅಥವಾ ಸಂಪ್ರದಾಯಗಳಿಗೆ ಸೀಮಿತವಾದವಳಲ್ಲ' ಎಂದು ಕೀರ್ತಿ ಸುರೇಶ್ ಹೇಳಿದರು.

ಪರಿಸರ ಎನ್ನುವ ಎನರ್ಜಿ ನಂಬ್ತೇನೆ

ರಾಧಿಕಾ ಆಪ್ಟೆ ಮಾತನಾಡಿ, 'ನನಗೆ ದೇವರ ಮೇಲೆ ನಂಬಿಕೆ ಇಲ್ಲ. ನಾನು ಪರಿಸರವನ್ನು ನಂಬುತ್ತೇನೆ. ಎಲ್ಲದಕ್ಕೂ ಹೆಚ್ಚು ಶಕ್ತಿ ಹೊಂದಿರುವುದು ಪರಿಸರ ಎನ್ನುವುದು ನನ್ನ ನಂಬಿಕೆ. ಕೆಲವರು ದೇವರ ಮೂರ್ತಿಗಳನ್ನು ಪೂಜಿಸುತ್ತಾರೆ. ಆದರೆ, ಜನರು ಪ್ರಕೃತಿಯನ್ನು ಪೂಜಿಸಬೇಕೆಂದು ನಾನು ಬಯಸುತ್ತೇನೆ' ಎಂದರು ನಟಿ.

Also Read
ಆತನೊಂದಿಗೆ ರೊಮ್ಯಾನ್ಸ್​ ಮಾಡುವುದು ಅಷ್ಟು ಸುಲಭವಿರಲಿಲ್ಲ: ಅಚ್ಚರಿ ಹೇಳಿಕೆ ನೀಡಿದ ಕೀರ್ತಿ ಸುರೇಶ್..! Keerthy Suresh
'ನಾನು ದೈವಭಕ್ತೆ, ಆದ್ರೆ ಸಾಂಪ್ರದಾಯಿಕ ಆಚರಣೆಗಳಿಗೆ ಸೀಮಿತವಾಗಿಲ್ಲ';  ಪಾಸಿಟಿವ್​ ಎನರ್ಜಿ ಬಗ್ಗೆ ಕೀರ್ತಿ ಸುರೇಶ್​​ ಹೇಳಿದ್ದಿಷ್ಟು..Keerthy Suresh

ಅಕ್ಕ ಸಿನಿಮಾ ಬಗ್ಗೆ

ಅ.30ರಂದು ರಿಲೀಸ್ ಆಗಲಿರುವ ಅಕ್ಕ ವೆಬ್​ಸರಣಿಯು ಕ್ರೈಂ ಥ್ರಿಲ್ಲರ್​, ಗ್ಯಾಂಗ್​ ಸ್ಟರ್​​ ಸಿನಿಮಾವಾಗಿದೆ. ಈ ಸರಣಿಯಲ್ಲಿ ಕೀರ್ತಿ ಸುರೇಶ್ ಅವರು ಭವಾನಿ ಪಾತ್ರದಲ್ಲಿ ನಟಿಸಿದ್ದರೆ, ರಾಧಿಕಾ ಆಪ್ಟೆ ರುದ್ರಾ ಪಾತ್ರದಲ್ಲಿ ಮಿಂಚಿದ್ದಾರೆ. ಸರಣಿಯಲ್ಲಿ ಇಬ್ಬರ ಡ್ರೆಸ್ಸಿಂಗ್​ ಸ್ಟೈಲ್​ಗಳು ಈಗಾಗಲೇ ಭಾರಿ ಸದ್ದು ಮಾಡುತ್ತಿದೆ. ಇದು ಹಿಂದಿ ಭಾಷೆಯಲ್ಲಿದ್ದು ದಕ್ಷಿಣ ಭಾರತದ ಹಿನ್ನಲೆಯನ್ನು ಹೊಂದಿದೆ.

1980ರ ಕಾಲದಲ್ಲಿ ದಕ್ಷಿಣ ಭಾರತದಲ್ಲಿದ್ದ ಪೆರ್ನೂರು ಎನ್ನುವ ಕಾಲ್ಪನಿಕ ನಗರವನ್ನು ಮಹಿಳೆಯರೇ 800 ದಶಕಗಳ ಕಾಲ ಆಳುತ್ತಿದ್ದರು. ಈ ಕ್ರೂರ ಆಡಳಿತದಿಂದ ಹೊರ ಬರುವ ಭವಾನಿ, ರುದ್ರಾ ಎಂಬ ಮಹಿಳೆಯ ಕ್ರೂರ ಆಡಳಿತಕ್ಕೆ ಸವಾಲು ಹಾಕಿ, ದ್ರೋಹ, ಅಧಿಕಾರದ ವಿರುದ್ಧ ಹೋರಾಡುವ ಸುತ್ತ ಕತೆಯನ್ನು ಕಟ್ಟಲಾಗಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net