ಮಿಮಿ ರಿಮೇಕ್​ನಲ್ಲಿ ನಟಿ ಕೀರ್ತಿ ಸುರೇಶ್; ಬಾಡಿಗೆತಾಯಿಯ ಪಾತ್ರ

Keerthy Suresh
Published on

ಟಾಲಿವುಡ್​ನಲ್ಲಿ ನಾಯಕಿ ಪ್ರಧಾನ ಸಿನಿಮಾಗಳ ಮೂಲಕವೇ ನಟಿ ಕೀರ್ತಿ ಸುರೇಶ್ ಗಮನಸೆಳೆಯುತ್ತಿದ್ದಾರೆ. ‘ಪೆಂಗ್ವಿನ್’, ‘ಮಿಸ್ ಇಂಡಿಯಾ’ ಸಿನಿಮಾಗಳಲ್ಲಿ ಈಗಾಗಲೇ ನಟಿಸಿ ಸೈ ಎನಿಸಿಕೊಂಡಿದ್ದಾರೆ. ‘ಗುಡ್ ಲಕ್ ಸಖಿ’ ಚಿತ್ರ ಇನ್ನೇನು ಬಿಡುಗಡೆ ಆಗಲಿದೆ. ಹೀಗಿರುವಾಗಲೇ ಮತ್ತೊಂದು ನಾಯಕಿ ಪ್ರಧಾನ ಸಿನಿಮಾದಲ್ಲಿ ಅವರು ನಟಿಸಲಿದ್ದಾರಂತೆ. ಅದೇ ‘ಮಿಮಿ’ ಚಿತ್ರದ ರಿಮೇಕ್! ಇತ್ತೀಚೆಗಷ್ಟೇ, ಬಾಲಿವುಡ್​ನಲ್ಲಿ ನಿರ್ವಣವಾಗಿದ್ದ ‘ಮಿಮಿ’ ಚಿತ್ರದಲ್ಲಿ ಕೃತಿ ಸನೋನ್ ಬಾಡಿಗೆ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡು ಮೋಡಿ ಮಾಡಿದ್ದರು. ನೇರವಾಗಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇದೀಗ ಈ ಚಿತ್ರವನ್ನೇ ತೆಲುಗಿನಲ್ಲಿ ರಿಮೇಕ್ ಮಾಡಲು ಪ್ಲಾನ್ ನಡೆಯುತ್ತಿದೆ. ಅಚ್ಚರಿಯ ವಿಚಾರ ಏನೆಂದರೆ, ಮೂಲ ಮರಾಠಿಯಲ್ಲಿ ತೆರೆಕಂಡಿದ್ದ ‘ಮಲ ಆಯಿ ವ್ಹಾಯಚಯ್’ ಸಿನಿಮಾ 2013ರಲ್ಲಿಯೇ ತೆಲುಗಿನಲ್ಲಿ ‘ವೆಲ್​ಕಮ್ ಒಬಾಮ’ ಹೆಸರಿನಲ್ಲಿ ಬಿಡುಗಡೆ ಆಗಿತ್ತು. ಆದರೆ, ಆ ಸಿನಿಮಾ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಇದೀಗ ಕೀರ್ತಿ ಅಭಿನಯದಲ್ಲಿ ಇನ್ನೊಮ್ಮೆ ಮೂಡಬರಲಿದೆ ಎನ್ನಲಾಗುತ್ತಿದೆ. ನಿರ್ದೇಶಕರು ಯಾರು, ನಿರ್ಮಾಣ ಸಂಸ್ಥೆ ಯಾವುದು ಎಂಬ ವಿಚಾರವೂ ಶೀಘ್ರದಲ್ಲಿ ಹೊರಬೀಳಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net